ಸಂಡೂರು ತಾಲೂಕಿನ ಮಕ್ಕಳಿಗಿಲ್ಲ ಉಚಿತ ಸಮವಸ್ತ್ರ ಮತ್ತು ಶಾಲಾಬ್ಯಾಗ್ ಬಾಗ್ಯ:

0
151

ಸಂಡೂರು:ಜ:15:- ಭಾರತೀಯ ಸಂವಿಧಾನದ ಆನುಚ್ಛೇದ-45ರ ಪ್ರಕಾರ 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಪ್ರಾಥಮಿಕ ಶಿಕ್ಷಣ ನೀಡುವುದು ರಾಜ್ಯ ಸರ್ಕಾರಗಳ ನಿರ್ದೇಶಿತ ಪ್ರಮುಖ ಕಾರ್ಯನೀತಿಗಳಲ್ಲಿ ಒಂದಾಗಿರುತ್ತದೆ. ಪ್ರಮುಖವಾಗಿ ರಾಷ್ಟೀಯ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀರಣಕ್ಕಾಗಿ ಕಡ್ಡಾಯ ಪ್ರಾಥಮಿಕ ಶಿಕ್ಷಣದಲ್ಲಿ ಮಹತ್ವದ ಗುರಿಯನ್ನು ಸಾಧಿಸಲು ಅನುಕೂಲವಾಗುವ ಉದ್ಯೇಶದಿಂದ ಕೇವಲ ಹಾಜರಾತಿಯ ಕ್ರಮವನ್ನು ಶಿಕ್ಷಣ ಸಾರ್ವತ್ರೀಕರಣದ ಮೂರು ಮುಖ್ಯ ದಿಕ್ಕುಗಳಾಗಿ ವಿಂಗಡಿಸಿದೆ. ಅವು: ಮಕ್ಕಳ ದಾಖಲಾತಿ, ಕಲಿಕೆಯಲ್ಲಿನ ಗುಣಮಟ್ಟ ಹಾಗೂ ಧಾರಣಾ ಶಕ್ತಿ ಎಂದು ಮೂರು ಅಳತೆಗೋಲಾಗಿ ನಿರ್ಧರಿಸಲಾಗಿದೆ.

ಸಂವಿಧಾನದ ನಿರ್ದೇಶಿತ ಅಂಶಗಳಲ್ಲದೆ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಒಬ್ಬರಿಗಿಂತ ಒಬ್ಬರು ಮುಂದಾಗಿ ಪ್ರಾಮುಖ್ಯತೆ ಮೇರೆಗೆ ಅನುಕ್ರಮವಾದ ಯೋಜನೆಗಳನ್ನು ರೂಪಿಸುವಲ್ಲಿ ನಿರತರಾಗಿದ್ದು, ಇಂತಹ ಅನುಕರಣೆಗಳಿಂದ ಹಾಗೂ ಸರ್ಕಾರಗಳ ಪರಿಶ್ರಮದಿಂದಾಗಿ ಹಲವಾರು ರೀತಿಯಲ್ಲಿ ಪ್ರಾಥಮಿಕ ಹಂತದಲ್ಲಿ ಅಭಿವೃದ್ಧಿಯನ್ನು ಸಾಧಿಸಲಾಗಿರುತ್ತದೆ.

ಪ್ರಾಥಮಿಕ ಹಂತದಲ್ಲಿ ಶಾಲೆಗಳಲ್ಲಿ ಮಕ್ಕಳು ದಾಖಲಾಗದಿರಲು ಅಥವಾ ಭಾಗವಹಿಸದಿರಲು ಕುಟುಂಬದ ಬಡತನ ಹಾಗೂ ಆರ್ಥಿಕ ಸಂಕಷ್ಟವೇ ಕಾರಣವಾಗಿರುತ್ತದೆ. ಈ ಕಾರಣಗಳು ಸರ್ಕಾರಗಳ ವಿಶೇಷ ಕೋರಿಕೆ ಎಂದು ಪರಿಗಣಿಸಿ ಇಂತಹ ಸಮಸ್ಯೆಗಳಲ್ಲಿ ಸರ್ಕಾರ ವಿಶೇಷವಾಗಿ ಮಧ್ಯಸ್ಥಿಕೆ ವಹಿಸಿ ಮಕ್ಕಳು ಶಾಲೆಯನ್ನು ತೊರೆಯದಂತೆ ಅಥವಾ ಶಾಲೆಗಳಿಗೆ ಆಕರ್ಷಿತರಾಗುವಂತೆ ಯೋಜನೆಗಳನ್ನು ರೂಪಿಸುವ ಮೂಲಕ ಶಾಲೆಗಳಲ್ಲಿ ಉತ್ತಮ ಹಾಜರಾತಿಗೆ ಅವಕಾಶವಾಗಿರುತ್ತದೆ.

