ವನಸಿರಿ ಫೌಂಡೇಶನ್ ದಂತಹ ಸಂಸ್ಥೆಗಳ ಬಳಸಿಕೊಂಡು ಸರ್ಕಾರ ಪರಿಸರ ಮಾಲಿನ್ಯ ನಿಯಂತ್ರಣ ಮಾಡಬೇಕು: ದ್ರಾಕ್ಷಾಯಣಿ ಗೋಮರ್ಸಿ

0
234

ರಾಯಚೂರು:ಜುಲೈ:04:- ಸಿಂಧನೂರು ತಾಲೂಕಿನ ಗೋಮರ್ಸಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಿದ್ಯಾಶ್ರೀ ಬಿ.ಎಮ.ಪಿ ಶಾಲೆ, ವನಸಿರಿ ಫೌಂಡೇಶನ್ ವತಿಯಿಂದ ಪರಿಸರ ಜಾಥಾ ಕಾರ್ಯಕ್ರಮ ಮತ್ತು ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ವಿದ್ಯಾಶ್ರೀ ಬಿ.ಎಮ,ಪಿ ಶಾಲೆಯ ಕಾರ್ಯದರ್ಶಿಗಳಾದ ಶ್ರೀಮತಿ ದ್ರಾಕ್ಷಾಯಣಿ ಮಾ.ಪಾ ಮಾತನಾಡಿ ಜಗತ್ತಿನ ಅಳಿವು ಉಳಿವು ಈ ಪರಿಸರದ ಮೇಲಿದೆ ಅದನ್ನು ನಾವುಗಳೆಲ್ಲರೂ ನಿರ್ಲಕ್ಷಿಸುತ್ತಿದ್ದೇವೆ ಪರಿಸರವನ್ನು ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದ ಮಾಲಿನ್ಯ ಮಾಡುವ ಮೂಲಕ ಹಾಳು ಮಾಡುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಇದನ್ನು ತಡೆಗಟ್ಟಲು ಏನೆಲ್ಲಾ ಯೋಜನೆಗಳನ್ನು ಜಾರಿಗೆ ತಂದರೂ ಪರಿಸರ ಮಾಲಿನ್ಯ ಮಾಡುವುದನ್ನು ತಡೆಗಟ್ಟಲಾಗುತ್ತಿಲ್ಲ, ಎಲ್ಲಾ ಕಡೆ ಪ್ಲಾಸ್ಟಿಕ್ ನಿಷೇಧ ಮಾಡಬೇಕು, ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ಹಾಕಬೇಕು, ಹಸಿಕಸ ಒಣಕಸ ಬೇರ್ಪಡಿಸುವ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ಈ ಯೋಜನೆಗಳನ್ನು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರು ತಮ್ಮ ತಂಡದ ಸದಸ್ಯರ ಜೊತೆಗೂಡಿ ಶಾಲಾ ಮಕ್ಕಳಿಗೆ ಆದ್ಯತೆ ನೀಡಿ ಪರಿಸರ ಜಾಗೃತಿ ಜಾಥಾ ಮತ್ತು ಸಸಿಗಳನ್ನು ನೆಡುವ ಮೂಲಕ ಎಲ್ಲಾ ಮಕ್ಕಳಿಗೆ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಪರಿಸರ ಉಳಿಸಿ ಬೆಳಸುವ ಕಾರ್ಯದಲ್ಲಿ ತೊಡಗಿರುವುದು ತುಂಬಾ ಶ್ಲಾಘನೀಯ ಎಂದರು.

ಈ ಕಾರ್ಯಕ್ರಮದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಮರೇಗೌಡ ಮಲ್ಲಾಪೂರ, ವಿದ್ಯಾರ್ಶೀ ಬಿ.ಎಮ.ಪಿ.ಶಾಲೆಯ ಅದ್ಯಕ್ಷರಾದ ಶ್ರೀ ಬಸವನಗೌಡ ಮಾ.ಪಾ,ಕಾರ್ಯದರ್ಶಿ ದ್ರಾಕ್ಷಾಯಣಿ ಮಾ.ಪಾ,ಶಾಲೆಯ ಮುಖ್ಯಗುರುಗಳಾದ ಶ್ರೀ ರೇವಣ ಸಿದ್ದಯ್ಯ,ಸರಕಾರಿ ಶಾಲೆಯ ಮುಖ್ಯಗುರುಗಳಾದ ಶ್ರೀಮತಿ ಜ್ಯೋತಿ ಲಕ್ಷೀ, ಶಿಕ್ಷಕರಾದ ವರುಣ ರಡ್ಡಿ, ವಿನಾಗವೇಣಿ, ಲಕ್ಷೀ,ಅಶೋಕ ಗಾಜಿ,ಮಂಜುನಾಥ,ಶ್ರೀಮತಿ ಉಷಾ,ಶ್ರೀ ಬಸವರಾಜ, ಪಂಚಾಯತಿ ಮುಖ್ಯಸ್ಥರಾದ ಹುಲ್ಲೇಶ ಹುದ್ಬಾಳ ವನಸಿರಿ ತಂಡದ ಸದಸ್ಯರಾದ ರಾಜು ಪತ್ತಾರ ಬಳಗಾನೂರ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಗ್ರಾಮದ ಯುವಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ:ಅವಿನಾಶ್ ದೇಶಪಾಂಡೆ

LEAVE A REPLY

Please enter your comment!
Please enter your name here