ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದೆ-ಡಾ.ಐ.ಆರ್.ಅಕ್ಕಿ

0
188

ಸಂಡೂರು:ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ತಮ್ಮ ಬಿಳ್ಕೋಡಿಗೆ ಸಮಾರಂಭದಲ್ಲಿ ಮಾತನಾಡಿದ ಡಾ.ಐ.ಆರ್. ಅಕ್ಕಿಯವರು ನಾನು ಸಂಡೂರು ತಾಲೂಕಿನಲ್ಲಿ ನಾಲ್ಕು ವರ್ಷ ಮೂರು ತಿಂಗಳಕಾಲ ಪ್ರಾಮಾಣಿಕವಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹಾಗೂ ಶೈಕ್ಷಣಿಕ ಪ್ರಗತಿಗೆ ಶ್ರಮಿಸುವುದರ ಜೊತೆಗೆ ತಾಲೂಕಿನ ಪ್ರಗತಿಗೆ ನಮ್ಮ ಇಲಾಖೆ ಉತ್ತಮ ಸೇವೆ ನೀಡಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ ಎಂದು ತಿಳಿಸಿದರು. ಮುಂದುವರೆದು ನಂಜುಂಡಪ್ಪ ವರದಿ ಪ್ರಕಾರ ಸಂಡೂರು ತಾಲೂಕು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ತಾಲೂಕು ಹಾಗಿತ್ತು ಇದನ್ನು ಹೋಗಲಾಡಿಸಲು ನಮ್ಮ ಶಿಕ್ಷಣ ಇಲಾಖೆಯು ಅನೇಕ ಶೈಕ್ಷಣಿಕ ಅಭಿವೃದ್ಧಿಯ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಪ್ರಗತಿಯನ್ನು ಸಾಧಿಸುತ್ತಿದ್ದೆ.

ಕಳೆದ ಎರಡು ಮೂರು ವರ್ಷಗಳಿಂದ ಎಸ್.ಎಸ್.ಎಲ್.ಸಿ. ಫಲಿತಾಂಶ ಸುಧಾರಣೆಗೆ ಶೈಕ್ಷಣಿಕ ಪಥ, ವಿಶ್ವಾಸ ಪಥ ಹಾಗೂ ಅನೇಕ ಸಾಮಾಗ್ರಿಗಳನ್ನು ಶಿಕ್ಷಣ ಪ್ರೇಮಿಗಳ ಹಾಗೂ ದಾನಿಗಳ ಮೂಲಕ ಸುಮಾರು 1700 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸನಿವಾಸ ತರಬೇತಿ ಮೂಲಕ ನೂರಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಎಸ್.ಎಸ್.ಎಲ್.ಸಿ. ಪಾಸಾಗುವುದರ ಮೂಲಕ ಮುಂದಿನ ಜೀವನಕ್ಕೆ ದಾರಿ ದೀಪ ಮಾಡಿದ ಎಲ್ಲಾ ದಾನಿಗಳಿಗೂ ಅಭಿನಂದನೆಗಳನ್ನು ತಿಳಿಸಿದರು. ನಮ್ಮ ಇಲಾಖೆಯ ಎಲ್ಲಾ ಕಾರ್ಯಕ್ರಮಗಳನ್ನು ಸಮಯಕ್ಕೆ ಸರಿಯಾಗಿ ಪ್ರಸ್ತುತ ಪಡಿಸಿ ಯೋಜನೆಗಳು ಜನ ಸಾಮಾನ್ಯರಿಗೆ ತಲುಪಿಸಿದ ಪತ್ರಿಕಾ ಮಾಧ್ಯಮದವರಿಗೂ ಸದಾ ಕೃತಜ್ಞನಾಗಿರುತ್ತೇನೆ ಎಂದು ತಿಳಿಸಿದರು.