ವಿಸ್ತರಿಸಿದ ಶಾಲಾ ಸೌಕರ್ಯಗಳು ಇದೀಗ ಕನಿಷ್ಠ ವರಮಾನದ ಕುಟುಂಬದಲ್ಲಿನ ಹೆಚ್ಚು ಹೆಚ್ಚು ಮಕ್ಕಳೂ ಸಹ ಶಾಲೆಗಳಿಗೆ ದಾಖಲಾಗಲು ಅನುಕೂಲವಾಗಿರುತ್ತದೆ. ಹೀಗೆ ದಾಖಲಾದ ಮಕ್ಕಳು ಕಡ್ಡಾಯ ಪ್ರಾಥಮಿಕ ಹಂತವನ್ನು ಪೂರ್ಣಗೊಳಿಸುವವರೆಗೆ ಶಾಲೆಯಲ್ಲಿ ಉಳಿಯಲು ಸರ್ಕಾರದ ಮಹತ್ವದ ಯೋಜನೆಗಳಾದ ಮಧ್ಯಾಹ್ನದ ಬಿಸಿಯೂಟ, ಉಚಿತ ಸಮವಸ್ತ್ರ, ಉಚಿತ ಪಠ್ಯಪುಸ್ತಕ, ಉಚಿತ ಶಾಲಾಬ್ಯಾಗ್ ಹಾಗೂ ನಿಯಮಿತವಾದ ಮಕ್ಕಳ ಆರೋಗ್ಯ ತಪಾಸಣಾ ಕಾರ್ಯಕ್ರಮಗಳು ಸಹಕಾರಿಯಾಗಿರುತ್ತದೆ.

ಉಚಿತ ಸಮವಸ್ತ್ರವಿತರಣೆಯ ಮುಖ್ಯ ಉದ್ಯೇಶಗಳು :

14 ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವುದು.
14 ವರ್ಷದ ಒಳಗಿನ ಎಲ್ಲಾ ಮಕ್ಕಳೂ ಶಾಲೆಗೆ ಕಡ್ಡಾಯವಾಗಿ ದಾಖಲಾಗಲು ಆಕರ್ಷಿಸುವುದು, ಹಾಗೂ ದಾಖಲಾದ ಮಕ್ಕಳು ಮಧ್ಯದಲ್ಲಿ ಶಾಲೆ ತೊರೆಯದಂತೆ ನೋಡಿಕೊಳ್ಳುವುದು.
ಎಲ್ಲಾ ಮಕ್ಕಳಲ್ಲಿ ಏಕತೆ ಮತ್ತು ಶಿಸ್ತು ರೂಪಿಸುವುದು.
ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಪೂರೈಕೆ ಯೋಜನೆಯು ದೇಶದ ಸ್ವಾತಂತ್ರ್ಯ ಪೂರ್ವದಲ್ಲೂ ಸಹ ಜಾರಿಯಲ್ಲಿತ್ತು, ಆದಾಗ್ಯೂ ರಾಜ್ಯ ಸರ್ಕಾರ ಕಡ್ಡಾಯ ಪ್ರಾಥಮಿಕ ಶಿಕ್ಷಣ ನೀತಿ ಜಾರಿಗೆ ತಂದಾಗ ಅನೇಕ ವಿಚಾರಗಳನ್ನು ಪರಾಮರ್ಶಿಸಿ ಹಾಗೂ ಸತತ ಪ್ರಯತ್ನಗಳ ಮೂಲಕ ಸಮವಸ್ತ್ರ ಪೂರೈಕೆಯನ್ನು ಒಂದು ಪ್ರೋತ್ಸಾಹದಾಯಕ ಕಾರ್ಯಕ್ರಮವಾಗಿ 1961ನೇ ಸಾಲಿನಿಂದ ಜಾರಿಗೆ ತರಲಾಯಿತು.

