ತೋರಣಗಲ್ಲು ಗ್ರಾಮಕ್ಕೆ ಮೆಟ್ರಿಕ್ ಪೂರ್ವಬಾಲಕಿಯರ ವಸತಿ ನಿಲಯಕ್ಕೆ ಡಿವೈಎಫ್ಐ ಮನವಿ

0
68

ಸಂಡೂರು:ಪೆ:03: ತಾಲೂಕಿನ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಸಂಡೂರು ಕಚೇರಿಗೆ ತೋರಣಗಲ್ಲು ಗ್ರಾಮಕ್ಕೆ ಮೆಟ್ರಿಕ್ ಪೂರ್ವ ಮತ್ತು ನಂತರ ಬಾಲಕಿಯರ ವಸತಿ ನಿಲಯಗಳನ್ನು ಮಂಜೂರು ಮಾಡಲು ಡಿವೈಎಫ್ಐ ಸಂಘಟನೆಯಿಂದ ಮನವಿ ಮಾಡಲಾಯಿತು

ಈಗಾಗಲೇ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯವಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಒಳ್ಳೆಯ ಬೆಳವಣಿಗೆಯಾಗಿದೆ ಅದೇ ರೀತಿ ಮೆಟ್ರಿಕ್ ನಂತರದ ಬಾಲಕರ ನಿಲಯ ಮಂಜೂರು ಮಾಡಲು ಮನವಿ ಪತ್ರದಲ್ಲಿ ತಿಳಿಸಲಾಯಿತು, ಇಲಾಖೆಯ ಮಾನ್ಯ ಕಛೇರಿ ಅಧೀಕ್ಷಕರು ಎಂ.ಎಂ.ಪಾಟೀಲ್, ಎಸ್ ಡಿ ಎ ಅಧಿಕಾರಿ ಹನುಮಂತಪ್ಪ, ಹಾಸ್ಟೆಲ್ ವಾರ್ಡನ ಸಿದ್ದೇಶ್ ಇವರುಗಳಿಗೆ ಮನವಿಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಡಿವೈಎಫ್ಐ ತಾಲ್ಲೂಕು ಅಧ್ಯಕ್ಷರಾದ ಶಿವು, ಕ್ರೀಡಾ ಕಾರ್ಯದರ್ಶಿ ನಾಗಭೂಷಣ ಜಿಲ್ಲಾ ಉಪಾಧ್ಯಕ್ಷರು ಸ್ವಾಮಿ.ಹೆಚ್, ಮುಖಂಡರಾದ ಧನುಂಜಯ, ದುರುಗಮ್ಮ ಎ.ಸ್ವಾಮಿ ಸಿಪಿಐ(ಎಂ) ಇತರರು ಭಾಗವಹಿಸಿದ್ದರು…

LEAVE A REPLY

Please enter your comment!
Please enter your name here