ಸೋಮಲಿಂಗೇಶ್ವರ ರಥೋತ್ಸವ: ಸತತ 6ನೇ ವರ್ಷ ಪಟಾಕ್ಷಿ ಕೆ.ಎಸ್.ನಾಗರಾಜ್ ಗೌಡ

0
206

ಕೊಟ್ಟೂರು
ದವನದ ಹುಣ್ಣಿಮೆಯ ನಿಮಿತ್ತ ಕೊಟ್ಟೂರು ಜವಳಿ ಬಂಧುಗಳ ಆರಾಧ್ಯ ದೈವ ಸಾವಿರಾರು ಭಕ್ತರ ದೈವ ಸೋಮಲಿಂಗೇಶ್ವರ ಸ್ವಾಮಿಯ 67ನೇ ರಥೋತ್ಸವ ಶನಿವಾರ ಸಂಜೆ ಭಕ್ತರ ಸಡಗರ ಸಂಭ್ರಮದೊಂದಿಗೆ ನೆರೆವೇರಿತು.
ಮೋಡ ಕವಿದ ವಾತಾವರಣದಲ್ಲಿ ರಥೋತ್ಸವ ಚಾಲನೆ ಪಡೆದುಕೊಂಡಿತು. ರಥೋತ್ಸವ ಮುನ್ನ ಶ್ರೀಸೋಮಲಿಂಗೇಶ್ವರ ಸ್ವಾಮಿಯ ಪಟಾಕ್ಷಿ ಸವಾಲು ಹರಾಜು ಪ್ರಕ್ರಿಯೆ ನಡೆಯಿತು. ಶ್ರೀಸ್ವಾಮಿಯ ಪರಮ ಭಕ್ತ ಕೆ.ಎಸ್.ನಾಗರಾಜ್ ಗೌಡ 6101 ರೂಗಳಿಗೆ ಕೂಗಿ ಪಟಾಕ್ಷಿಯನ್ನು ತನ್ನದಾಗಿಸಿಕೊಂಡರು.

ನಾಗರಾಜ್‌ಗೌಡ ಸತತ 6ನೇ ವರ್ಷ ಪಟಾಕ್ಷಿಯನ್ನು ಹರಾಜ್ ಮೂಲಕ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಪ್ರಕ್ರಿಯೆ ಮುಗಿದ ಕೂಡಲೇ ರಥೋತ್ಸವ ಚಾಲನೆ ಪಡೆಯಿತು. ಉಜ್ಜಯಿನಿ ವೃತ್ತದಿಂದ ಗಾಂಧಿ ವೃತ್ತದವರೆಗೂ ಮುಖ್ಯ ಬಜಾರ್‌ನಲ್ಲಿ ರಥೋತ್ಸವ ಸಾಗಿ ಪುನಃ ವಾಪಾಸ್ ಬಂದು ಮೂಲ ನೆಲೆಗೆ ನಿಲುಗಡೆಗೊಂಡಿತು.
ಸೋಮಲಿಂಗೇಶ್ವರ ದೇವಸ್ಥಾನ ಬಳಗದ ಕಣಕುಪ್ಪಿ ಕೊಟ್ರೇಶ, ಜವಳಿ ಗಂಗಾಧರ, ಇಟ್ಟಿಗಿ ಚನ್ನಪ್ಪ, ಡಿಶ್ ಚನ್ನಪ್ಪ, ಗುರುಬಸವರಾಜ್ ಮತ್ತಿತರರು ರಥೋತ್ಸವದುದ್ದಕ್ಕೂ ಪಾಲ್ಗೊಂಡಿದ್ದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here