ನಾಡಿನಲ್ಲಿ ಶಾಂತಿ ನೆಲೆಸಲಿ

0
699

ಭಾರತದ ಯಾವುದೇ ಮೂಲೆಯಲ್ಲೂ ಹಿಂದೂ ದೇವರುಗಳ ಕುರುಹುಗಳಿವೆ. ಶಿವ ಪಾರ್ವತಿಯರ ಕೈಲಾಸ ಈ ನೆಲದಲ್ಲಿದೆ. ರಾಮಾಯಣ ಮಹಾಭಾರತ ನಡೆದ ಕುರುಹುಗಳಿವೆ. ಕಾವೇರಿ ಗೋದ ಗಂಗಾ ಯಮುನೆ ಕೃಷ್ಣೆ ತುಂಗೆ ಮೊದಲಾದ ಹೆಸರುಗಳ ನದಿಗಳಿವೆ. ಋಷಿ ಮುನಿಗಳೆಲ್ಲಾ ಭೂ ಲೋಕದ ಜನರ ಒಳಿತನ್ನು ಬಯಸಿ ಯಜ್ಞ ಯಾಗಾದಿಗಳನ್ನು ಮಾಡುತ್ತಿದ್ದರೆಂಬ ಪ್ರತೀತಿ ಇದೆ. ಇಲ್ಲಿಯ ಜನರು ಪಂಚಭೂತಗಳನ್ನೂ ಆರಾಧಿಸುತ್ತಾರೆ.

ಹಿಂದೆ ಗುರುಕುಲಗಳಲ್ಲಿ ಧರ್ಮ ಬೋಧನೆಗೆ ಮಹತ್ವವಿದ್ದು, ವೇದ ಉಪನಿಷತ್ತುಗಳನ್ನು ಹೇಳಿಕೊಡುತ್ತಿದ್ದರು. ಹಾಗಾಗಿ ವಿದ್ಯಾಧಿದೇವತೆಗಳಾದ ಗಣಪತಿ ಮತ್ತು ಸರಸ್ವತಿಯನ್ನು ಪೂಜಿಸುತ್ತಿದ್ದರು. ಆ ಪದ್ಧತಿ ಇಂದಿನ ಶಾಲಾಕಾಲೇಜುಗಳಿಗೂ ಮುಂದುವರೆದುಕೊಂಡು ಬಂದಿದೆ.

ಅನೇಕ ವಿದೇಶಿಗರು ಭಾರತಕ್ಕೆ ಬಂದರು. ಭಾರತದ ಸಂಪತ್ತನ್ನು ಕಂಡು ಮೊದಲು ದಾಳಿ ಮಾಡಿದ ಮುಸ್ಲಿಂರೆಂದರೆ ಅರಬ್ಬರು ನಂತರ ತುರ್ಕರು ನಂತರ ಅಫಘನ್ನರು. ೧೨ ಮತ್ತು ೧೩ ನೇ ಶತಮಾನದಲ್ಲಿ ಮುಸ್ಲಿಮರು ಭಾರತದ ಕೆಲವು ಭಾಗಗಳನ್ನು ಆಕ್ರಮಿಸಿದರು. ೧೫೨೬ ರಲ್ಲಿ ಬಾಬರ್ ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ. ಭಾರತದಲ್ಲಿ ಮುಸ್ಲಿಮರ ಆಡಳಿತ ಆರಂಭವಾದಾಗ ಹಿಂದೂಗಳು ಬ್ರಿಟಿಷ್ರನ್ನು ಓಡಿಸಿದಂತೆ ಓಡಿಸಲಿಲ್ಲ. ಬದಲಾಗಿ ಹೊಂದಿಕೊಂಡು ಬದುಕಿದರು.

ಬ್ರಿಟಿಷರ ಆಡಳಿತದಲ್ಲಿ ಕೆಲವು ಬದಲಾವಣೆಗಳಾದವು. ವಿದ್ಯಾದೇಗುಲಗಳು ಆರಂಭವಾಗಿ ಪಾಶ್ಚಾತ್ಯ ವಿದ್ಯೆಗಳನ್ನು ಹೇಳಿಕೊಡಲಾಯಿತು. ಕೇವಲ ಪುರುಷರಿಗೆ ಅದರಲ್ಲೂ ಉಳ್ಳವರಿಗೆ ಸೀಮಿತವಾಗಿದ್ದ ವಿದ್ಯೆಯನ್ನು ಸಾವ್ರತ್ರಿಕ ಮಾಡಲಾಯಿತು. ಆ ಮೂಲಕ ಹಿಂದೂ ಧರ್ಮದಲ್ಲಿ ಇದ್ದ ಅಸೃಶ್ಯತೆ, ಬಾಲ್ಯ ವಿವಾಹ, ಸತಿಪದ್ಧತಿ ಮೊದಲಾದ ಪದ್ಧತಿಗಳನ್ನು ಕಾಲಕ್ರಮೇಣ ಹಿಂದೂ ಧರ್ಮದಿಂದ ಕಿತ್ತೊಗೆಯಲಾಯಿತು.

