ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಅವರಿಂದ ಮಾಹಿತಿಗಾಗಿ ಸಾರ್ವಜನಿಕ ಪ್ರಕಟಣೆ

0
92

ಧಾರವಾಡ:ಜ.31: ಧಾರವಾಡ ತಾಲೂಕಿನ ಗೋವನಕೊಪ್ಪ ಮತ್ತು ದಂಡಿಕೊಪ್ಪ ಗ್ರಾಮಗಳ ವ್ಯಾಪ್ತಿಯ ಪ್ರದೇಶದಲ್ಲಿ ಇಂದು ಬೆಳಿಗ್ಗೆ ಇಬ್ಬರು ಮಹಿಳೆಯರ ಮೇಲೆ ಕಾಡುಪ್ರಾಣಿಯೊಂದು ದಾಳಿ ಮಾಡಿದ ಕುರಿತು ವರದಿಯಾಗಿದೆ.

ಈ ಕುರಿತು ಸಾರ್ವಜನಿಕ ದೂರಿನ ಮೇಲೆ ಅಗತ್ಯ ಕ್ರಮವಹಿಸಲಾಗಿದೆ. ಇಂದು ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೆÇಲೀಸ್ ಇಲಾಖೆ ಸಿಬ್ಬಂದಿ ತಂಡಗಳು ಕಾರ್ಯಚರಣೆ ಕೈಗೊಳ್ಳಲಿವೆ. ಧಾರವಾಡ ಗ್ರಾಮೀಣ ಶಾಸಕರೊಂದಿಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿ, ಅವರಿಂದ ದಾಳಿ ಮಾಡಿರುವ ಕಾಡು ಪ್ರಾಣಿ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ.
ಕೆಲವರು ದಾಳಿ ಮಾಡಿರುವ ಪ್ರಾಣಿ ಚಿರತೆ ಎಂದು ಅಪಪುಚಾರ ಮಾಡುತ್ತಿದ್ದು, ಅದು ಚಿರತೆ ಅಥವಾ ತೋಳ ಅಥವಾ ಮತ್ತಯಾವದೊ ಕಾಡುಪ್ರಾಣಿ ಎಂಬುದು ಕಾರ್ಯಾಚರಣೆ ನಂತರ ಖಚಿತವಾಗಲಿದೆ.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳು ಜಿಲ್ಲಾಡಳಿತ ಹಾಗೂ ಪೆÇಲೀಸ್ ಇಲಾಖೆಯಿಂದ ಅಗತ್ಯ ಸಿಬ್ಬಂದಿ ನೆರವು ನೀಡುವದಾಗಿ ತಿಳಿಸಿದ್ದು, ಸಾರ್ವಜನಿಕರ ಸುರಕ್ಷತೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಇಂದು ರಾತ್ರಿಯಿಂದಲೇ ಕಾರ್ಯಾಚರಣೆ ಆರಂಭಿಸಲಾಗುವುದು. ಆದ್ದರಿಂದ ಖಚಿತಪಡಿಸಿಕೊಳ್ಳದೆ ಚಿರತೆ ಎಂದು ಸುಳ್ಳು ಸುದ್ದಿಯನ್ನು ಯಾರು ಪ್ರಸಾರ ಮಾಡಬಾರದು ಮತ್ತು ಸಾರ್ವಜನಿಕರು ನಂಬಬಾರದು ಎಂದು ಹಾಗೂ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ರಾತ್ರಿ ವೇಳೆಯಲ್ಲಿ ಅನಾವಶ್ಯಕವಾಗಿ ಸಾರ್ವಜನಿಕರು ಹೊರಗಡೆ ಒಬ್ಬೊಬ್ಬರಾಗಿ ತಿರುಗಾಡಬಾರದೆಂದು ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here