ಕುಷ್ಠರೋಗ ಮುಕ್ತ ತಾಲೂಕು ರೂಪಿಸುವ ಅಂತಿಮ ಹಂತದಲ್ಲಿ ಸಂಡೂರು : ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

0
692

ಸಂಡೂರು:ಜ:30:-ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ಇಂದು ಆಚರಿಸಲಾದ “ಹುತಾತ್ಮರ ದಿನ” ಮತ್ತು ರಾಷ್ಟ್ರಪಿತ “ಮಹಾತ್ಮಾ ಗಾಂಧಿಜೀಯವರ ಪುಣ್ಯ ಸ್ಮರಣೆ”, ಹಾಗೂ “ವಿಶ್ವ ಕುಷ್ಠರೋಗ ದಿನ” ಅಂಗವಾಗಿ ಆಚರಿಸಲಾದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಇಂದು ಸ್ಪರ್ಶ್ ಕುಷ್ಠರೋಗ ಅರಿವು ಕಾರ್ಯಕ್ರಮ ಅಚರಿಸಿ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ, ಗಾಂಧಿಜೀಯವರ ಕುಷ್ಠರೋಗ ಮುಕ್ತ ಭಾರತ ನಿರ್ಮಾಣ ಕನಸು ನನಸಾಗುವ ದಿನಗಳು ಸಮೀಪಿಸುತ್ತಿದೆ, ಕುಷ್ಠರೋಗದ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ, ಇಡೀ ತಾಲೂಕಿಗೆ ಹತ್ತು ಪ್ರಕರಣಗಳು ಇವೆ, ಎಲ್ಲಾ ಪ್ರಕರಣಗಳು ಚಿಕಿತ್ಸೆಯಲ್ಲಿವೆ, ಈಗಾಗಲೇ ತಾಲೂಕಿನಲ್ಲಿ ಎರಡನೇ ಸುತ್ತು ಸಮೀಕ್ಷೆ ನಡೆಯುತ್ತಿದೆ, ಶಂಕಿತರ ತಪಾಸಣೆ ಮುಂದುವರೆದಿದೆ ಎಂದು ತಿಳಿಸಿದರು,

ಇದಕ್ಕೂ ಮುಂಚೆ ದೇಶ ಹುತಾತ್ಮರ ದಿನ ಆಚರಣೆ ಅಂಗವಾಗಿ ಯುದ್ದದಲ್ಲಿ ಹುತಾತ್ಮರಾದ ಸೈನಿಕರ ಸೇವೆ ಗುಣಗಾನ ಮಾಡಿ ಹುತಾತ್ಮರಾದವರಿಗೆ ಸ್ಮರಣಾರ್ತವಾಗಿ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡಲಾಯಿತು, ಹಾಗೆ ಸಾಬರಮತಿ ಆಶ್ರಮದಲ್ಲಿ ಮಹಾತ್ಮಾ ಗಾಂಧಿಜೀಯವರು ಕುಷ್ಠರೋಗಿಗಳ ಆರೈಕೆ ಬಗ್ಗೆ ವಿವರ ನೀಡಿ ಎರವಾಡ ಜೈಲಿನ ಪ್ರಸಂಗ, ಕುಷ್ಠರೋಗ ಪೀಡಿತರಾದ ಸಂಸ್ಕ್ರತ ವಿದ್ವಾಂಸರಾದ ಶ್ರೀ ದತ್ತಾತ್ರೇಯ ಪರ್ಚುರೆ ಶಾಸ್ತ್ರೀಗಳ ಆರೈಕೆ, ಅವರ ಒಡನಾಟದ ಬಗ್ಗೆ ವಿವರಿಸುತ್ತಾ, ಗಾಂಧಿಜೀಯವರು ಹುತಾತ್ಮರಾದ ನಂತರ ಅದೇ ರೀತಿಯಲ್ಲಿ ಆಶ್ರಮದ ಸ್ವಯಂ ಸೇವಕರು ಮುಂದುವರೆಸಿದ ಕುಷ್ಠರೋಗಿಗಳ ಆರೈಕೆ, ಮುಂದೆ “ಕುಷ್ಠರೋಗ ದಿನ” ಆಚರಣೆಯ ಬಗ್ಗೆ ಮಾಹಿತಿ ನೀಡಿದರು,

