ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ‘ನಮ್ಮಊರು- ನಮ್ಮಕೆರೆ’ ಯೋಜನೆಯಡಿ ಪುನಶ್ಚೇತನಗೊಂಡ ತುಂಬರಗುದ್ದಿ ಗ್ರಾಮದ ‘ಕೆಂಪುಕೆರೆ’

0
882

ಸಂಡೂರು:ಮಾ:11:- ಜಿಲ್ಲೆಯ ಸಂಡೂರು ತಾಲೂಕಿನ ಚೋರನೂರು ಹೋಬಳಿ ಯರ್ರಯ್ಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತುಂಬರಗುದ್ದಿ ಗ್ರಾಮದ “ಕೆಂಪುಕೆರೆ” ಯೆಂದೇ ಕರೆಯಲ್ಪಡುವ ಕೆರೆಯಲ್ಲಿ ಕಳೆದ ಫೆಬ್ರವರಿ ತಿಂಗಳ 07 ನೇ ತಾರೀಖಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದ ವತಿಯಿಂದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ತುಂಬರಗುದ್ದಿ ಗ್ರಾಮದ ಊರ ಕೆರೆಯಾದ ಕೆಂಪುಕೆರೆ ಹೂಳೆತ್ತಲು “ನಮ್ಮ ಊರು-ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಕೆರೆಯ ಹೂಳೆತ್ತುವುದಕ್ಕೆ ಚಾಲನೆ ನೀಡಲಾಗಿದ್ದು ಕೆಲಸ ಪ್ರಗತಿಯಲ್ಲಿದೆ.

ಸಂಡೂರು ತಾಲೂಕಿನಲ್ಲಿ ನೂರಕ್ಕೂ ಹೆಚ್ಚು ಕೆರೆಗಳಿವೆ. ಆದರೆ, ಅವುಗಳಲ್ಲಿ ಬಹುತೇಕ ಕೆರೆಗಳು ಹೂಳು ಮತ್ತು ಒತ್ತುವರಿಯ ಕಾರಣ ಹಾಳಾಗಿವೆ. ಧರ್ಮಸ್ಥಳ ಸಂಸ್ಥೆಯು ರಾಜ್ಯದಲ್ಲಿ ಒಟ್ಟು 367 ಕೆರೆಗಳನ್ನು ಪುನಶ್ಚೇತನಗೊಳಿಸಿದ ನಂತರ, ಅಂತರ್ಜಲ ಮಟ್ಟ ಹೆಚ್ಚಾಗಿದೆಯಲ್ಲದೆ, ಕೆರೆ ಒತ್ತುವರಿ ಪ್ರಕರಣಗಳು ಬಹಳಷ್ಟು ತಗ್ಗಿವೆ. ಪ್ರತಿವರ್ಷ ರಾಜ್ಯದ ಪ್ರತಿ ತಾಲೂಕಿನಲ್ಲಿ ಒಂದು ಕೆರೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಅದೇ ರೀತಿಯಾಗಿ 2021-22,ನೇ ಸಾಲಿನಲ್ಲಿ ತುಂಬರಗುದ್ದಿ ಗ್ರಾಮವನ್ನು ಆಯ್ಕೆ ಮಾಡಿಕೊಂಡು ಕೆರೆಯಲ್ಲಿ ಹೂಳೆತ್ತುವ ಕಾರ್ಯ ಮಾಡುತ್ತಿದೆ

ತುಂಬರಗುದ್ದಿ ಗ್ರಾಮದ 47.17 ಹೆಕ್ಟೇರ್ ವಿಸ್ತೀರ್ಣದ ಕೆಂಪುಕೆರೆ ಪ್ರದೇಶದಲ್ಲಿ ಸುಮಾರು 20 ಎಕರೆಯಷ್ಟು ಆಯ್ಕೆಯನ್ನು ಮಾಡಿಕೊಂಡು, ಅದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 16 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಿದೆ, ಕೆರೆ ಹೂಳೆತ್ತುವ ಕಾರ್ಯವನ್ನು ಕಳೆದ 60 ದಿನಗಳಿಂದ ಸತತವಾಗಿ ಕೆಲಸವನ್ನು ಮಾಡುತ್ತಾ ಬಂದಿದ್ದು,ಸರಕಾರದ, ಗ್ರಾಪಂಯ, ತಹಶೀಲ್ದಾರ್ ರವರ ಅನುಮತಿಯನ್ನು ಪಡೆದುಕೊಂಡು ರೈತರಿಗೆ ಒಳಿತಾಗಲು ಈ ಹೂಳೆತ್ತುವ ಕೆಲಸವನ್ನು ಮಾಡಿತ್ತಿದ್ದು ತುಂಬರಗುದ್ದಿ- ಯರ್ರಯ್ಯನಹಳ್ಳಿ- ಸೇರಿದಂತೆ, ಗ್ರಾಪಂ,ಹಿರಿಯು ಮುಖಂಡರು, ಯುವಕರು, ಚಾಲಕರುಗಳ ಸಂಪೂರ್ಣ ಸಹಾಯ ಸಹಕಾರ ಈ ಮಹತ್ಕಾರ್ಯಕ್ಕೆ ನೀಡಿದ್ದು, ಇದರಿಂದ ಸುತ್ತಲಿನ 5 ಹಳ್ಳಿಗಳಿಗೆ ಅನುಕೂಲವಾಗಲಿದೆ.

