ಜಾನಪದ ನಾಟಕೋತ್ಸವ ಹಾಗೂ ಸುಗಮ ಸಂಗೀತ ಕಾರ್ಯಕ್ರಮ

0
77

ಬಳ್ಳಾರಿ:ಪೆ:02:- ನಗರದಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಅಸೋಸಿಯೇಷನ್ ದೋಣಿಮಲೈ ಇವರ ಪ್ರಯೋಜಿತ ಕಾರ್ಯಕ್ರಮದಡಿಯಲ್ಲಿ ಜಾನಪದ ನಾಟಕೋತ್ಸವ ಹಾಗೂ ಸುಗಮ ಸಂಗೀತ ಕಾರ್ಯಕ್ರಮವನ್ನು ನಗರದ 23ನೇ ವಾರ್ಡ್ ಮಹಾನಂದಿ ಕೊಟಂನಲ್ಲಿ ಆಯೋಜಿಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಾನಗರ ಪಾಲಿಕೆಯ ಹೆಲ್ತ್‌ ಇನ್ಸ್ ಪೆಕ್ಟರ್ ರಾದ ಶ್ರೀ.ಅಂಬರೀಶ್ ರವರು ಮಾಡಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ನಗರದಲ್ಲಿ ಹಸಿಕಸ , ಒಣಕಸ , ವಿಷಕಾರಿ ವಸ್ತುಗಳ ಬಗ್ಗೆ ಬೇರೆ ಬೇರೆಯಾಗಿ ವಿಂಗಡಿಸಿ ಕಸದ ಗಾಡಿಗೆ ಹಾಕಬೇಕು ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆಯ ಸವಿಸ್ತಾರವಾಗಿ ಮನದಟ್ಟಾಗುವಂತೆ ನಗರದ ಮಹಿಳೆಯರಿಗೆ ತಿಳಿಸಿದರು,

ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾನಗರ ಪಾಲಿಕೆಯ ತಾಂತ್ರಿಕ ಕಾರ್ಯನಿರ್ವಾಹಕರಾದ ಶ್ರೀ ವೀರೇಂದ್ರ ಗೌಡ ರವರು ವಹಿಸಿದರು ಮತ್ತು ಮುಖ್ಯ ಅತಿಥಿಗಳಾಗಿ ಡಾ|| ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ಗೌರವಧ್ಯಕ್ಷರಾದ ಶ್ರೀ.ಕೆ ಬಾಬು , ಅಧ್ಯಕ್ಷರಾದ ಶ್ರೀ. ಕೆ.ಮಲ್ಲಿನಾಥ್ ಉಪಾಧ್ಯಕ್ಷರಾದ , ಶ್ರೀ. ಡಿ.ಶೇಕ್ಷವಲಿ ಹಾಗೂ ಸಂಘದ ಸರ್ವ ಸದಸ್ಯರುಗಳು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ರೂವಾರಿಗಳಾದ ಶ್ರೀ ಬಿ. ಆನಂದ್ ಕಲ್ಲುಕಂಬ ಮತ್ತು ತಂಡದರವರಿಂದ ಹಾಗೂ ಹನುಮಯ್ಯ ತಿಮ್ಮಲಾಪುರ ಮತ್ತು ತಂಡದವರು ಸುಗಮ ಸಂಗೀತ ಕಾರ್ಯಕ್ರಮವನ್ನು ನಗರದ ಶ್ರೀ ಪಟ್ಟಾಭಿರಾಮ ದೇವಸ್ಥಾನದ ಆವರಣದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಮಹಾನಂದಿ ಕೋಟಂನ ಗುರು ಹಿರಿಯರು ಹಾಗೂ ನಗರದ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಯಶಸ್ವಿ ಗೊಳಿಸಲಾಗಿತ್ತು.

LEAVE A REPLY

Please enter your comment!
Please enter your name here