ರಾಜ್ಯದಲ್ಲಿ ಕರ್ನಾಟಕ ಸರ್ಕಾರ ವಿದ್ಯಾವಿಕಾಸ ಯೋಜನೆಯಡಿ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಗುತ್ತಿದೆ. ಹೀಗೆ ವಿತರಿಸಲಾಗುವ ಸಮವಸ್ತ್ರ ಬಟ್ಟೆಗಳನ್ನು ಪ್ರತಿ ತರಗತಿವಾರು ವಿವಿಧ ಅಳತೆಗಳಲ್ಲಿ ಸರಬರಾಜು ಮಾಡಲಾಗುತ್ತಿದೆ, ಈ ರೀತಿ ವಿವಿಧ ಅಳತೆಯನ್ನು ತರಗತಿ-1 ಮತ್ತು 2ನೇ ತರಗತಿ ಗಂಡು ಮತ್ತು ಹೆಣ್ಣುಮಕ್ಕಳಿಗೆ (ಅಳತೆ-1), 3 ಮತ್ತು 4ನೇ ತರಗತಿ ಗಂಡು ಮತ್ತು ಹೆಣ್ಣುಮಕ್ಕಳಿಗೆ (ಅಳತೆ-2), 5 ರಿಂದ 7ನೇ ತರಗತಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ(ಅಳತೆ-3), 8 ರಿಂದ 10ನೇ ತರಗತಿ ಗಂಡು ಮಕ್ಕಳಿಗೆ ಹಾಗೂ 8ನೇ ತರಗತಿಯ ಹೆಣ್ಣು ಮಕ್ಕಳಿಗೆ(ಅಳತೆ-4), 9 ಮತ್ತು 10ನೇ ತರಗತಿ ಹೆಣ್ಣು ಮಕ್ಕಳಿಗೆ (ಅಳತೆ-5), ಈ ರೀತಿಯಾಗಿ ಸಮವಸ್ತ್ರಗಳನ್ನು ಸರಬರಾಜು ಮಾಡಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಪ್ರಸಕ್ತಸಾಲಿನಲ್ಲಿ ಸರಕಾರಿ ಶಾಲೆಗಳು ನಾಲ್ಕು ತಿಂಗಳು ತುಂಬಿ 5 ತಿಂಗಳು ಕಳೆದರು ಇದುವರೆಗೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ, ಶೂ, ಸೈಕಲ್, ಬ್ಯಾಗ್ ಸೇರಿದಂತೆ ಇನ್ನಿತರೆ ಸೌಲಭ್ಯ ಪಡೆಯದೇ ಮಕ್ಕಳ ಕನವರಿಕೆ ಕನಸಗಾಗಿದೆ

ಕಳೇದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್ -19 ಆಲೆಯಿಂದ ಶಾಲೆಯ ಬಾಗಿಲು ಪ್ರಾರಂಭವಾಗದೇ ಅನ್ ಲೈನ್ ಮೂಲಕ ಶಿಕ್ಷಣ ಮುಂದುವರಿಕೆ ಮಾಡಲಾಗಿದ್ದು, ಪ್ರಸಕ್ತ ವರ್ಷ ಕೋರೋನಾ ಲಸಿಕೆಯಿಂದ ನಾವೆಲ್ಲರೂ ಸುರಕ್ಷಿತ ಎನ್ನೋ ದೈರ್ಯದನ್ವಯದ ಮೇಲೆ ಶಾಲೆಗಳು ಪ್ರಾರಂಭವಾಗಿದ್ದು. ಆದರೆ ಮಕ್ಕಳಿಗೆ ಪುಸ್ತಕ ಹಾಗೂ ಬಿಸಿಯೂಟ ಹೊರತು ಪಡಿಸಿದರೆ ಸರಕಾರದಿಂದ ಇನ್ನಿತರೆ ಸೌಲಭ್ಯಗಳು ಲಬಿಸಿಲ್ಲ,

ಮಕ್ಕಳಿಗೆ ಮೊದಲ ಅದ್ಯತೆ/ ಅಗತ್ಯವಿರುವ ಮೊದಲನೆ ಹಂತದ ಸಮವಸ್ತ್ರ ಸಹ ಸಿಕ್ಕಿಲ್ಲ, ಕರೊನಾದಿಂದಾಗಿ ಮೊದಲೇ ಉದ್ಯೋಗವಿಲ್ಲದೇ ಕಂಗಾಲಾಗಿರುವ ಪಾಲಕರು ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ಶೂ,ಗಳನ್ನು ಕೊಡಿಸುವಲ್ಲಿ ಪಾಲಕರುಗಳಿಗೆ ಸಾಧ್ಯವಾಗುತ್ತಿಲ್ಲ.ಪರಿಣಾಮ ಕೊರೊನಾ ಮಹಾಮಾರಿಯಿಂದ ಶೈಕ್ಷಣಿಕ–ಮನೆ ಜೀವನ ನಡೆಸಲು ಕೊರಾನಾದ ಕರಿ ಛಾಯೆಯ ಅಂತಕವೂ ಎದುರಾಗಿದೆ.