ಈ ಸಂಧರ್ಭದಲ್ಲಿ ದ.ಗ್ರಾ.ಸಂ ಕೃಷಿ ಅಧಿಕಾರಿಗಳಾದ ರುದ್ರಪ್ಪ ಪೂಜಾರ್ ಅವರು ಮಾತನಾಡುತ್ತ..
‘ನೀರಾವರಿ ಕೆರೆಗಳ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬರುತ್ತದೆ. ಆದರೆ, ಊರಿನ ಕೆರೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದೆ. ಪಂಚಾಯಿತಿಯಲ್ಲಿ ಸಾಕಷ್ಟು ಅನುದಾನವಿರದಿದ್ದರೆ ಇಂತಹ ಕೆರೆಗಳ ಅಭಿವೃದ್ಧಿ ಆಗುವುದೇ ಇಲ್ಲ. ಈ ಕಾರಣ, ಗ್ರಾಮ ಪಂಚಾಯಿತಿಗಳ ಜೊತೆಗೆ ಕೈಜೋಡಿಸಿರುವ ನಾವು ಊರ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದ್ದೇವೆ’ ಹಾಗೂ
‘ಕೆರೆಗಳ ಹೂಳು ಎತ್ತುವ ಕಾರ್ಯವನ್ನು ಧರ್ಮಸ್ಥಳ ಸಂಸ್ಥೆ ಮಾಡಿದರೆ, ಅದನ್ನು ಸಾಗಿಸುವ ಕೆಲಸವನ್ನು ಆಯಾ ಗ್ರಾಮ ಪಂಚಾಯಿತಿಗಳು ಮಾಡುತ್ತಿವೆ. ಧರ್ಮಸ್ಥಳ ಸಂಸ್ಥೆ, ಸ್ಥಳೀಯರ ನೆರವಿನಿಂದ ಸಣ್ಣ ಕೆರೆಗಳನ್ನು, ಸರ್ಕಾರದ ಸಹಭಾಗಿತ್ವದೊಂದಿಗೆ ಕೆರೆ ಸಂಜೀವಿನಿ ಯೋಜನೆಯಡಿ ದೊಡ್ಡ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದೆ’
ಎಂದು ಸಂಸ್ಥೆಯ ಕೃಷಿ ಅಧಿಕಾರಿ ರುದ್ರಪ್ಪ ಪೂಜಾರ್ ತಿಳಿಸಿದರು.

