ಎಲ್ಲರಂತಲ್ಲ ಈ ಆಂಗ್ಲ ಭಾಷೆ ಶಿಕ್ಷಕ ಮುದುಕಪ್ಪ..ಮಾಡುತ್ತಿರುವುದಾದರು ಏನು ಗೊತ್ತಾ..!?

0
105

ಕೊಪ್ಪಳ:ಸೆ:25:-ತುಂಗಾಭದ್ರೆಯ ದಡದಲ್ಲಿರುವ ಕೊಪ್ಪಳ ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದವರು
ಮುದುಕಪ್ಪ, ಹುಟ್ಟಿದ್ದು, ಬೆಳೆದಿದ್ದು, ಓದಿದ್ದು ಚಿಕ್ಕ ಬೊಮ್ಮನಹಳ್ಳಿಯಲ್ಲಿ, ವೃತ್ತಿಯಲ್ಲಿ ಆಂಗ್ಲ ಭಾಷಾ ಶಿಕ್ಷಕ ಆದ್ರೆ ಹಚ್ಚ ಕನ್ನಡ ಪ್ರೇಮಿ, ಸದ್ಯ
ಬಯಲು ಸೀಮೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕು ಚಿಕ್ಕಜಾಗನೂರು ಗ್ರಾಮದ ಪ್ರೌಢಶಾಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಕಳೆದ ವರ್ಷದ ಅವಧಿಯಲ್ಲಿ ಬೆನ್ನು ಮೂಳೆ ವೈಫಲ್ಯದಿಂದ ಮನೆಯಿಂದ ಆಚೆ ಬರಲಾಗದೆ ಇರುವ ವ್ಯಕ್ತಿಯೋರ್ವನಿಗೆ ಕೊಪ್ಪಳದ ಸಮೂಹ ಸಮರ್ಥ್ಯ ಸಂಸ್ಥೆಯು ಕಂಪ್ಲಿ ತಾಲೂಕಿನ ರಾಮಸಾಗರದಲ್ಲಿನ ವ್ಯಕ್ತಿ ಬೆನ್ನು ಮೂಳೆ ಸಮಸ್ಯೆಯಿಂದ ಬಳಲುತ್ತಿರುತ್ತಾನೆ ಈತನಿಗೆ ಚಿಕಿತ್ಸೆ ನೀಡಲೆಂದು ಆ ಗ್ರಾಮಕ್ಕೆ ಸಂಸ್ಥೆಯ ಸಿಬ್ಬಂದಿಯು ಬಂದಿರುತ್ತಾರೆ ಇವರೊಂದಿಗೆ ಶಿಕ್ಷಕ ಮುದುಕಪ್ಪನವರ ಸ್ನೇಹಿತರೊಬ್ಬರು ಸಹ ಬಂದಿರುತ್ತಾರೆ

ಈ ಸಂದರ್ಭದಲ್ಲಿ ಆ ಸ್ನೇಹಿತನು ಕಂಪ್ಲಿ ಯಲ್ಲಿರುವ ಶಿಕ್ಷಕ ಮುದುಕಪ್ಪನವರ ಮನೆಗೆ ಭೇಟಿ ನೀಡಿರುತ್ತಾರೆ,ಅ ಸಮಯದಲ್ಲಿ ಸಮರ್ಥ ಸಂಸ್ಥೆಯವರು ಹಾಗೆ ಚರ್ಚೆ ಮಾಡುತ್ತಾ ಶಿಕ್ಷಕ ಮುದುಕಪ್ಪನಲ್ಲಿ ಸಂಸ್ಥೆಯವರು ನಮ್ಮ ಸಂಸ್ಥೆಯಿಂದ ನಾವು ಈ ತರಹದ ಚಿಕಿತ್ಸೆಯನ್ನು ನೀಡುತ್ತಿದ್ದೇವೆ ನಮ್ಮಲ್ಲಿ ಹಣದ ಕೊರತೆ ಇದೆ ವೀಲ್ಚೇರ್ ಗಳನ್ನು ನೀಡಲು ಆಗುತ್ತಿಲ್ಲ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸುತ್ತ ತಿಳಿಸುತ್ತಾರೆ ಅವರುಗಳ ಸಹಾಯ ಮನೋಭಾವನೆಯನ್ನು ಕಣ್ಣಾರೆ ಕಂಡ ಶಿಕ್ಷಕ ಮುದುಕಪ್ಪನವರು ಸ್ವಲ್ಪಹೊತ್ತು ದಿಗ್ಬ್ರಾಂತನಾಗುತ್ತಾರೆ, ದೇವರು ನನಗೆ ಅಲ್ಪಸ್ವಲ್ಪ ನೆಮ್ಮದಿಯ ಜೀವನವನ್ನು ಎಲ್ಲವನ್ನೂ ಕೊಟ್ಟಿದ್ದಾನೆ ಅದರಲ್ಲಿ ಅಲ್ಪವಾದರು ಕಷ್ಟದಲ್ಲಿದ್ದವರಿಗೆ ಕೊಟ್ಟರೆ ನಷ್ಟವೇನೂ ಇಲ್ಲ ಎಂದು ಅಂದುಕೊಂಡು ಸರ್ ಏನೂ ಚಿಂತಿಸಬೇಡಿ ನನ್ನಿಂದ ಎಷ್ಟು ಕೊಡಲು ಸಾಧ್ಯವೋ ಅಷ್ಟು ಸಹಾಯಮಾಡುವೆ ಎಂದು ಹೇಳುತ್ತಾರೆ.

ಅನಂತರ ಸಾಮರ್ಥ ಸಂಸ್ಥೆಗೆ ಅಂದಿನಿಂದ ಈ ದಿನದವರೆಗೂ ಪ್ರತಿವರ್ಷ ಸಾಮರ್ಥ ಸಂಸ್ಥೆಗೆ ವೀಲ್ಚೇರ್ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.ಇವರ ಈ ಸೇವಾ ಸಹಾಯವನ್ನು ಮಾಡುವ ಗುಣ ಈಗಿನ ಶಿಕ್ಷಕರಿಗೆ,ಯುವಕರಿಗೆ ಮಾದರಿಯಾಗಲಿ ಎಂಬುದೇ ನಮ್ಮ ಉದ್ದೇಶ ಏನಂತೀರಾ..?

ವರದಿ:-ಮಹೇಶ್

LEAVE A REPLY

Please enter your comment!
Please enter your name here