ಮುಕ್ತವಾದ ಆಡಳಿತಾತ್ಮಕ ವಿಧಿ ವಿಧಾನಗಳ ಕೋಶವೇ ಭಾರತದ ಸಂವಿಧಾನ: ದೇವರೆಡ್ಡಿ ಗೌರವಾನ್ವಿತ ನ್ಯಾಯಾಧೀಶರು

0
153

ಸಂಡೂರು:ಡಿ:01:-ಪ್ರಪಂಚದಲ್ಲಿ ಅತ್ಯಂತ ದೊಡ್ಡ ಸಂವಿಧಾನ ಭಾರತ ಸಂವಿಧಾನ. ಎಲ್ಲರನ್ನೂ ಒಳಗೊಂಡಂತಹ,ಎಲ್ಲರಿಗೂ ಅವಕಾಶ ಕಲ್ಪಿಸುವಂತಹ,ಮುಕ್ತವಾದ ಆಡಳಿತಾತ್ಮಕ ವಿಧಿ ವಿಧಾನಗಳ ಕೋಶವೇ ಭಾರತದ ಸಂವಿಧಾನ ಎಂದು ಗೌರವಾನ್ವಿತ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯರಾದ ಶ್ರೀಯುತ ದೇವರೆಡ್ಡಿ ಅವರು ತಿಳಿಸಿದರು.

ಸಂಡೂರು ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಸಾರ್ವಭೌಮತೆಯನ್ನು ಬಾಹ್ಯವಾಗಿ ಮತ್ತು ಆಂತರಿಕವಾಗಿ ರಕ್ಷಣೆ ಮಾಡಲು ಶ್ರೇಷ್ಠವಾದಂತ ಪೀಠಿಕೆಯನ್ನು ಭಾರತದ ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಪ್ರಜಾಸತ್ತಾತ್ಮಕ, ಗಣರಾಜ್ಯ ಇವುಗಳು ಭಾರತ ಸಂವಿಧಾನದ ಪಂಚರತ್ನಗಳು ಎಂದು ಹೇಳಿದರು.

ಭಾರತ ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದ ಜಾತ್ಯತೀತ ಆರಂಭದಲ್ಲಿ ಇರಲಿಲ್ಲ ತದನಂತರ ಸಂವಿಧಾನದ 42ನೇ ತಿದ್ದುಪಡಿಯ ಮೂಲಕ 1976 ರಲ್ಲಿ
ಈ ಪದಗಳನ್ನು ಪೀಠಿಕೆಯಲ್ಲಿ ಸೇರಿಸಲಾಯಿತು. ಈ ಎರಡು ಪದಗಳ ಜೊತೆಗೆ ಸಮಗ್ರತೆ ಎಂಬುದನ್ನು ಸೇರ್ಪಡೆ ಮಾಡಲಾಯಿತು ಎಂದರು.

ಸಮಾಜದಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಸಿಗಬೇಕು. ಮುಕ್ತ ಅವಕಾಶ ಸಿಕ್ಕಾಗ ಸಮಾನರಲ್ಲಿ ಅಸಮಾನರನ್ನು ಮೇಲೆ ಎತ್ತಲು ಯಾವ ರೀತಿಯ ಪ್ರಜಾಪ್ರಭುತ್ವ ಇರಬೇಕು ಎಂಬುದನ್ನು ಅಧ್ಯಯನ ಮಾಡಿ ಭಾರತ ಸಂವಿಧಾನದಲ್ಲಿ ಭದ್ರವಾದ ಪೀಠಿಕೆಯನ್ನು ಅಳವಡಿಸಿಕೊಳ್ಳಾಗಿದೆ ಎಂದು ಹೇಳಿದರು.

ಸಂವಿಧಾನದ ರಚನಾ ತಜ್ಞರು ಸಮಾಜಕ್ಕೆ ಒಂದು ಪುಸ್ತಕವನ್ನು ಅಥವಾ ಒಂದು ಕಾನೂನನ್ನು ನೀಡುತ್ತಿದ್ದೇವೆ ಎನ್ನಲಿಲ್ಲ. ಆದರ್ಶಗಳ ಪ್ರತಿಬಿಂಬವನ್ನು, ಆದರ್ಶಗಳ ಮೂರ್ತಿಯನ್ನು ಕೂರಿಸುತ್ತಿದ್ದೇವೆ‌ ಈ ಆದರ್ಶಗಳನ್ನು ಪೂಜೆ ಮಾಡುವುದು ಅಷ್ಟೇ ಅಲ್ಲ. ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಮೌಡ್ಯತೆ, ಅವೈಜ್ಞಾನಿಕ, ಅಸಂವಿಧಾನಿಕ ಪ್ರಜ್ಞೆಗಳನ್ನು ಕಿತ್ತು ಹಾಕಿದರೆ ಮಾತ್ರ ಸಾಮಾಜಿಕ ಸ್ವಾತಂತ್ಯ ಬರಲು ಸಾಧ್ಯ. ಈ ರೀತಿಯ ಆಲೋಚನೆಗಳನ್ನು ಯುವಜನತೆ ಬಹಳ ಆಳವಾಗಿ ಅಧ್ಯಯನ ಮಾಡಬೇಕು ಎಂದು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.

