ಕೋವಿಡ್ ಲಸಿಕಾ ಅಭಿಯಾನ ಮತ್ತು ಕೈ ತೊಳೆದುಕೊಳ್ಳುವಿಕೆ ಜಾಗೃತಿ ಮೂಡಿಸುವ ಜಾಗೃತಿ ರಥಕ್ಕೆ ಚಾಲನೆ

0
102

ಬಳ್ಳಾರಿ,ಮಾ.23 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಲ್ರ್ಡ್ ವಿಶನ್ ಇಂಡಿಯಾ ಸಹಯೋಗದಲ್ಲಿ ಕೋವಿಡ್ ಲಸಿಕಾ ಅಭಿಯಾನ ಮತ್ತು ಕೈ ತೊಳೆದುಕೊಳ್ಳುವಿಕೆ ಕುರಿತ ಜಾಗೃತಿ ಮೂಡಿಸುವ ಜಾಗೃತಿರಥಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಹಾಯಕ ಆಯುಕ್ತ ಅನ್ಮೋಲ್ ಜೈನ್ ಅವರು ಬುಧವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಾಮಾರಿ ಕೋವಿಡ್ ಇನ್ನೂ ನಮ್ಮಿಂದ ದೂರವಾಗಿಲ್ಲ;ಅದರಿಂದ ಸುರಕ್ಷಿತವಾಗಿರಲು ಲಸಿಕೆ ಪಡೆದುಕೊಳ್ಳಬೇಕು ಮತ್ತು ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಸಬೇಕು ಎಂದರು.
ಸ್ವಚ್ಛವಾಗಿರಲು ಮತ್ತು ಆರೋಗ್ಯವಾಗಿರಲು ಕೈ ತೊಳೆದುಕೊಳ್ಳುವಿಕೆ ಪರಿಣಾಮಕಾರಿಯಾದುದು ಮತ್ತು ಅತ್ಯಂತ ಪ್ರಯೋಜನವಾದುದು ಎಂದು ಹೇಳಿದ ಅವರು ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವಂತೆ ಅವರು ಸೂಚನೆ ನೀಡಿದರು.
ವಲ್ರ್ಡ್ ವಿಶನ್ ಇಂಡಿಯಾ ಯೋಜನಾಧಿಕಾರಿ ಪ್ರೇಮಲತಾ ಅವರು ಮಾತನಾಡಿ 9 ದಿನಗಳ ಕಾಲ ಜಿಲ್ಲೆಯ ಮೋಕಾ ಗ್ರಾಪಂ, ಬಸರಕೋಡು,ವಣೇನೂರು,ಸಂಗನಕಲ್ಲು, ಸಂಜೀವರಾಯನಕೋಟೆ, ಶಂಕರಬಂಡೆ, ಅಮರಾಪುರ, ಏಳುಬೆಂಚಿ, ಬೈರದೇವನಹಳ್ಳಿ ಗ್ರಾಪಂಗಳ ವ್ಯಾಪ್ತಿಯ 32 ಹಳ್ಳಿಗಳು ಹಾಗೂ ಬಳ್ಳಾರಿ ನಗರ ಮತ್ತು ಕೊಳಚೆ ಪ್ರದೇಶಗಳಲ್ಲಿ ಜಾಗೃತಿ ರಥವು ಸಂಚರಿಸಿ ಅರಿವು ಮೂಡಿಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಹಾಯಕ ಆಯುಕ್ತ ಅನ್ಮೋಲ್ ಜೈನ್ ಅವರು ಕೋವಿಡ್ ಲಸಿಕಾ ಅಭಿಯಾನ ಮತ್ತು ಕೋವಿಡ್ ಸಂದರ್ಭದಲ್ಲಿ ಸರಿಯಾಗಿ ಕೈ ತೊಳೆದುಕೋಳ್ಳುವಿಕೆಯಿಂದಾಗುವ ಪ್ರಯೋಜನಗಳ ಕುರಿತ ಭಿತ್ತಿಪತ್ರಗಳು,ಕರಪತ್ರಗಳು, ಹಾಗೂ ಆಡಿಯೋ ಮತ್ತು ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಆರ್‍ಸಿಎಚ್ ಅಧಿಕಾರಿಗಳಾದ ಡಾ.ಅನಿಲ್ ಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮೋಹನ್ ಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಲಾ ಸೇರಿದಂತೆ ಇತರರು ಇದ್ದರು

LEAVE A REPLY

Please enter your comment!
Please enter your name here