ಮಾತೃ ಇಲಾಖೆಯಾದ್ದರಿಂದ ತಾಯಿ ಪ್ರೀತಿ ತೋರಿಸಿ ; ಎಂ ಕುಮಾರಸ್ವಾಮಿ

0
300

ಕೊಟ್ಟೂರು:ಜೂನ್:01:-ತಾಲೂಕ ಕಛೇರಿ, ಕೊಟ್ಟೂರಿನಲ್ಲಿ ಇಂದು “ಕಂದಾಯ ದಿನಾಚರಣೆ” ಯನ್ನು ತಾಲೂಕ ಕಛೇರಿಯ ಪಕ್ಕದಲ್ಲಿರುವ ಪಾರ್ಕಿನಲ್ಲಿ ತಹಶೀಲ್ದಾರರು ಸಸಿ ನೆಡುವುದರ ಮೂಲಕ ಸರಳವಾಗಿ ಆಚರಿಸಿದರು.

ನಂತರ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಕೇಕ್ ಕತ್ತರಿಸಿ ಕಂದಾಯ ದಿನಾಚರಣೆಗೆ ಚಾಲನೆ ನೀಡಿದ ತಹಶೀಲ್ದಾರರಾದ ಕುಮಾರಸ್ವಾಮಿ.ಎಂ ಇವರು ಕಂದಾಯ ಇಲಾಖೆ ತುಂಬಾ ಪುರಾತನವಾದ ಇಲಾಖೆಯಾಗಿದ್ದು, ಎಲ್ಲಾ ಇಲಾಖೆಗಿಂತ ಹೆಚ್ಚಿನ ಜವಾಬ್ದಾರಿಯುತ ಇಲಾಖೆಯಾಗಿದೆ. ಈ ಇಲಾಖೆಯು ಮಾತೃ ಇಲಾಖೆಯಾಗಿದ್ದು, ವಿವಿಧ ಕಾರ್ಯಗಳಿಗೆ ಬರುವ ಸಾರ್ವಜನಿಕರಿಗೆ ತಾಯಿ ಪ್ರೀತಿ ತೋರಿಸಿ ಕಾರ್ಯ ಮಾಡಿಕೊಡಬೇಕು. ಜನನದಿಂದ ಹಿಡಿದು ಮರಣದವರೆಗೆ ವಿವಿಧ ನೂರಾರು ಕಾರ್ಯಗಳನ್ನು ಇಲಾಖೆ ನಿರ್ವಹಿಸುತ್ತಿದ್ದು, ಜನರಿಗೆ ನೇರ ಸಂಪರ್ಕದಲ್ಲಿರುವ ಇಲಾಖೆಯಾಗಿದೆ. ಸಂಕಷ್ಟದಲ್ಲಿರುವ ಜನರು ಬರುವುದರಿಂದ ಅವರ ನೋವಿಗೆ ಸ್ಪಂದಿಸುವುದು ಎಲ್ಲರ ಕರ್ತವ್ಯವಾಗಿದೆ. ಇಂತಹ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಹೆಮ್ಮೆ ಪಡಬೇಕು ಎಂದರು.

ಈ ಸಂಧರ್ಭದಲ್ಲಿ ದ್ಯಾವಮ್ಮ ಗ್ರಾ.ಲೆ. ಪ್ರಾರ್ಥಿಸಿದರು. ಆಶಾ ಎಂ,ಸಿರಾಜ್ ವುದ್ದೀನ್ ಪ್ರ.ದ.ಸ. ಮಾತಾಡಿದರು. ಮಹೇಂದ್ರ ಸರ್ವೆ ಸೂಪರ್ ವೈಜರ್, ಶ್ರೀಮತಿ ಲೀಲಾ ಎಸ್ ಶಿರಸ್ತೇದಾರರು, ಕಂದಾಯ ನಿರೀಕ್ಷಕರಾದ ಹಾಲಸ್ವಾಮಿ ಎಸ್.ಎಂ. ಗ್ರಾಮ ಲೆಕ್ಕಾಧಿಕಾರಿಗಳು, ಕಛೇರಿಯ ಹಾಗೂ ಸರ್ವೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here