ಕುಷ್ಠರೋಗ ಮುಕ್ತ ಮಾಡಲು ಯಾವುದೇ ಮಚ್ಚೆಗಳು ಇದ್ದಲ್ಲಿ ಪರೀಕ್ಷೆಗೆ ಒಳಪಡ ಬೇಕು, ಕಾಯಿಲೆ ಪತ್ತೆಯಾದರೆ, ಪೂರ್ಣ ಚಿಕಿತ್ಸೆ ಪಡೆಯಬೇಕು, ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೈ ಎಂಬ ಕೀಟಾಣು ದಿಂದ ಬರುವ ರೋಗವಾಗಿದ್ದು ಶಾಪ, ಪಾಪ ಕರ್ಮಗಳಿಂದ ಬರುತ್ತದೆ ಎಂಬುದು ನಂಬ ಬಾರದು, ಪ್ರಾಥಮಿಕ ಹಂತದಲ್ಲೆ ಎಮ್,ಡಿ.ಟಿ ಬಹುವಿಧ ಔಷಧೀಯ ಪೂರ್ಣ ಚಿಕಿತ್ಸೆ ಪಡೆದರೆ ಅಂಗವಿಕಲತೆ ತಪ್ಪುವುದು, ಇತರರಿಗೂ ರೋಗ ಹರಡದು, ಬೇಗೆ ಪತ್ತೆ, ಪೂರ್ಣ ಚಿಕಿತ್ಸೆ, ಸಂಪರ್ಕಿತರ ಸಮೀಕ್ಷೆ, ಶಂಕಿತರ ಮರು ಪರೀಕ್ಷೆ ಎಂಬ ನಿಟ್ಟಿನಲ್ಲಿ ಇಲಾಖೆ ಸಾಗುತ್ತಿದೆ, ಗ್ರಾಮದಲ್ಲಿ ಕುಷ್ಠ ರೋಗಿಗಳು ಇದ್ದಲ್ಲಿ ಉಚಿತ ಚಿಕಿತ್ಸೆ ಕೊಡಿಸಿ, ಕಳಂಕ, ತಾರತಮ್ಯ ಮಾಡದೇ, ಅವರ ಆತ್ಮಗೌರವಕ್ಕೆ ಧಕ್ಕೆ ಬರದಂತೆ ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವ ಯುತವಾಗಿ ಬಾಳಲು ಅವಕಾಶ ಮಾಡಿಕೊಡವಂತೆ, ಆತ್ಮ ವಿಶ್ವಾಸದಿಂದ ಬಾಳಲು ಪುನರ್ ವಸತಿ, ಸೌಲಭ್ಯಗಳನ್ನು ಒದಗಿಸುವ ಹಾಗೆ ಮಾಡುವ ಕಾಯಾ,ವಾಚಾ, ಮನಸಾ ಎಲ್ಲರೂ ಶ್ರಮಿಸುವಂತೆ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು,

ಕಾರ್ಯಕ್ರಮದಲ್ಲಿ ಪ್ರತಿಜ್ಞೆಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಬೋಧಿಸಿದರು,

ಈ ಕಾರ್ಯಕ್ರಮದಲ್ಲಿ ಕುರೇಕುಪ್ಪ ಪುರಸಭೆ ಸದಸ್ಯರಾದ ಕೆ.ಕಲ್ಗುಡೆಪ್ಪ, ಮುಖಂಡರಾದ ಮಂಜುನಾಥ್, ಮಾಜಿ ಸದಸ್ಯರಾದ ಗಿರಿಯಪ್ಪ, ಶಿಕ್ಷಕರಾದ ಹನುಮಂತಪ್ಪ, ಆಶಾ ಪೆಸಿಲಿಟೇಟರ್ ಬಸಮ್ಮ, ಆಶಾ ಕಾರ್ಯಕರ್ತೆಯರಾದ ನೀಲಮ್ಮ, ತಿಮ್ಮಕ್ಕ, ಪಕ್ಕೀರಮ್ಮ, ಮಾಳಮ್ಮ, ಗ್ರಾಮದ ಮುಖಂಡರಾದ ಹೇಮರೆಡ್ಡಿ, ಹೊನ್ನುರಪ್ಪ, ಪ್ರಸಾದ್, ನಾಗರಾಜ್, ಶೀಲಪ್ಪ, ಕಾಸಿಂದೀರಾ,ಮಲ್ಲೇಶಪ್ಪ, ಹಾಗಲೂರಪ್ಪ, ದೊಡ್ಡ ಹನುಮಂತಪ್ಪ, ಗೋಪಾಲ್, ಹೊಸಗೇರಪ್ಪ, ಲೋಕರೆಡ್ಡಿ,ಮಂಜುನಾಥ ಗೌಡ, ನಾಗರಾಜ್, ಬಸವರಾಜ್, ದರ್ಶನ್ ಮತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಚರಿಸಿದ ಕಾರ್ಯಕ್ರಮದಲ್ಲಿ ಡಾ.ದೀಪಾ ಪಾಟೀಲ್, ಶುಶ್ರೂಷಣಾಧಿಕಾರಿ ಹುಲಿಗೆಮ್ಮ, ರೇಶ್ಮಾ, ಶ್ರೀನಿವಾಸ್, ಮಾಬುಸಾಬ್ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here