ಯುವ ಸ್ಪಂದನ ಅರಿವು ಕಾರ್ಯಕ್ರಮ

0
108

ಕಲಬುರಗಿ:ಫೆ.19-ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ ಕಲಬುರಗಿ ಹಾಗೂ ಜನ ಆರೋಗ್ಯ ಕೇಂದ್ರ ನಿಮ್ಹಾನ್ಸ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಆಳಂದ ತಾಲೂಕಿನ ಶ್ರೀನಿವಾಸ ದೇಸಾಯಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ಯುವ ಸ್ಪಂದನ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕರಾದ ಸತೀಶ ಕರಕಂಚಿ ಇವರು ವಿದ್ಯಾರ್ಥಿಗಳಿಗೆ ಯುವ ಸ್ಪಂದನದ ವಿಷಯಗಳ ಕುರಿತು, ಸಂಬಂಧಗಳು, ಸುರಕ್ಷತೆ, ಸಂವಹನ, ಲಿಂಗ ಮತ್ತು ಲೈಂಗಿಕತೆ, ಮಾರ್ಗದರ್ಶನ, ಶಿಕ್ಷಣ, ಬೆಳವಣಿಗೆ, ಆರೋಗ್ಯ ಮತ್ತು ಜೀವನ ಶೈಲಿ, ಸಬಲೀಕರಣ ಮತ್ತು ಭಾವನೆಗಳು. ಮುಂತಾದ ವಿಷಯಗಳ ಜೋತೆಗೆ ಕೋವಿಡ್-19 ಎಂಬ ಸಾಂಕ್ರಾಮಿಕ ರೋಗ ಲಕ್ಷಣಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಎಸ್ ಕುಲಕರ್ಣಿ ಹಾಗೂ ಶಾಲೆಯ ಸಹ ಶಿಕ್ಷಕರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here