ಬಂಡ್ರಿ ಕೆಪಿಎಸ್ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಕ ಮಾಡುತ್ತಿರುವುದಾದರು ಏನು ಗೊತ್ತಾ..!!

0
865

ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯ ಬಂಡ್ರಿ ಗ್ರಾಮದ ಶಾಲೆಗಳೆಂದರೆ ತಾಲೂಕು/ಜಿಲ್ಲಾ/ರಾಜ್ಯಮಟ್ಟದಲ್ಲಿಯು ಸಹ ಹೆಸರುಗಳನ್ನು ಗಳಿಸಿಕೊಂಡಿದ್ದವು,ಆದರೇ ಇತ್ತೀಚಿಗೆ ಬೇರೆ ಬೇರೆ ಶಾಲೆಗಳಲ್ಲಿ ನಿರ್ಲಕ್ಷಿಸಲ್ಪಟ್ಟವರೆಲ್ಲಾ ಇಲ್ಲಿಗೆ ಬಂದು ನಾವು ಯಾಕೇ ಬಂದಿದ್ದೇವೆ ನಮ್ಮಗಳ ಕೆಲಸವೇನು ಎಂಬುದನ್ನು ಮರೆತು ಬೇರೆ ಶಿಕ್ಷಕರ ಕೆಲಸಗಳಲ್ಲಿ ಮೂಗು ತೂರಿಸುತ್ತಾ ದಿನಗಳನ್ನು ದೂಡುತ್ತಿದ್ದಾರೆ.

ಈ ಕೆಪಿಎಸ್ ಪ್ರೌಢಶಾಲೆಯಲ್ಲಿ ದಿನದ ಶಾಲೆ ಪ್ರಾರಂಭವಾಗುವುದಕ್ಕೂ ಮುಂಚೆ ಪ್ರೈಯರ್ ಮಾಡುವುದನ್ನು ಮರೆತುಬಿಟ್ಟಿದ್ದಾರೆ ಇಲ್ಲಿನ ಶಿಕ್ಷಕ ವರ್ಗದವರು, ನಾಡಗೀತೆ ಅಥವಾ ರಾಷ್ಟ್ರಗೀತೆಯೊಂದಿಗೆ ಆರಂಭವಾಗಬೇಕಾದ ಶಾಲೆಗಳು ಅದನ್ನು ಮರೆತುಬಿಟ್ಟಿದ್ದಾರೇ ಅ ಜವಾಬ್ದಾರಿ ಮುಖ್ಯಗುರುಗಳು ಹಾಗೂ ದೈಹಿಕ ಶಿಕ್ಷಕರದು,ಇಡೀ ದೇಶದಲ್ಲಿಯೇ ಮತ್ತು ರಾಜ್ಯದಲ್ಲಿಯೇ ಪ್ರೈಯರ್ ನಿಂದ ಆರಂಭವಾಗುವ ಶಾಲೆಗೆ ಒಂದು ನಿಯಮವಾದರೆ ಈ ಬಂಡ್ರಿ ಕೆಪಿಎಸ್ ಪ್ರೌಢಶಾಲೆಗೆ ಒಂದು ನಿಯಮ ನಾ..?

ಬಂಡ್ರಿ ಕೆಪಿಎಸ್ ಪ್ರೌಢ ಶಾಲೆಗೆ ವರ್ಷದ ಹಿಂದೆ ದೈಹಿಕ ಶಿಕ್ಷಕರಾಗಿ ರಾಮಪ್ಪ ಎಂಬುವವರು ಬಂದು ವರ್ಷಕಳೆಯುತ್ತಾ ಬಂದರೂ ಎಂಟು-ಒಂಬತ್ತು-ಹತ್ತನೇ ತರಗತಿಗಳ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದ ಬಗ್ಗೆ ಒಂಚೂರು ಕಲಿಸಿಲ್ಲ, ಶಾಲೆಯಲ್ಲಿ ಕ್ರೀಡಾ ಸಾಮಗ್ರಿಗಳು ಇಲ್ಲ ಅಂತಲ್ಲಾ ಲಕ್ಷಾಂತರ ರೂಪಾಯಿಗಳ ಸಾಮಗ್ರಿಗಳು ದೂಳು ಹಿಡಿಯುತ್ತಿವೆ,

