ಕೊಟ್ಟೂರು ಪೊಲೀಸ್ ಠಾಣೆ ಪಾರ್ಕಿಂಗ್ ಬೋರ್ಡ್ ಇದ್ದರೂ ವಾಹನ ನಿಲುಗಡೆ: ಪೊಲೀಸ್ ಅಧಿಕಾರಿಗಳ ನಿರ್ಲಕ್ಷ!

0
572

ಕೊಟ್ಟೂರು:ಜುಲೈ:09:- ತಾಲೂಕಿನ ಪೊಲೀಸ್ ಠಾಣೆಯ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಅಲ್ಲಲ್ಲಿ ಗುಸು ಗುಸು ಪಿಸು ಪಿಸು ಮಾತನಾಡುತ್ತಿದ್ದಾರೆ,ಯಾವ ವಿಷಯದ ಬಗ್ಗೆ ಎಂದು ಎಲ್ಲರಿಗೂ ಗೊತ್ತಿದೆ ಆದರೆ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ,

ಎಲ್ಲ ವಿಷಯವಾಗಿ ನಮ್ಮ ಪತ್ರಿಕೆಯ ತನಿಖಾ ತಂಡವು ಸಾಕ್ಷಾಧಾರಗಳ ಸಮೇತ ಮಾಹಿತಿಯನ್ನು ಕಲೆಹಾಕಿದ್ದು,ಸಮಯ ಹಾಗೂ ಸಂಧರ್ಭನುಸಾರ ವರದಿಯನ್ನು ತಮ್ಮಗಳ ಮುಂದೆ ಇಡುತ್ತೇವೆ ನಿರ್ದಾರ ನಿಮಗೆ ಬಿಟ್ಟಿದ್ದು.

ತಾಲೂಕಿನ ಪೊಲೀಸ್ ಠಾಣೆಯ ಆವರಣದ ಮುಂದೆ ನೋ ಪಾರ್ಕಿಂಗ್ ವ್ಯವಸ್ಥೆ ಇದ್ದರು ಸಹ ಕೂಡ ಅದನ್ನು ಪಾಲಿಸುತ್ತಿಲ್ಲ ಕಾನೂನುನನ್ನು ಹೇಳುವವರೇ ಕಾನೂನನ್ನು ಉಲ್ಲಂಘನೆ ಮಾಡಿದರೆ ನ್ಯಾಯ ಸಿಗುವುದಾದರು ಹೇಗೆ ಹೇಳಿ..! ಠಾಣೆಯ ಮುಂದೆ ಅವೈಜ್ಞಾನಿಕವಾಗಿ ಬೈಕ್ ಗಳನ್ನು ನಿಲ್ಲಿಸಿದ್ದಾರೆ

ಈ ಪಾರ್ಕಿಂಗ್ ವಿಷಯದ ಬಗ್ಗೆ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ ತೋರಿಸುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಮಾತುಗಳು ಕೇಳಿಬರುತ್ತಿವೆ ಇದರಿಂದ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಸಾರ್ವಜನಿಕರು ಹಾಗೂ ಠಾಣೆಯ ಅಧಿಕಾರಿಗಳ ಮದ್ಯೆ ಗೊಂದಲಗಳಾಗುತ್ತಿದ್ದು ಅದಕ್ಕೆ ಸಮಸ್ಯೆಯನ್ನು ಬಗೆಹರಿಸಲು ಸಂಬಂಡಪಟ್ಟ ಇಲಾಖೆಯ ಮೇಲಾಧಿಕಾರಿಗಳು ಮುಂದಾಗಬೇಕು ಎಂದು ಸಾರ್ವಜನಿಕರು ಪತ್ರಿಕೆಗೆ ಹೇಳಿದ್ದಾರೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here