ತದನಂತರ ಹಾಲಿ ಗ್ರಾಪಂ ಉಪಾಧ್ಯಕ್ಷರಾದ ಕೆ.ಬಿ.ಉಮೇಶ್ ಮಾತನಾಡಿ
‘ಮೊದಲು, ಗ್ರಾಮಸ್ಥರೆಲ್ಲ ಹೋಗಿ ಕೆರೆಗಳ ಹೂಳು ತೆಗೆಯುತ್ತಿದ್ದರು. ಅವುಗಳ ಸಂರಕ್ಷಣೆಯನ್ನೂ ಮಾಡುತ್ತಿದ್ದರು. ಸ್ವಾತಂತ್ರ್ಯಾನಂತರ ಕೆರೆಗಳ ಸಂರಕ್ಷಣೆ ಜವಾಬ್ದಾರಿ ಸರ್ಕಾರದ್ದು ಎಂಬಂತಾಗಿಬಿಟ್ಟಿತು. ಜನರು ಕೆರೆಗಳನ್ನು ನಿರ್ಲಕ್ಷಿಸತೊಡಗಿದರು’ ಹಾಗೂ ‘ನಮ್ಮ ಊರು- ನಮ್ಮ ಕೆರೆ’ ಯೋಜನೆಯಿಂದ ತುಂಬರಗುದ್ದಿ ಗ್ರಾಮಸೇರಿದಂತೆ ಐದಾರು ಹಳ್ಳಿಗಳಿಗೆ ಅನುಕೂಲವಾಗಿದೆ. ಕೆರೆಯಿಂದ ಈಗಾಗಲೇ 30 ಸಾವಿರ ಟ್ರಿಪ್ ಹೂಳೆತ್ತಿರುವ ಮಣ್ಣನ್ನು ರೈತರು ತಮ್ಮ ತಮ್ಮ ಹೊಲಗಳಿಗೆ ಉಚಿತವಾಗಿ ಕೊಂಡೊಯ್ಯುತ್ತಿದ್ದಾರೆ
ಈಗ ಪುನಶ್ಚೇತನಗೊಳಿಸಿರುವ ಕೆರೆಗೆ ಮತ್ತೆ ಹೂಳು ತುಂಬದಂತೆ ಗ್ರಾಮಸ್ಥರೇ ಎಚ್ಚರ ವಹಿಸಬೇಕು. ಯೋಜನೆ ಯಶಸ್ವಿಯಾಗಬೇಕೆಂದರೆ ಸಾಮಾಜಿಕ ಹೊಣೆಗಾರಿಕೆ ಮೂಡಬೇಕು’ ಎಂದು ಕೆ.ಬಿ.ಉಮೇಶ್ ಹೇಳಿದರು

ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಕೆ.ಬಿ.ಉಮೇಶ್,ಮಾಜಿ ತಾಪಂ ಸದಸ್ಯರಾದ ಜೆ. ಕುಮಾರಸ್ವಾಮಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕೃಷಿ ಅಧಿಕಾರಿ ರುದ್ರಪ್ಪ ಪೂಜಾರ್ ಹಾಗೂ ಗ್ರಾಪಂ ಸದಸ್ಯರಾದ ಬಿ. ಪ್ರಭಾಕರ್, ವಲಿಭಾಷ, ಹೂಲೆಮ್ಮ ಅಂಜಿನಪ್ಪ,ನಾಗವೇಣಿ ಸುರೇಶ್, ಹನುಮಂತಪ್ಪ, ಮಾಜಿ ಗ್ರಾಪಂ ಸದಸ್ಯ ರಂಗಪ್ಪ,ಮತ್ತು ಸಮಿತಿ ಸದಸ್ಯರಾದ ಎಸ್. ಅಂಜಿನಪ್ಪ, ಬಿ.ನಿಂಗಪ್ಪ,ಕುಮಾರಸ್ವಾಮಿ, ಇತರರಿದ್ದರು.


‘ಕೆರೆ ಹೂಳೆತ್ತುವ ಕಾರ್ಯಕ್ರಮದಿಂದ ಇದರಲ್ಲಿನ ಮಣ್ಣು ಪಲವತ್ತತೆಯಿಂದ ಕೂಡಿದ್ದು, ಬೇರೆ ಕಡೇ ಒಂದು ಟ್ರಿಪ್ ಮಣ್ಣಿಗೆ 200 ಕೊಟ್ಟು ಕೊಂಡುಕೊಳ್ಳುತ್ತಿದ್ದೆವು, ಇದರಿಂದ ಇಲ್ಲಿ ಫಲವತ್ತಾದ ಮಣ್ಣು ಉಚಿತವಾಗಿ ಸಿಗುತ್ತಿದೆ ರೈತರಿಗೆ ತುಂಬಾ ಅನುಕೂಲವಾಗಿದೆ, ಸುತ್ತಮುತ್ತಲಿನ ಬೋರ್ ವೆಲ್ ಗಳಲ್ಲಿ ನೀರು ಮರುಪೂರ್ಣವಾಗುತ್ತದೆ, ಈ ಹೂಳೆತ್ತುವ ಕೆಲಸವನ್ನು ಏಪ್ರಿಲ್ ತಿಂಗಳವರೆಗೂ ಮುಂದುವರೆಸಬೇಕೆಂದು ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಯವರಲ್ಲಿ ಈ ಮೂಲಕ ಮನವಿಮಾಡಿಕೊಳ್ಳುತ್ತೇನೆ ‘

-ಜೆ. ಕುಮಾರಸ್ವಾಮಿ
ಮಾಜಿ ತಾ.ಪಂ.ಸದಸ್ಯರು

LEAVE A REPLY

Please enter your comment!
Please enter your name here