ಕೆಪಿಎಸ್ ಪ್ರೌಢಶಾಲೆಯ ವಿದ್ಯಾರ್ಥಿಗಳ ತರಗತಿಗಳ ವೇಳಾಪಟ್ಟಿಯಲ್ಲಿ ಮಾತ್ರ ದೈಹಿಕ ತರಗತಿ, ಬೇರೆ ಏನು ಕೆಲಸವಿಲ್ಲ ಈ ಶಿಕ್ಷಕರಿಗೆ, ಈ ಶಾಲೆಯಲ್ಲಿ ಈ ಹಿಂದೆ ಕ್ರೀಡೆ-ಸಾಂಸ್ಕೃತಿಕ ವಿಷಯಗಳಲ್ಲಿ ಮಕ್ಕಳು ರಾಜ್ಯ ಮಟ್ಟದವರೆಗೂ ಹೋಗಿ ಹೆಸರನ್ನು ಪಡೆದಿದ್ದರು ಈಗ ವಿದ್ಯಾರ್ಥಿಗಳಿಗೆ ಅದೆಲ್ಲವೂ ತಿರುಕನ ಕನಸಿನಂತಾಗಿದೆ, ಮಕ್ಕಳು ಆಟಗಳನ್ನು ಆಡಲು ಇವರನ್ನು ಕೇಳಿದರೇ ಗದರಿಸಿ ಕಳಿಸುತ್ತಾರಂತೆ,ಆ ಮಕ್ಕಳು ಅಂದುಕೊಂಡಿರಬವುದು ಪಾಪ ಈ ದೈಹಿಕ ಶಿಕ್ಷಕರಿಗೆ ಆಟಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದು ಹಾಗೂ ಯಾವ ಆಟಗಳ ಗೊತ್ತಿಲ್ಲದಿರುವುದು.

ಈ ದೈಹಿಕ ಶಿಕ್ಷಕರು ತನ್ನ ಕೆಲಸದ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯ ನಿರ್ವಹಿಸುವುದಕ್ಕಿಂತ, ಮುಖ್ಯ ಗುರುಗಳ ಹಾಗೂ ಶಾಲೆಯ ಬೇರೆ ಶಿಕ್ಷಕರ ಕೆಲಸಗಳಲ್ಲಿ ಮೂಗು ತೂರಿಸುತ್ತಾ ಪ್ರಶ್ನೆ ಮಾಡುವುದರಲ್ಲಿಯೇ ಕಾಲ ಕಳೆಯುತ್ತಾ ದಿನದ ಸಮಯವೆಲ್ಲವನ್ನು ಮುಖ್ಯಗುರುಗಳ ಕೊಠಡಿಯಲ್ಲಿಯೇ ದಿನಗಳನ್ನು ದೂಡುತ್ತಿದ್ದಾರೆ

ಸ್ಥಳೀಯ ಗ್ರಾಮದ ಸಾರ್ವಜನಿಕರು ಹಾಗೂ ಕ್ರೀಡಾಭಿಮಾನಿಗಳು, ಹೇಳುವ ಹಾಗೇ ಈ ಶಾಲೆಯ ಪಿಟಿ ಮೇಸ್ಟ್ರು ಪೀಪಿ (ವಿಜಲ್)ಊದಿದ ಶಬ್ದವೇ ನಮಗೆ ಇದುವರೆಗೂ ಕೇಳಿಸಿಲ್ಲ, ಹಿಂದೆಲ್ಲಾ ಈ ಶಾಲೆಯ ಪಿಟಿ ಮೇಸ್ಟ್ರು ಆಟಗಳನ್ನು ಅಡಿಸುತ್ತಿದ್ರೆ ನಾವುಗಳು ಶಾಲೆಯ ಕಾಂಪೌಂಡ್ ಮೇಲೆ ಒಂದಿಚು ಜಾಗ ಬಿಡದೇ ಕುಳಿತು ನೋಡುತ್ತಿದ್ದೇವು,ಈಗ ಮಕ್ಕಳ ಬಾಯಲ್ಲಿ ಮೇಷ್ಟ್ರಗಳ ನ್ಯೂನ್ಯತೆಗಳ ಗುಣಗಾಣಗಳನ್ನೇ ದಿನವೂ ಕೇಳಿ ಕೇಳಿ ಸಾಕಾಗಿದೆ ಎನ್ನುತ್ತಾರೆ

ದೈಹಿಕ ಶಿಕ್ಷಕರ ಬಗ್ಗೆ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರು ಬಿಇಓ ರವರಿಗೆ ದೂರನ್ನು ನೀಡಿದ್ದು, ನಾವು ಶಾಲೆಯಲ್ಲಿ ಓದುವುದರ ಜೊತೆಗೆ ಆಟಗಳನ್ನು ಅಡಬೇಕು ಎಂದು ಬಹಳ ಅಸೆ ಆದರೆ ಪಿಟಿ ಮಾಸ್ಟರ್ ನಮಗೆ ಆಡಲು ಸಾಮಗ್ರಿಗಳನ್ನು ಕೊಡಿ ಎಂದರೆ ಕೊಡುವುದಿಲ್ಲ ನಾವು ಯಾರಿಗೆ ಕೇಳಬೇಕು ಹೇಳಿ ಸಾರ್ ಎನ್ನುತ್ತಾರೆ ವಿದ್ಯಾರ್ಥಿಗಳು

ಮಾನ್ಯ ಶಿಕ್ಷಣ ಸಚಿವರು/ಡಿಡಿಪಿಐ/ಬಿಇಓ ಅವರುಗಳು ಬಂಡ್ರಿ ಕೆಪಿಎಸ್ ಶಾಲೆಯ ದೈಹಿಕ ಶಿಕ್ಷಕರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರ/ವಿದ್ಯಾರ್ಥಿಗಳ ಮನವಿಯಾಗಿದೆ, ಕಾಯ್ದು ನೋಡೋಣವೇ..

LEAVE A REPLY

Please enter your comment!
Please enter your name here