ಮಕ್ಕಳ ದಿನಚರಿ 1ರೂ ಮಾಯ:-
ಕಳೆದ ಎರಡು ಮೂರು ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಯಾವುದೇ ರೀತಿಯಾದಂತಹ ಹಣಕಾಸಿನ ತೊಂದರೆಯಾಗದಂತೆ ಪೋಷಕರಿಗೆ ಹೊರೆಯಾಗಬಾರದು ಮತ್ತು ಶಾಲಾ ತರಗತಿಗಳಲ್ಲಿ ಹಾಜರಾತಿ ಸಂಪೂರ್ಣವಾಗಿ ಭರ್ತಿಯಾಗಿರಬೇಕೆಂಬ ಸದುದ್ದೇಶದಿಂದ ಹೆಣ್ಣು ಮಕ್ಕಳಿಗೆ ಹಾಜರಾತಿಯ ದಿನಚರಿಯಲ್ಲಿ ಅಂದಿನ ಪ್ರಸಕ್ತ ಸರಕಾರ ಪ್ರತಿದಿನಕ್ಕೆ ವಿದ್ಯಾರ್ಥಿಗೆ ಹಾಜರಿಗೆ ಒಂದು ರೂ, ಮಕ್ಕಳಿಗೆ ಪ್ರೋತ್ಸಾಹಧನ ನೀಡಲು ಮುಂದಾಯಿತು,

ಆದರೆ ಯಾರಿಗೂ ಈ ಯೋಜನೆ ಉಪಯೋಗವಾದಂತಿಲ್ಲ ಈ ಯೋಜನೆಯ ಬಗ್ಗೆ ಶಾಲಾ ಮುಖ್ಯಗುರುಗಳು/ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರಿಯಾದ ಮಾಹಿತಿಯು ನೀಡದೇ ಯೋಜನೆಯ ಬಗ್ಗೆ ಚಕಾರವೆತ್ತುತ್ತಿಲ್ಲ, ಕಾಟಾಚಾರಕ್ಕೆ ಎನ್ನುವಂತೆ ಬರೀ ಮತಪಡೆಯಲು ಕೆಲ ವರ್ಗಗಳ ಓಲೈಸಲು ಇಂತಹ ಶಿಕ್ಷಣ ಕ್ಷೇತ್ರದ ಲಖಿತ ಯೊಜನೆಗಳು ಮುಗ್ದ ಜನರ ಮತ್ತು ಮಕ್ಕಳ ಮೂಗಿಗೆ ತುಪ್ಪ ಸವರಿದಂತೆ ಜಾರಿಯಾಗುತ್ತವೆ ಎಂದು ಸಾರ್ವಜನಿಕ ವಲಯದಲ್ಲಿ ಚೆರ್ಚೆಗೆ ಗ್ರಾಸವಾಗಿದೆ. ಕೋರೋನಾ ನೇಪಾರ್ಥೆಕ್ಕೆ ಸರಕಾರದಿಂದ ಬರುವ ಮಕ್ಕಳಿಗೆ ಸೌಲಭ್ಯಗಳಿಗೆ ಕೊಕ್ಕೆ ಬಿದ್ದಿದ್ದು, ಸಮವಸ್ತ್ರ, ಸೈಕಲ್, ಶೂ,ಗಳು ಯಾವಾಗ ನಮ್ಮ ಕೈ ಸೇರುತ್ತವೆ ಎಂದು ನಿತ್ಯ ಮಕ್ಕಳು ಜಾತಕ ಪಕ್ಷಿಯಂತೆ ಎದುರು ನೋಡುವಂತಾಗಿದೆ


ಇದೇ ತಿಂಗಳ 15 ನಂತರ ಅವಳಿ ಜಿಲ್ಲೆಯ ಎಲ್ಲಶಾಲೆ ಮಕ್ಕಳಿಗೆ ಸಮವಸ್ತ್ರ ವಿತಸಲಾಗುವುದು ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿತರೆಣೆ ಕಾರ್ಯ ನೆಡೆದಿದ್ದು. ನಮ್ಮ ಸಮಗ್ರ ಜಿಲ್ಲೆಗಳಿಗೆ ಜ,15 ನಂತರ ನಿಗದಿ ಪಡಿಸಲಾಗಿದೆ ಎಂದರು.
-ಸಿ.ರಾಮಪ್ಪ
ಉಪ ನಿರ್ದೇಶಕರು
ಸಾರ್ವಜನಿಕ ಶಿಕ್ಷಣ ಇಲಾಖೆ.ಬಳ್ಳಾರಿ


ಇನ್ನೆರೆಡು ದಿನಗಳಲ್ಲಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಸಮವಸ್ತ್ರ ವಿತರಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
-ಡಾ. ಐ. ಅರ್ ಅಕ್ಕಿ
ಕ್ಷೇತ್ರ ಶಿಕ್ಷಣಾಧಿಕಾರಿ
ಸಂಡೂರು.

LEAVE A REPLY

Please enter your comment!
Please enter your name here