ಸಮುದಾಯ ಜಾಗೃತಿಕರಣ ಪಾಕ್ಷಿಕ ಆಚರಣೆಗೆ ಚಾಲನೆ.

0
617

ಸಂಡೂರು: ಜು:1: ಸಮುದಾಯ ಜಾಗೃತೀಕರಣ ಪಾಕ್ಷಿಕ ಆಚರಣೆಗೆ ಚಾಲನೆಯನ್ನು ನೀಡಲಾಯಿತು,
ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಸಮುದಾಯ ಜಾಗತೀಕರಣ ಪಾಕ್ಷಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಈ ವರ್ಷ ಜುಲೈ 11 ರಂದು ಆಚರಿಸುವ “ವಿಶ್ವ ಜನಸಂಖ್ಯಾ ದಿನಾಚರಣೆ” ಅಂಗವಾಗಿ ಮೊದಲ ಹದಿನಾಲ್ಕು ದಿನ ಜೂನ್ 27 ರಿಂದ ಜುಲೈ 10 ರ ವರಗೆ ಅರ್ಹ ಫಲಾನುಭವಿಗಳಿಗೆ ಕುಟುಂಬ ಕಲ್ಯಾಣದ ಮಹತ್ವ ಮತ್ತು ಜನಸಂಖ್ಯೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಸೇವೆಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯವನ್ನು ಹಮ್ಮಿ ಕೊಂಡು,ಮಕ್ಕಳ ನಡುವಿನ ಅಂತರತಗೆ ತಾತ್ಕಾಲಿಕ ವಿಧಾನಗಳಾದ ಕಾಪರ್-ಟಿ, ಮಾಲಾ-ಎನ್, ಅಂತರ ಚುಚ್ಚುಮದ್ದು, ಛಾಯಾ ಮಾತ್ರೆಗಳು, ಕಾಂಡೋಮ್ ಬಗ್ಗೆ ಮಾಹಿತಿ ಒದಗಿಸುವುದು,

ಹಾಗೇ ಎರಡು ಮಕ್ಕಳ ನಂತರ ಶಾಶ್ವತ ವಿಧಾನ ಮಹಿಳೆಯರ ಸಂತಾನಹರಣಕ್ಕೆ ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆ, ಪುರುಷರ ಸಂತಾನಹರಣಕ್ಕೆ ವ್ಯಾಸೆಕ್ಟಮಿ ಶಸ್ತ್ರಚಿಕಿತ್ಸೆ ಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಅವರು ತಿಳಿಸಿದರು,

ಆಸ್ಪತ್ರೆಗಳಲ್ಲಿ ಐ.ಇ.ಸಿ ಕಾರ್ನರ್ ನಲ್ಲಿ ತಾತ್ಕಾಲಿಕ ವಿಧಾನಗಳ ವಸ್ತುಪ್ರದರ್ಶನ ಏರ್ಪಡಿಸಿ ಅರ್ಹ ದಂಪತಿಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು,

ಜುಲೈ 11ರಂದು “ವಿಶ್ವ ಜನಸಂಖ್ಯಾ ದಿನ” ಆಚರಿಸಿ ಜನಸಂಖ್ಯಾ ಸ್ಥಿರತೆಯ ಬಗ್ಗೆ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು, ನಂತರದ ಹದಿನಾಲ್ಕು ದಿನ ಜುಲೈ 11 ರಿಂದ 24 ರ ವರೆಗೆ ಜನಸಂಖ್ಯಾ ಸ್ಥೀರಿಕರಣ ಪಾಕ್ಷಿಕ ಆಚರಿಸಿ, ಕುಟುಂಬ ಕಲ್ಯಾಣ ಶಿಬಿರಗಳನ್ನು ನಡೆಸಿ ಅರ್ಹ ಫಲಾನುಭವಿಗಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ ಎಂದು ಅವರು ವಿವರಿಸಿದರು, ಈ ನಿಟ್ಟಿನಲ್ಲಿ ಇಂದು ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಬಿ.ಆರ್ ಕ್ಯಾಂಪ್ ನಲ್ಲಿ ಮಹಿಳೆಯರಿಗೆ ಕುಟುಂಬ ಕಲ್ಯಾಣ ಕುರಿತು ಅರಿವು ಮೂಡಿಸಲಾಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಆಶಾ ಕಾರ್ಯಕರ್ತೆ ವಿಜಯಶಾಂತಿ, ಹುಲಿಗೆಮ್ಮ, ಗ್ರಾಮದ ಮಹಿಳೆಯ ರಾದ ಶಾಂತಮ್ಮ, ಕೃಷ್ಣವೇಣಿ, ನೆಟ್ಟೆಮ್ಮ,ಶಬಾನಾಜ್,ಶಿಲ್ಪಾ, ಕಾವೇರಿ, ಫಾರ್ಮಸಿ ಅಧಿಕಾರಿ ಮಂಜುನಾಥ್, ಕೌನ್ಸಿಲರ್ ಪ್ರಶಾಂತ್,ವೆಂಕಪ್ಪ, ಶಶಿಧರ್,ಗೀತಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here