ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅಪದ್ಬಾಂಧವ; ಶಾಸಕ ಈ.ತುಕಾರಾಂ..!!

0
1456

-ಕೆ.ನಾಗರಾಜ್,ಬಂಡ್ರಿ.
ಸಂಡೂರು:ಮಾರ್ಚ್ 29: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ)ಯು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲು ಮುಂದಾಗಿದ್ದು ಎಲ್ಲರಿಗೂ ಗೊತ್ತಿರುವಂತಹ ಸಂಗತಿ. ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಇದೇ ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ರಾಜ್ಯಾದ್ಯಂತ ನಡೆಯುತ್ತಿವೆ.

ಸಂಡೂರು ತಾಲೂಕಿನಲ್ಲಿ ಒಟ್ಟು 08 ಪರೀಕ್ಷಾ ಕೇಂದ್ರಗಳಿದ್ದು, ಅವುಗಳಲ್ಲಿ 3940 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ ಚೋರನೂರುನಲ್ಲಿ ಎರಡು ಕೇಂದ್ರಗಳಲ್ಲಿ ಯಶವಂತನಗರ ಬಾಗದಿಂದ ಬಂಡ್ರಿ, ನಿಡುಗುರ್ತಿ, ಹೆಚ್.ಕೆ.ಹಳ್ಳಿ ಕಾಲಿಂಗೇರಿ, ಯರ್ರಯ್ಯನಹಳ್ಳಿ, ಗೊಲ್ಲಲಿಂಗಮ್ಮನಹಳ್ಳಿ ಇನ್ನಿತರೆ ಗ್ರಾಮ ಪಂಚಾಯಿತಿ ಹಳ್ಳಿಗಳಲ್ಲಿನ ಎಲ್ಲಾ ಹೈಸ್ಕೂಲ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಚೋರುನೂರುಗೆ ಬರುತ್ತಾರೆ. ಇದಕ್ಕಾಗಿ ಅವರು ಸಾಮಾನ್ಯವಾಗಿ 12 ರಿಂದ 25 ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಅಥವಾ ಆಟೋ, ಬೈಕ್ ಗಳಲ್ಲಿ, ಹೀಗೆ ಚೋರುನೂರು ಪರೀಕ್ಷಾ ಕೇಂದ್ರವಾದಗಿನಿಂದ ಪೋಷಕರು ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುವುದೇ ತ್ರಾಸದಾಯಕವಾಗಿತ್ತು ಯಾವುದೇ ಹಳ್ಳಿಗಳಿಂದ ಪರೀಕ್ಷಾ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಹೋಗಿ ತಲುಪಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿತ್ತು.

ಮಕ್ಕಳ ಹಾಗೂ ಪೋಷಕರ ಕಷ್ಟವನ್ನರಿತ ಮಾನ್ಯ ಸಂಡೂರು ಶಾಸಕರಾದ ಈ. ತುಕಾರಾಂ ರವರು ಪ್ರತಿವರ್ಷದಂತೆ ಈ ವರ್ಷ ಕಷ್ಟಪಡುವುದನ್ನು ಅರಿತು ,ಪರೀಕ್ಷೆಗಳು ಇನ್ನು ಒಂದು ವಾರವಿರುವಾಗಲೇ ಸಂಬಂಧಪಟ್ಟ ಕ.ರಾ.ರ.ಸಾ.ನಿಗಮದ ಸಂಡೂರು ಡಿಪೋ ಮ್ಯಾನೇಜರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿದಂತೆ ಸಂಬಂದಿಸಿದ ಅಧಿಕಾರಿಗಳೊಂದಿಗೆ ಸಭೆಯನ್ನು ಮಾಡಿ ಚರ್ಚಿಸಿ ಯಾವ ಯಾವ ಪರೀಕ್ಷಾ ಕೇಂದ್ರಗಳಿಗೆ ಬಸ್ ವ್ಯವಸ್ಥೆ ಇಲ್ಲವೋ ಅಂತಹ ಹಳ್ಳಿಯ ಶಾಲೆಗಳಿಗೆ ಬಸ್ ಹೋಗಿ ಪರೀಕ್ಷೆ ಬರೆಯುವ ಮಕ್ಕಳನ್ನು ನಿಗದಿತ ಸಮಯದೊಳಗೆ ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ನಿಮ್ಮದೇ ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿರಿವುದರಿಂದ, ಪರೀಕ್ಷೇ ಬರೆಯುವ ವಿದ್ಯಾರ್ಥಿಗಳ ಪೋಷಕರ ಮುಖದಲ್ಲಿ ಮಂದಹಾಸ ಬೀರಿದೆ.

ಜನಪ್ರಿಯ ಶಾಸಕ ತುಕಾರಾಂ ನಿರ್ದೇಶನದ ಪ್ರಕಾರ, ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಅನುಗುಣವಾಗಿ ಬಸ್ ನ್ನು ಪ್ರತಿಯೊಂದು ಪ್ರೌಢ ಶಾಲೆಗೆ ಹೋಗಿ ಅಲ್ಲಿಂದ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರಲು ಸಿಬ್ಬಂದಿಗೆ ತಿಳಿಸಲಾಗಿದೆ.

ಶಾಸಕರ ಬಸ್ ವ್ಯವಸ್ಥೆಯ ಈ ನಿಸ್ವಾರ್ಥ ಸೇವೆಗೆ ಮತ್ತು ಪರೀಕ್ಷೆ ಬರೆಯುವ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಅರ್ಧ ಲೀಟರ್ ನೀರಿನ ಬಾಟಲ್ ಹಾಗೂ ಒಂದು ಗುಡ್ ಡೇ ಬಿಸ್ಕೆಟ್ ಪ್ಯಾಕೆಟ್ ನ್ನು ನೀಡಿರುವುದು ಕ್ಷೇತ್ರದ ಬಡ ಗ್ರಾಮೀಣ ಮಕ್ಕಳ ಬಗ್ಗೆ ಇರುವ ಕಾಳಜಿಯನ್ನು ನಾವು ನೋಡಬವುದಾಗಿದೆ. ಅವರ ನಿಸ್ವಾರ್ಥ ಸೇವೆ ತಾಲೂಕಿನಾದ್ಯಂತ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ,
ಪೋಷಕರು ತಮ್ಮ ನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು, ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಬರುವುದು ಬಹಳ ತ್ರಾಸದಾಯಕ ಕೆಲಸವಾಗಿತ್ತು.

ಈ ಕಾರ್ಯಕ್ಕೆ ಕ್ಷೇತ್ರದ ಜನರೆಲ್ಲಾರಿಂದ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here