ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆ ಕಾರ್ಯಾಗಾರ

0
94

ಮಡಿಕೇರಿ ಮಾ.18 :-ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಬಾರ್ಡ್ ವತಿಯಿಂದ ಹವಾಮಾನ ಬದಲಾವಣೆ ಕುರಿತು ಒಂದು ದಿನದ ಕಾರ್ಯಾಗಾರವು ಶುಕ್ರವಾರ ನಡೆಯಿತು.
ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಬಿ.ವಿ.ರಮೇಶ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಜ್ಞಾನಿಗಳು ನೀಡುವ ತಾಂತ್ರಿಕತೆಗಳ ಪ್ರಯೋಜನಗಳನ್ನು ಪಡೆದುಕೊಂಡು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ನಬಾರ್ಡ್ ವತಿಯಿಂದ ರೈತಪರ ಕಾರ್ಯಕ್ರಮಗಳನ್ನು ವಿವಿಧ ಅಭಿವೃದ್ಧಿ ಬ್ಯಾಂಕ್‍ಗಳ ಮೂಲಕ ಆರ್ಥಿಕ ಸಹಾಯದೊಂದಿಗೆ ನೆರವು ನೀಡಲಾಗುತ್ತಿದೆ ಎಂದು ರಮೆಶ್ ಅವರು ವಿವರಿಸಿದರು.
ನಂತರ ನಡೆದ ತಾಂತ್ರಿಕ ಅಧಿವೇಶನದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಹರೀಶ್ ಅವರು ಹವಾಮಾನ ಗುಣಗಳು, ಅವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು.
ಕಾಫಿ ಬೆಳೆಯಲ್ಲಿ ಹವಾಮಾನದಿಂದಾಗುವ ಲಕ್ಷಣಗಳು, ದುಷ್ಪರಿಣಾಮಗಳು ಮತ್ತು ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಸುಣ್ಣದ ಬಳಕೆ, ತುಂತುರು ನೀರಾವರಿ, ನೆರಳು ನಿರ್ವಹಣೆ, ಕಾಂಪೆÇೀಸ್ಟ್ ಉತ್ಪಾದನೆ ಮತ್ತು ಬಳಕೆ, ಕಾಫಿ ಗಿಡಗಳ ಆಕಾರ ನಿರ್ವಹಣೆ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಡಾ.ಹರೀಶ್ ಅವರು ಹೇಳಿದರು.
ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರದ ಮುಖ್ಯಸ್ಥರಾದ ಡಾ.ಅಂಕೇಗೌಡ ಅವರು ಮಾತನಾಡಿ ಕಾಳುಮೆಣಸು ಕೃಷಿಗೆ ಹವಾಮಾನ ಬದಲಾವಣೆಯಿಂದಾಗುವ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ,ತೋಟಗಾರಿಕೆ, ಕಾಫಿ ಬೋರ್ಡ್, ಸಾಂಬಾರ ಮಂಡಳಿ ಅಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಸಾಜೂ ಜಾರ್ಜ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here