ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಅಪಘಾತ ಸಂಭಿವಿಸಿದರೆ ಮೊದಲು ಸರಕಾರದಿಂದ ನೆರವು ಕಲ್ಪಿಸಲು ಶಾಸಕರಿಂದ ಪತ್ರ ನೀಡಿ : ಸಭೆಯಲ್ಲಿ ಕೂಲಿ ಕಾರ್ಮಿಕರು ಒತ್ತಾಯ

0
233

ಕುರುಗೋಡು:ಮಾ:14:-ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಜೀವನ ಸುರಕ್ಷಿತ ವ್ಯವಸ್ಥೆಗೆ ಮತ್ತು ಅಪಘಾತ ಸಂಭಿವಿಸಿದರೆ ಅಂತವರಿಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಲು ಶಾಸಕರಿಂದ ಒಪ್ಪಿಗೆ ಪತ್ರ ನೀಡಬೇಕು ಎಂದು ಕೂಲಿ ಕಾರ್ಮಿಕರು ಅಧಿಕಾರಿಗಳಿಗೆ ತಿಳಿಸಿದರು.

ಅಲ್ಲದೆ ಈ ಹಿಂದೆ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ವೇಳೆ ಮತ್ತು ಗ್ರಾಮ ತೊರೆದು ಬೇರೆ ಕಡೆ ಕೆಲಸ ಮಾಡಲು ತೆರಳಿದ ವೇಳೆಯಲ್ಲಿ ಅಪಘಾತಕ್ಕೆ ಹಿಡಾಗಿದ್ದ ಕಾರ್ಮಿಕರಿಗೆ ಸರಕಾರದಿಂದ ನೆರೆವು ಹಾಗೂ ಸುರಕ್ಷಿತ ವ್ಯವಸ್ಥೆ ಕಲ್ಪಿಸಿಲ್ಲ ಆದ್ದರಿಂದ ಅದನ್ನು ಜಾರಿಗೆ ಮಾಡಬೇಕು ಎಂದು ಅಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಓ ಮಂಜುನಾಥ್, ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಕೂಲಿ ಕಾರ್ಮಿಕರಿಗೆ ಇನ್ಸೂರೆನ್ಸ್ ವ್ಯವಸ್ಥೆ ಮಾಡಲಾಗಿದೆ,ಇದರಲ್ಲಿ 13 ರೂ ಖಾತೆ, 330 ರೂ ಖಾತೆ ಇದ್ದು ಒಟ್ಟು 2 ಲಕ್ಷ ವೆಚ್ಚದ ಇನ್ಶೂರೆನ್ಸ್ ಒದಗಿಸಲಾಗಿದೆ.ಇದನ್ನು ಪ್ರತಿಯೊಬ್ಬ ಕೂಲಿ ಕಾರ್ಮಿಕರು ಮಾಡಿಸಬೇಕಾಗಿದೆ ಎಂದರು.

ನಂತರ ಗ್ರಾಮಸ್ಥರು ಮಾತನಾಡಿ, ಏಳುಬೆಂಚಿ ಗ್ರಾಮದ ಎದುರು ಬಸವಣ್ಣನಿಂದ ಚನ್ನಯ್ಯನ ಅಂಗಡಿವರೆಗೆ ಚರಂಡಿ ದುರಸ್ಥಿಯಲ್ಲಿದ್ದು, ಅದನ್ನು ಆದಷ್ಟು ಬೇಗಾ ದುರಸ್ಥಿ ಮಾಡಬೇಕು ಇದರಿಂದ ನಿತ್ಯ ಜನರಿಗೆ ತೊಂದ್ರೆ ಆಗುತ್ತಿದೆ ಎಂದರು.

ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷ ಮಾತನಾಡಿ, ಸ್ಥಳವನ್ನು ಪರಿಶೀಲನೆ ಮಾಡಿ ಎಸ್ಟಿಮೆಂಟ್ ಮಾಡಿ ಮುಂದಿನ ದಿನಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

ತಿಮ್ಮಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಬೋರ್ ವೆಲ್ ಗಳು ನಿನಗುದಿಗೆ ಬಿದ್ದು ಹೋಗಿವೆ. ಬೇಸಿಗೆ ಸಮೀಪಸುತ್ತಿದ್ದು, ಬೋರ್ ವೆಲ್ ವ್ಯವಸ್ಥೆ ಮಾಡಿಕೊಡಬೇಕೆಂದು ಸಭೆಯಲ್ಲಿ ಗ್ರಾಮಸ್ಥರು ಪ್ರಸ್ತಾಪಿಸಿದರು.

ಈಗಾಗಲೇ ತಿಮ್ಮಲಾಪುರ ಗ್ರಾಮಕ್ಕೆ 4 ಬೋರ್ ವೆಲ್ ಮಂಜೂರು ಮಾಡಲಾಗಿದೆ. ಅದಕ್ಕೆ ಬೇಕಾದ ಸಾಮಗ್ರಿಗಳು ಬಂದಿದ್ದು ಶೀಘ್ರವೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಏಳುಬೆಂಚಿ ಗ್ರಾಪಂ ಯಲ್ಲಿ ಕೆರೆ ನಿರ್ಮಾಣ ಗೊಂಡು 3 ರಿಂದ 4 ವರ್ಷ ಕಳೆದರೂ ಕರೆಯಿಂದ ಗ್ರಾಮಗಳಿಗೆ ಇನ್ನೂ ನೀರು ಸರಬರಾಜು ಆಗುತ್ತಿಲ್ಲ ಕೆಲ ಪ್ರದೇಶಗಳಿಗೆ ಮಾತ್ರ ತಲುಪುತ್ತಿವೆ ಆದ್ದರಿಂದ ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೇನಾ ಕೆರೆ ಎಂದು ಗ್ರಾಮದ ಮುಖಂಡರು ಪ್ರಶ್ನಿಸಿದರು.

ಇದಲ್ಲದೆ ಗ್ರಾಪಂ ಗೆ ತ್ಯಾಜ್ಯ ವಿಲೇವಾರಿ ವಾಹನಗಳು ನೇಮಕಗೊಂಡು ತಿಂಗಳುಗಳೇ ಗತಿಸಿದರು ಗ್ರಾಮದಲ್ಲಿ ವಾಹನಗಳು ತ್ಯಾಜ್ಯ ವಿಲೇವಾರಿ ಮಾಡಲು ಮುಂದಾಗದೆ ಎಲ್ಲಂದರಲ್ಲಿ ಬಿದ್ದು ಗಬ್ಬು ನಾರುತ್ತಿವೆ ಎಂದು ಆರೋಪಿಸಿದರು.

ಸಭೆಯ ಕೊನೆಯದಲ್ಲಿ 2021-22 ನೇ ಸಾಲಿನಲ್ಲಿ ವಸತಿ ರಹಿತ 40 ಪಲಾನುಭವಿಗಳಿಗೆ ಆಶ್ರಮ ಮನೆಗಳನ್ನು ಆಯ್ಕೆ ಮಾಡಲಾಯಿತು. ಇದರಲ್ಲಿ ಅಂಬೇಡ್ಕರ್ ಯೋಜನೆ ಅಡಿಯಲ್ಲಿ 10 ಹಾಗೂ ಬಸವ ವಸತಿ ಯೋಜನೆ ಅಡಿಯಲ್ಲಿ 30 ಮನೆಗಳನ್ನು ಆಯ್ಕೆ ಪ್ರಕ್ರಿಯೆ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಸರ್ವ ಗ್ರಾಪಂ ಸದಸ್ಯರು, ಗ್ರಾಮದ ಮುಖಂಡರು, ಸಂಘ ಸಂಸ್ಥೆಯ ಮುಖಂಡರು ಸಭೆಯಲ್ಲಿ ಹಾಜರಿದ್ದರು.

-ಬಸಯ್ಯ ಗೆಣಿಕೆಹಾಳು ಮಠ್

LEAVE A REPLY

Please enter your comment!
Please enter your name here