ನಮ್ಮ ಜೀವನದಲ್ಲಿ 1999ರಲ್ಲಿ ಕೆ.ಎ.ಎಸ್. ಮೂಲಕ ಆಯ್ಕೆಯಾಗಿ ಪ್ರೌಢಶಾಲೆಯ ಮುಖ್ಯಗುರುಗಳಾಗಿ ಆಯ್ಕೆಯಾದಗಿನಿಂದ ಪ್ರತಿಯೊಂದು ಕೆಲಸವನ್ನು ನಾನು ಚಾಲೆಂಜ್‍ಯಾಗಿ ತೆಗೆದುಕೊಂಡು ಅದನ್ನು ಕಾರ್ಯಾರೂಪಕ್ಕೆ ತರುವುದು ನನ್ನ ಆಶಯವಾಗಿದೆ ಅದೇ ರೀತಿ ಸಂಡೂರು ತಾಲೂಕಿನಲ್ಲಿ 151ಕೋಟಿ 175 ಶಾಲೆಗಳಿಗೆ 25 ವರ್ಷಗಳ ಮುಂದಾಲೋಚನೆ ಇಟ್ಟುಕೊಂಡು ಶೈಕ್ಷಣಿಕ ಪ್ರಗತಿಗೆ ಅನುಗುಣವಾಗಿ ಪ್ರತಿಭಾವಂತರಿಂದ ಮಾರ್ಗದರ್ಶನ ಪಡೆದು ಅಭಿವೃದ್ಧಿ ಕಾರ್ಯ ಮಾಡಲಾಗಿದೆ ಈ ಎಲ್ಲಾ ಯೋಜನೆಗಳನ್ನು ಅಂಕಿ ಅಂಶಗಳ ರೂಪದಲ್ಲಿ ಕಾಣದ ಕೈಗಳಿಗೆ ಬಾಣದ ರೀತಿಯಲ್ಲಿ ನಾಟುವ ರೀತಿಯಲ್ಲಿ ನಾನು ಮಾಹಿತಿಯನ್ನು ಸಂದರ್ಭಕ್ಕನುಗುಣವಾಗಿ ಕೊಡುತ್ತಿದ್ದೆ ಶಾಸಕರು ಸಹ ನಮ್ಮ ಯೋಜನೆಗಳನ್ನು ತಾಳ್ಮೆಯಿಂದ ಹಾಲಿಸುತ್ತಿದ್ದರು,ಜೊತೆಗೆ ಶಿಕ್ಷಣದ ಪ್ರಗತಿಗೆ ಸಹಕಾರವನ್ನು ನೀಡುತ್ತಿದ್ದರು ಅವರಿಗೂ ಅಭಿನಂದನೆಗಳನ್ನು ಸಲ್ಲಿಸಿದರು.

ಇಲ್ಲಿಯವರೆಗೆ ಸಂಡೂರು ತಾಲೂಕಿನ ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕಾಯಕ ಮತ್ತು ಸೇವಾ ಮನೋಭಾವಕ್ಕೆ ಸ್ಪಂಧಿಸಿದ ನಮ್ಮ ಕಛೇರಿಯ ಸಿಬ್ಬಂಧಿಗಳಿಗೂ ತಾಲೂಕಿನ ಎಲ್ಲಾ ಶಿಕ್ಷಕ ವರ್ಗದವರಿಗೂ ಮತ್ತು ಪಾಲಕರಿಗೂ ವಿದ್ಯಾರ್ಥಿಗಳಿಗೂ ಹಾಗೂ ಮಾಧ್ಯಮ ಮಿತ್ರರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು. ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಸಹ ನಿರ್ದೇಶಕರಾದ ಶ್ರೀದರಮೂರ್ತಿ, ಕಛೇರಿಯ ಸಿಬ್ಬಂಧಿಗಳು ಉಪಸ್ಥಿತರಿದ್ದರು ಇ.ಸಿ.ಓ. ಬಸವರಾಜ,ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here