ಮೊಬೈಲ್ ಮೆಡಿಕಲ್ ಯುನಿಟ್ ಸೇವೆ ಮುಂದುವರೆಸಲು ಸಾರ್ವಜನಿಕರ ಆಗ್ರಹ.

0
922

ಸಂಡೂರು:ಜೂನ್:04:- ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ “ಮೊಬೈಲ್ ಮೆಡಿಕಲ್ ಯುನಿಟ್” ಸೇವೆ ಮುಂದು ವರೆಸಲು ಸಾರ್ವಜನಿಕರಿಂದ ಬೇಡಿಕೆ ವಿಕ್ತವಾಗಿದೆ

ಎನ್.ಹೆಚ್.ಎಮ್ ಅನುದಾನದಡಿ ಸ್ಕೊಡ್ ವೆಸ್ ಸಂಸ್ಥೆಯ ವತಿಯಿಂದ ಸಂಡೂರು ತಾಲೂಕಿನಲ್ಲಿ, ವಿಶೇಷವಾಗಿ 2016 ಜನವರಿ 1 ರಿಂದ ಪ್ರಾರಂಭವಾಗಿರುವ “ಮೊಬೈಲ್ ಮೆಡಿಕಲ್ ಯುನಿಟ್” ಮೂಲಕ ಜನರು ವಾಸಿಸುವ ಸ್ಥಳಗಳಲ್ಲೆ ಚಿಕಿತ್ಸೆ ಒದಗಿಸುವ ಸೇವೆಯು ಪ್ರಾರಂಭವಾಗಿ, 2016 ರಿಂದ ಚೋರುನೂರು ಹೋಬಳಿಯ ಬೊಮ್ಮಘಟ್ಟ, ಸೋವೆನಹಳ್ಳಿ, ತಿಪ್ಪನಮರಡಿ, ಅಂಕಮನಾಳ್, ಲಿಂಗದಳ್ಳಿ ಸೇರಿದಂತೆ ಹಲವು ಹಳ್ಳಿಗಳಲ್ಲಿ ಸೇವೆಯನ್ನು ಒದಗಿಸಿದ್ದು,

2020 ಜನವರಿ 16 ರ ರಿಂದ ತೋರಣಗಲ್ಲು, ತೋರಣಗಲ್ಲು ರೈಲ್ವೆ ನಿಲ್ದಾಣ,ಬಿ.ಆರ್ ಕ್ಯಾಂಪ್, ಜೆ.ಎನ್.ಆರ್ ಕ್ಯಾಂಪ್, ಕುರೇಕುಪ್ಪ ಗ್ರಾಮಗಳಲ್ಲಿ ಸ್ಕೊಡ್ ವೆಸ್ ಸಂಸ್ಥೆಯ ವಾಹನ ಜನರ ಸೇವೆಗೆ ಆಗಮಿಸುತ್ತಿದ್ದ “ಮೊಬೈಲ್ ಮೆಡಿಕಲ್ ಯುನಿಟ್” ಸೇವೆಯನ್ನು ಇದೇ ಎಪ್ರಿಲ್ 30 ರಿಂದ ಸ್ಥಗಿತ ಗೊಳಿಸಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ,

ಗ್ರಾಮದ ಓಣಿಗಳಲ್ಲಿ ಸುಲಭವಾಗಿ ಆರೋಗ್ಯ ಸೇವೆಗಳು ಲಭ್ಯವಾಗುತ್ತಿದ್ದವು, ಜ್ವರ, ಮೈಕೈ ನೋವು, ರಕ್ತ ಪರೀಕ್ಷೆ, ಗರ್ಭಿಣಿ ತಪಾಸಣೆ, ಶಿಶುಗಳ ತಪಾಸಣೆ, ಬಿ.ಪಿ, ಶುಗರ್ ಪರೀಕ್ಷೆ, ಸ್ಥಳದಲ್ಲೇ ಚಿಕಿತ್ಸೆ, ಸಣ್ಣ ಪುಟ್ಟ ಇಂಜುರಿಗಳಿಗೆ ಡ್ರಸ್ಸಿಂಗ್ ಸೌಲಭ್ಯ ದೊರೆಯುತ್ತಿತ್ತು, ಹಾಗೇ ಕೋವಿಡ್ ಲಸಿಕಾಕರಣ ಹೀಗೆ ಹಲವು ಸೇವೆಗಳು ಸುಲಭವಾಗಿ ದೊರೆಯುತ್ತಿತ್ತು, ಕಳೆದ ತಿಂಗಳಿಂದ ಅಮೃತವಾಹಿನಿ ಸೇವೆ ಸ್ಥಗಿತಗೊಂಡಿರುವುದಕ್ಕೆ ಜನರು ಬೇಸರ ವ್ಯಕ್ತ ಪಡಿಸಿ “ಮೊಬೈಲ್ ಮೆಡಿಕಲ್ ಯುನಿಟ್” ನ ಸೇವೆಯನ್ನು ಮುಂದು ವರೆಸಲು ಸರ್ಕಾರವನ್ನು ಕೋರಿದ್ದಾರೆ

LEAVE A REPLY

Please enter your comment!
Please enter your name here