ಕೋವಿಡ್ ಮತ್ತು ಪಲ್ಸ್ ಪೋಲಿಯೊ ಜಾಗೃತಿ ರಥಕ್ಕೆ ಡಾ.ಗೋಪಾಲ್ ರಾವ್ ಚಾಲನೆ,

0
1277

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಜನ ಸಂಪರ್ಕ ಕಾರ್ಯಾಲಯದ ಕೋವಿಡ್ ಮುಂಜಾಗ್ರತೆ ಮತ್ತು ಪಲ್ಸ್ ಪೋಲಿಯೊ ಹಾಗೂ ರಾಷ್ಟ್ರೀಯ ಕಾರ್ಯಕ್ರಮಗಳ ಕುರಿತು ಜಾಗೃತಿ ಮಾಡಿಸಲು ಆಗಮಿಸಿರುವ ವಾಹನಕ್ಕೆ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಗೋಪಾಲ್ ರಾವ್ ಅವರು ಚಾಲನೆ ನೀಡಿ ಮಾತನಾಡಿದರು, ಇದೆ ಭಾನುವಾರ 27 ರಂದು ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲಾಗುತ್ತಿದೆ ಎಲ್ಲಾ ಮಕ್ಕಳಿಗೂ ಲಸಿಕೆ ಕೊಡಿಸ ಬೇಕು, ಹಾಗೆ ಎರಡೂ ಡೋಸ್ ಕೋವಿಡ್ ಲಸಿಕೆ ಹಾಕಿಸಿ ಕೊಳ್ಳುವಂತೆ ಜನರಿಗೆ ಜಾಗೃತಿ ಮೂಡಿಸಲು ವಾಹನದ ಮೂಲಕ ಮತ್ತು ಬೀದಿ ನಾಟಕದ ಮೂಲಕ ತಿಳಿಸುವುದು ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ತೋರಣಗಲ್ಲು ಗ್ರಾಮದ ಬನ್ನಿ ಮಂಕಾಳಮ್ಮ ದೇವಸ್ಥಾನದ ಆವರಣದಲ್ಲಿ ಬೀದಿನಾಟಕ ಪ್ರದರ್ಶನ ನೀಡಿದ ನಂತರ ತಾಲೂಕಿನ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಾದ ತಾರಾನಗರ, ಮೆಟ್ರಿಕಿ, ವಿಠಲಾಪುರ ಕೇಂದ್ರಗಳ ಹಳ್ಳಗಳಲ್ಲಿ ಜಾಗೃತಿ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು, ನಾಲ್ಕು ಕಡೆ ಬೀದಿನಾಟಕ ಮತ್ತು ಜಾಗೃತಿ ಮೂಡಿಸಿದ ನಂತರ ಬಳ್ಳಾರಿ ತಾಲೂಕಿಗೆ ವಾಹನ ಕಳಿಸ ಬೇಕಿದೆ, ಕಲಾ ತಂಡವು ಆಡು ಬಾಷೆಯಲ್ಲಿ ಹಾಡುಗಳು ಹಾಡುತ್ತಾ ಮತ್ತು ಬೀದಿ ನಾಟಕದ ಮೂಲಕ ಸಂದೇಶವನ್ನು ಮುಟ್ಟಿಸುವ ಕಾರ್ಯಮಾಡುತ್ತಿದ್ದಾರೆ, ಹಾಗೇ ವಾಹನದ ದ್ವನಿ ವರ್ಧಕದ ಮೂಲಕ ಸಂದೇಶಗಳನ್ನು ನೀಡುವ ಕಾರ್ಯ ಉತ್ತಮವಾಗಿದೆ, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚರಿಸಲಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಗೋಪಾಲ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹಮದ್,ಫಾರ್ಮಸಿ ಅಧಿಕಾರಿ ಮಂಜುನಾಥ್, ಸುನಿಲ್,ಮಾರೇಶ್, ಮಂಜುನಾಥ, ಮಾಬುಸಾಬ್, ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಮತ್ತು ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಶರಣಯ್ಯ ವಡಿಗೇರಿ , ವೀರಯ್ಯ, ಶುಕಮುನಿ,ಬೀರಪ್ಪ, ಆಶಾ ಕಾರ್ಯಕರ್ತೆಯರಾದ ಹನುಮಂತಮ್ಮ, ಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಮಲ್ಲಮ್ಮ, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here