ಕಾಲೇಜು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಿ:ತಿಮ್ಮಣ್ಣ ಚಮನೂರು

0
218

ಕೊಟ್ಟೂರು:ಜೂನ್:01:-ಕೊಟ್ಟೂರು ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಗಂಗೋತ್ರಿ ಬಿ.ಎಸ್.ಡಬ್ಲ್ಯೂ. ಪದವಿ ಮಹಾವಿದ್ಯಾಲಯ ಕೊಟ್ಟೂರು ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರ ಹಾಗೂ ಗ್ರಾಮೀಣ ಸಮಾಜ ಕಾರ್ಯ ಶಿಬಿರವನ್ನು ಗುರುವಾರ ಸಂಜೆ 7.30 ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಶ್ರೀ ತಿಮ್ಮಣ್ಣ ಚಮನೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪೊಲೀಸ್ ಠಾಣೆ ಖಾನಾಹೊಸಹಳ್ಳಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇವರು ರಾಷ್ಟ್ರೀಯ ಸೇವಾ ಯೋಜನೆ ಅಗತ್ಯ ಹಾಗೂ ಜನರಲ್ಲಿ ಇದರ ಬಗ್ಗೆ ಅರಿವು , ಕಾಲೇಜು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು ಬೆಳೆಸಿಕೊಳ್ಳಲು ಇದು ಒಂದು ಉತ್ತಮ ವೇದಿಕೆ ಎಂದು ತಮ್ಮ ಉದ್ಘಾಟನಾ ಹಿತನುಡಿಗಳನ್ನು ಮಾತನಾಡಿದರು.

ನಂತರ ಕಾರ್ಯಕ್ರಮ ಉದ್ದೇಶಿಸಿ ಶ್ರೀ ಬಿ.ಎಂ. ಚನ್ನ ವೀರಯ್ಯ ಶಾಸ್ತ್ರಿಗಳು ಹಾಗೂ ನಿವೃತ್ತ ಶಿಕ್ಷಕರು ಇವರು ನಮ್ಮ ಗ್ರಾಮದಲ್ಲಿ ಇಲ್ಲಿಯವರೆಗೂ ಯಾವುದೇ ಈ ತರಹದ ಶಿಬಿರಗಳು ನಡೆದಿಲ್ಲ..ನಮ್ಮ ಗ್ರಾಮಕ್ಕೆ ನೀವು ಬಂದಿರೋದು ತುಂಬಾ ಸಂತೋಷ ಹಾಗೇಯೇ ನಿಮ್ಮ ಏಳು ದಿನಗಳ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಆರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀಮತಿ ನಿರ್ಮಲಾ ಶಿವನ ಗುತ್ತಿ, ವೀಣಾ ಬಸವರಾಜ್, ಸಿ. ಬಿ.ರಜತ್,ರಚನಾ ಸ.ಹಿ. ಪ್ರಾ.ಶಾಲೆ ಮುಖ್ಯಗುರುಗಳಾದ ಜಿ. ಕೊಟ್ರೇಶ್ ಊರಿನ ಮುಖಂಡರಾದ ಶ್ರೀ ಲಿಂಗನಗೌಡ್ರು ಎನ್.ಜಿ.ಅನ್ವರ್ ಸಾಹೇಬ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀ ಪಾಲಾಕ್ಷ,ಸದಸ್ಯರ ರಮೇಶ್,ಜೀಲಾನ್ ಸಾಹೇಬ್, ಇನ್ನೂ ಅನೇಕರು ಉಪಸ್ಥಿತರಿದ್ದರು,

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಚ ಟ್ರಿಕಿ ಬಸವರಾಜ್ ವಹಿಸಿದ್ದರು, ಪ್ರಾಸ್ತಾವಿಕವಾಗಿ ಶ್ರೀ ಗುರುಬಸವ ರಾಜ್ ಶಿಬಿರದ ನಿರ್ದೇಶಕ, ನುಡಿದರು,ಕಾರ್ಯಕ್ರಮದಲ್ಲಿ ಬಿ.ಎಸ್.ಡಬ್ಲ್ಯೂ ಪದವಿಯಲ್ಲಿ ರ್ಯಾಂಕ್ ವಿಜೇತ್ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಬಿರದ ಸಂಯೋಜಕ ಶಶಿಕಿರಣ್ ಕೆ. ಸಹಶಿಬಿರಧಿಕಾರಿ ಗಳಾದ ಶ್ರೀ ಪೂರ್ಣಚಂದ್ರ,ಮರುಳಪ್ಪ ಕೆ, ಪ್ರಫುಲ್ಲ ಚಂದ್ರ ಉಪಸ್ಥಿತಿ ಇದ್ದರು. ಕಾರ್ಯಕ್ರಮವನ್ನು ಶಿಬಿರಾರ್ಥಿ ಐಶ್ವರ್ಯ ನಿರೂಪಿಸಿದರು, ಪ್ರಿಯಾಂಕ ಸ್ವಾಗತಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here