ಮೈನಿಂಗ್ ಡಿಪ್ಲೋಮಾಗೆ ಪ್ರವೇಶ ಪಡೆದ ರಾಜ್ಯದ ಮೊದಲ ವಿದ್ಯಾರ್ಥಿನಿ ಹೊಸಪೇಟೆಯ ತಾಯಮ್ಮ.

0
1134

ಹೊಸಪೇಟೆ:ಜೂನ್:01:-ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಅಂತರಿಕ್ಷಯಾನ, ಕೌಟುಂಬಿಕ ಜೀವನ, ರಾಜಕೀಯ ಸೇರಿದಂತೆ ವೈವಿದ್ಯಮಯ ಕ್ಷೇತ್ರದಲ್ಲಿ ತೊಡಗಿದ ಮಹಿಳೆಯರ ಸಾಲಿಗೆ ಸೇರುವ ತವಕದಲ್ಲಿದ್ದಾಳೆ ನಮ್ಮೂರ ವಿದ್ಯಾರ್ಥಿನಿ ತಾಯಮ್ಮ. ಹೌದು!
ಇಂದು ಮಹಿಳೆ ಎಲ್ಲಾಕ್ಷೇತ್ರಗಳಲ್ಲಿ ತನ್ನ ಚಾಪು ಮುಡಿಸಿದ್ದು ಅಳಿದುಳಿದ ಕ್ಷೇತ್ರದಲದಲಿಯೂ ನಾನು ಕಾಲಿಡುವ ಮೂಲಕ ಸಾಧಿಸಬಲ್ಲೆ ಎಂಬುವುದನ್ನು ತೋರುತ್ತಿರುವ ಸಂದರ್ಭದಲ್ಲಿ ಹೊಸಪೇಟೆ 24ನೇ ವಾರ್ಡ್ ಜಂಬೂನಾಥ ರಸ್ತೆಯ ನಿವಾಸಿಯಾಗಿರುವ ತಾಯಮ್ಮ ಡಿಪ್ಲೋಮಾ ಇನ್ ಮೈನಿಂಗ್ ಡಿಪ್ಲೊಮಾ ಪ್ರವೇಶ ಪಡೆದು ಸಾಹಸಕ್ಕೆ ಕೈ ಹಾಕಿದ್ದಾಳೆ.

ಹೊಸಪೇಟೆಯ ಟಿಎಂಎಇ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಮಾಡುವ ಆಸೆ ಹೊಂದಿದ್ದರೆ ಅಂತಹ ವಿಶೇಷವೇನು ಆಗುತ್ತಿರಲಿಲ್ಲ, ಆದರೆ ಮೈನಿಂಗ್ ವಿಷಯ ಆಯ್ಕೆ ಮಾಡಿಕೊಳ್ಳುವ ಮೂಲಕ ನಾನು ಬೇರೆ ನನ್ನ ಆಲೋಚನೆಗಳು ಬೇರೆ, ನಾನು ಮೈನಿಂಗ್ ವಿಷಯದಲ್ಲಿ ಸಾಧನೆ ಮಾಡಬೇಕು ಎಂದು ನಿರ್ಧರಿಸಿರುವುದು ಮಾತ್ರ ಸಾಹಸವೇ ಸರಿ. ಮೈನಿಂಗ್ ಅತ್ಯಂತ ಜವಾಬ್ದಾರಿ ಮತ್ತು ಎಚ್ಚರಿಕೆಯಿಂದಲೇ ಕಾರ್ಯನಿರ್ವಹಸಬೇಕಾದ ವಲಯವಾಗಿದ್ದು ಈ ವರೆಗೂ ಇಂತಹ ಸಾಹಸಕ್ಕೆ ಯಾರು ಕೈಹಾಕಿರಲಿಲ್ಲಾ, ಮಹಿಳೆ ಇಂದು ಎಲ್ಲದಕ್ಕೂ ಸೈ ಎನ್ನುತ್ತಿರುವಾಗ ನಾನು ಇಂತಹ ಪ್ರಯತ್ನ ದ ಮೂಲಕ ಬಿನ್ನ ಎಂದು ತೋರಬೇಕು ಎಂದು ಕಠಿಣ ಶ್ರಮಹಾಕಿ ಸಾಧನೆ ಮಾಡಬೇಕು ಇತರ ಮಹಿಳೆರಿಗೆ ಪ್ರೇರಣೆಯಾಗುವ ಹಂಬಲಹೊಂದಿರುವುದಾಗು ತಿಳಿಸುತ್ತಾಳೆ ವಿದ್ಯಾರ್ಥಿನಿ ತಾಯಮ್ಮ.

ನಾನು ಏನಾದರೂ ಹೊಸತನವನ್ನು ಮಾಡಬೇಕು ಎಂದು ನಮ್ಮ ಸೂತ್ತ ಇರುವ ಗಣಿಯಲ್ಲಿ ಹೊಸತನ ಚಿಂತಿಸಲಾದರೂ ಮೈನಿಂಗ್ ವಿಷಯಕ್ಕೆ ಆಸಕ್ತಿ ವಹಿಸಿರುವುದಾಗಿ ಈ ಪ್ರದೇಶದಲ್ಲಿ ವಿಭಿನ್ನವಾಗಿ ಆಲೋಚಿಸುವ ಮೂಲಕ ಹೊಸತನಕ್ಕೆ ಕಾರಣವಾಗಬೇಕು ಎಂದು ಆಯ್ಕೆಮಾಡಿಕೊಂಡಿರುವೆ, ನಾನು ಸಾಧಿಸುವೆ.

-ತಾಯಮ್ಮ
ವಿದ್ಯಾರ್ಥಿನಿ.

ವಿದ್ಯಾರ್ಥಿನಿಯಾಗಿ ಮೈನಿಂಗ್ ಆಯ್ಕೆ ಅಚ್ಚರಿ ಮೂಡಿಸಿತು. ಹೊಸ ಪ್ರಯತ್ನಕ್ಕೆ ಸಾಥ ನೀಡುವ ಮೂಲಕ ಮಹಿಳಾ ಸಾಧನೆಗೆ ಪ್ರೇರಣೆ ಆಗಲು ಕಾಲೇಜು ಎಲ್ಲರೀತಿಯಲ್ಲೂ ಸಹಕಾರ ನೀಡಲಿದೆ.

-ವೈ.ಎಂ.ಉಮಾಶಂಕರ
ಪ್ರಾಂಶುಪಾಲರು.

ಮಹಿಳೆ ಇಂದು ಎಲ್ಲಾರಂಗಗಳಲ್ಲಿ ವಿಭಿನ್ನವಾಗಿ ಸಾಧನೆ ಮಾಡುತ್ತಿರುವುದು ಸಾಮಾನ್ಯವಾಗಿದೆ ಮೈನಿಂಗ್ ಡಿಪ್ಲೊಮಾ ದ ಮೊದಲ ವಿದ್ಯಾರ್ಥಿನಿ ನಮ್ಮ ಕಾಲೇಜನಲ್ಲಿ ಸೇರಿಕೊಂಡರುವುದು ಹೆಮ್ಮೆ ಅವಳ ಸಾಧನೆಗೆ ಎಲ್ಲಾ ಹಂತದ ನೆರವು ನೀಡಲಾಗುವುದು.

-ಯೋಗಾನಂದ
ಮುಖ್ಯಸ್ಥರು ಮೈನಿಂಗ್ ಡಿಪ್ಲೊಮಾ.

-ವರದಿ:-ಪಿ.ವಿ.ಕಾವ್ಯ

LEAVE A REPLY

Please enter your comment!
Please enter your name here