ಭಾರತ ಪ್ರಜಾಸತಾತ್ಮಕ ದೇಶ. ಅತ್ಯಂತ ಶ್ರೇಷ್ಠ ಜನರುಳ್ಳ ದೇಶ.ಯಾವಾಗಲೂ ಏಕತೆ, ಸಮಗ್ರತೆ, ಪರಸ್ಪರ ಪ್ರೀತಿ ಬಾಂಧವ್ಯದಿಂದ ಬೆಳಗುವಂತಹ ಬದುಕನ್ನು ಕಟ್ಟಿಕೊಂಡಿರುವವರು ನಾವು ಸಂವಿಧಾನ ರಚನಾ ತಜ್ಞರ ಮಹತ್ವದ ಕಾರ್ಯಕ್ಕೆ ನಮಸ್ಕಾರವನ್ನು ಸಲ್ಲಿಸಿ ಅವರ ಕೊಡುಗೆಯಿಂದ ಇಂದು ನಾವೆಲ್ಲರೂ ಸರ್ವ ಸ್ವತಂತ್ರರಾಗಿ ಎಲ್ಲ ಅವಕಾಶಗಳನ್ನು ಸದುಪಯೋಗ ಪಡೆದುಕೊಂಡು ಸುಖ ಜೀವನದಲ್ಲಿ ನಾಗರಿಕರಾಗಿ ಬದುಕುತ್ತಿದ್ದೇವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜ್ ನ ರಾ ಪ್ರಾಚಾರ್ಯರಾದ ರಾಜೀವ್ ಆರ್ ಅವರು ವಹಿಸಿಕೊಂಡಿದ್ದರು.

ಈ ಸಂಧರ್ಭದಲ್ಲಿ ದೇವರೆಡ್ಡಿ ಗೌರವಾನ್ವಿತ ನ್ಯಾಯಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ಸಂಡೂರು,

ಬಿ.ವಿಜಯಕುಮಾರ್ ಅಧ್ಯಕ್ಷರು ವಕೀಲರ ಸಂಘ, ಕೆ.ಕುಮಾರಸ್ವಾಮಿ ಉಪಾಧ್ಯಕ್ಷರು ವಕೀಲರ ಸಂಘ, ಎನ್ ಎಂ ನಟರಾಜ್ ಶರ್ಮ ಕಾರ್ಯದರ್ಶಿ, ಮೈಲೇಶ್ ಬೇವೂರ್ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಶರಣಬಸಪ್ಪ ಕ್ಷೇತ್ರ ಸಮನ್ವಯಾದಿಕಾರಿಗಳು ಬಿ ಆರ್ ಸಿ,ಮಂಜುನಾಥ್ ಗೌಡ ಸದಸ್ಯರು ತಾಲೂಕು ಕಾನೂನು ನೆರವು ಸಮಿತಿ ಸಂಡೂರು, ಹಾಗೂ ಪ್ರಾರ್ಥನೆಯನ್ನು ಬಿಎಸ್ ಮಂಜುನಾಥ್, ಪ್ರತಿಜ್ನಾವಿಧಿಯನ್ನು ಮೈಲೇಶ್ ಬೇವೂರ್, ಉಪನ್ಯಾಸವನ್ನು ಸಿದ್ದೇಶ್ ಉಪನ್ಯಾಸಕರು,ಸ್ವಾಗತವನ್ನು ಬಿಕೆ ರೇಖಾ ಪ್ಯಾನಲ್ ವಕೀಲರು, ನಿರೂಪಣೆಯನ್ನು ಹೆಚ್. ಕುಮಾರಸ್ವಾಮಿ ಪ್ಯಾನಲ್ ವಕೀಲರು, ವಂದನಾರ್ಪಣೆಯನ್ನು ಡಿ.ನಾಗರಾಜ್ ಪ್ಯಾನಲ್ ವಕೀಲರು ಸೇರಿದಂತೆ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here