ಹೆಣ್ಣುಮಕ್ಕಳ ಶೋಷಣೆ ತಪ್ಪಿಸುವ ಅನೇಕ ಕಾನೂನುಗಳು ಜಾರಿಗೆ ಬಂದವು. ಹಾಗೇ ಮುಸ್ಲಿಂ ಮಹಿಳೆಯರಿಗೂ ವಿದ್ಯೆ ಮತ್ತು ಉದ್ಯೋಗದ ಅವಕಾಶವನ್ನು ನೀಡಲಾಯಿತು. ತ್ರಿವಳಿ ತಲಾಕ್ ನಿಂದ ಮುಸ್ಲಿಂ ಮಹಿಳೆಯರಿಗೆ ಆಗುವ ಶೋಷಣೆಯನ್ನು ತಡೆಯುವ ಕೆಲಸವನ್ನೂ ಮಾಡಲಾಗುತ್ತಿದೆ.

ಪ್ರತಿಯೊಬ್ಬರಿಗೂ ಅವರವರ ಧರ್ಮಪಾಲನೆಯನ್ನು ಆಚರಿಸಲು ಯಾರೂ ಅಡ್ಡಿ ಪಡಿಸುವುದಿಲ್ಲ. ಆದರೆ ಧರ್ಮದ ಹೆಸರಿನಲ್ಲಿ ಮಹಿಳೆಯರಿಗೆ ಶೋಷಣೆ ಆಗಬಾರದು ಮತ್ತು ಆಕೆಯ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳಬಾರದು ಎಂಬ ಉದ್ದೇಶ ಭಾರತೀಯರದ್ದಾಗಿದೆ.

ಇನ್ನು ಕೋರ್ಟ್ ನಲ್ಲಿ ಸಮವಸ್ತ್ರ ಧಾರಣೆ ಇದೆ. ಪೋಲಿಸ್ ಇಲಾಖೆಯಲ್ಲಿ, ಆಸ್ಪತ್ರೆಗಳಲ್ಲಿ ಸೈನ್ಯದಲ್ಲಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಇದೆ. ಅದನ್ನು ನಾವು ಗೌರವಿಸಬೇಕು.. ಸಮವಸ್ತ್ರ ಇರುವ ಕಡೆ ತಾತ್ಕಾಲಿಕವಾಗಿ ಮತ್ತು ಆ ಸಮಯದಲ್ಲಿ ಮಾತ್ರ ಸಮವಸ್ತ್ರ ಧರಿಸುವುದು ಅಗತ್ಯ. ಅಲ್ಲಿ ಎಲ್ಲರೂ ಸಮಾನರು ಎಂಬ ಉದ್ದೇಶದಿಂದ ಸಮವಸ್ತ್ರ ಕಡ್ಡಾಯ.

ಇನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇರುವುದರಿಂದ ವಿದ್ಯಾರ್ಥಿಗಳ ಮುಖವನ್ನು ಗುರುತಿಸುವುದು ಶಿಕ್ಷಕರಿಗೆ ಅನಿವಾರ್ಯವಾಗುತ್ತದೆ. ಯಾರು ಚನ್ನಾಗಿ ಓದುತ್ತಾರೆ ಅಥವಾ ಓದುವುದಿಲ್ಲ ಎಂಬುದನ್ನು ಗಮನಿಸಬೆಕಾಗುತ್ತದೆ. ಜೊತೆಗೆ ನಾವೆಲ್ಲಾ ಭಾರತೀಯರು ಎಂಬ ಭಾವನೆ ಮೂಡಿಸಬೇಕಾಗುತ್ತದೆ. ಆದ್ದರಿಂದ
ನಿಗದಿತ ಸ್ಥಳವನ್ನು ಹೊರತುಪಡಿಸಿ ಯಾರು ಯಾವ ಉಡುಪನ್ನಾದರೂ ಧರಿಸಬಹುದು

ಕುಂಕುಮ ಬಳೆ ಹೂವು ಮೊದಲಾದವುಗಳು ವಸ್ತ್ರಗಳಲ್ಲ.. ಅವೆಲ್ಲವೂ ಅಲಂಕಾರಿಕ ವಸ್ತುಗಳು. ಆದ್ದರಿಂದ ಸಮವಸ್ತ್ರ ಇರುವ ಕಡೆ ಹಿಜಾಬ್ ಮತ್ತು ಕೇಸರಿ ಶಾಲು ಎರಡೂ ಸರಿಯಲ್ಲ.
ಕೋರ್ಟ್ ತೀರ್ಪು ಏನು ಬರುತ್ತೋ, ಅದನ್ನೂ ಸ್ವೀಕರಿಸೋಣ.
ಮುಸ್ಲಿಂ ಮಹಿಳೆಯರು ಪರೀಕ್ಷೆ ಬರೆಯಲಿ ಚನ್ನಾಗಿ ಓದಲಿ. ದೇಶದಲ್ಲಿ ಶಾಂತಿ ಕಾಪಾಡಬೇಕೆಂಬುದು ಎಲ್ಲ ಭಾರತೀಯರ ಉದ್ದೇಶವಾಗಿರಲಿ.

ರಾಮಪ್ರಸಾದ್.
ಸಮಾಜ ಸೇವಕರು ಮತ್ತು ಪ್ರಧಾನ ಕಾರ್ಯದರ್ಶಿಗಳು
ಶ್ರೀ ತೇಜ ಟ್ರಸ್ಟ್ ಬಳ್ಳಾರಿ.

LEAVE A REPLY

Please enter your comment!
Please enter your name here