ಪೆಲೆಟ್ ಪ್ಲಾಂಟ್ ನಿಂದ ಉದ್ಯೋಗ ಸೃಷ್ಟಿ, ವೈಜ್ಞಾನಿಕವಾಗಿ ಪೆಲೆಟ್ ಪ್ಲಾಂಟ್ ಸ್ಥಾಪನೆಗೆ ವಿರೋಧವಿಲ್ಲ

0
214

ಸಂಡೂರು:ಜುಲೈ:10:-ಹೊಸಪೇಟೆಯ ಎಂ.ಎಸ್.ಪಿ.ಎಲ್ ಲಿಮಿಟೆಡ್ ವತಿಯಿಂದ ಸಂಡೂರು ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮೆದು ಕಬ್ಬಿಣ ಉತ್ಪಾದನಾ ಘಟಕ (3ಎಂ. ಟಿ. ಪಿ. ಎ. ಸಾಮರ್ಥ್ಯದ ಐರನ್ ಓರ್ ಬೆನಿಫಿಕೇಶನ್ ಪ್ಲಾಂಟ್ ಮತ್ತು ಪೆಲೆಟ್ ಪ್ಲಾಂಟ್) ನಿರ್ಮಾಣಕ್ಕೆ ಸಂಬಂದಿಸಿ ಸಾರ್ವಜನಿಕ ಸಭೆ ನಡೆಯಿತು.
ತಾಲೂಕಿನ ಯಶವಂತನಗರ ಗ್ರಾಪಂ ವ್ಯಾಪ್ತಿಯ ಸೋಮಲಾಪುರ ಬಳಿ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿತ್ತು.

ಪ್ಲಾಂಟ್ ನಡೆಸುವುದರ ಜೊತೆಗೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗವಕಾಶ ಸಿಗುವುದರಿಂದ ತಾಲೂಕಿನ ಯಶವಂತನಗರ/ಸೋಮಲಾಪುರ ಗ್ರಾಮಕ್ಕೆ ಸೇರಿದ ಪೆಲೆಟ್ ಪ್ಲಾಂಟ್ ವೈಜ್ಞಾನಿಕವಾಗಿ ಬೆನಿಪಿಷಿಯನ್ ಪ್ಲಾಂಟ್ ನಡೆಸಲು ನಮ್ಮಿಂದ ಯಾವುದೇ ರೀತಿಯ ಅಭ್ಯಂತರ ಇರುವುದಿಲ್ಲವೆಂಬ ಉದ್ದೇಶದಿಂದ ಇದಕ್ಕೆ ನಮ್ಮ ಸಂಪೂರ್ಣ ಸಹಮತಿ,ಬೆಂಬಲ ಇರುತ್ತದೆಯೆಂದು ತಾಲೂಕಿನ ಕನ್ನಡಪರ – ರೈತಪರ,ಕಾರ್ಮಿಕರ ಪರವಾಗಿರುವ 48 ಸಂಘಟನೆಗಳು ಹಾಗೂ 30 ಎನ್ ಜಿ ಓ ಮತ್ತು ವಿವಿಧ ಜನಾಂಗದ ಮುಖಂಡರುಗಳು ಕಂಪನಿಯು ಪರಿಸರ ಸಂರಕ್ಷಣೆಗೆ,ರಾಷ್ಟ್ರೀಯ ಉದ್ಯಾನವನಕ್ಕೆ, ಔಷಧಿ ಸಸಿಗಳ ಬೆಳವಣಿಗೆಗೆ, ಮಹಿಳಾ ಸಬಲೀಕರಣಕ್ಕೆ,
ಯುವಕರಿಗೆ, ಪಧವಿದರರಿಗೆ ಶೈಕ್ಷಣಿಕವಾಗಿ,
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅಧ್ಯತೆಯನ್ನು ನೀಡುತ್ತೇವೆ ಎಂದು ಕಂಪನಿಯು ಹೇಳಿದೆ ಆದ್ದರಿಂದ ಕಾರ್ಖಾನೆ ಸ್ಥಾಪನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರಗಳನ್ನು ಸಲ್ಲಿಸಿ ರೈತಸಂಘದ ಅಧ್ಯಕ್ಷ ಉಜ್ಜಿನಯ್ಯ,ಎಐಟಿಯುಸಿ ಅಧ್ಯಕ್ಷೆ ನಾಗರತ್ನಮ್ಮ,ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಸತೀಶ್ ಹಾಗೂ ಕರವೇ ಅಧ್ಯಕ್ಷ ಪಿ.ರಾಜು ಪಾಳೇಗಾರ್ ಅವರುಗಳು ಮಾತನಾಡಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಗೂ ಸ್ಥಳೀಯರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಕಾರ್ಯನಿರ್ವಹಿಸಿದರೆ ಎಂ.ಎಸ್.ಪಿ.ಎಲ್ ಕಂಪನಿಯು ಪೈಲೆಟ್ ಪ್ಲಾಂಟ್ ನ್ನು ಸ್ಥಾಪಿಸಲು ನಮ್ಮ ಯಾವುದೇ ತಕರಾರು ಇಲ್ಲವೆಂದು ತಿಳಿಸಿದರು

ತಾಲೂಕಿನ ಸೋಮಲಾಪುರ ಗ್ರಾಮದ ಹತ್ತಿರ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯವರು ಕರೆದಿದ್ದ ಪರಿಸರ ಸಾರ್ವಜನಿಕ ಅಭಿಪ್ರಾಯ ಅಲಿಕೆಯ ಸಭೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರುಗಳು ಸಂಡೂರು ತಾಲೂಕು ಅತಿ ಹೆಚ್ಚು ಗಣಿಗಾರಿಕೆಯಿಂದಲೇ ಬದುಕನ್ನು ಕಟ್ಟಿಕೊಂಡಿದ್ದಾರೆ ಆದ್ದರಿಂದ ಸ್ಥಾಪಿಸುವಂತಹ ಕಾರ್ಖಾನೆ ಸ್ಥಳೀಯ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕು, ಸ್ಥಳೀಯ ವಿದ್ಯಾವಂತ ಯುವಕರಿಗೆ ಕಡ್ಡಾಯವಾಗಿ ಉದ್ಯೋಗ ನೀಡಬೇಕು.ಮೂಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಕಂಪನಿಯನ್ನು ಪ್ರಾರಂಭಿಸಲಿ ಎಂದರು.

ತಾಲೂಕಿನಲ್ಲಿ ಇರುವ 48 ಕನ್ನಡಪರ, ರೈತಪರ,ಕಟ್ಟಡ ಕಾರ್ಮಿಕರ ಪರ ಸಂಘಟನೆಗಳು ಮತ್ತು 30 ಎನ್ ಜಿ ಓ ಗಳ ಅಧ್ಯಕ್ಷರು, ಪದಾಧಿಕಾರಿಗಳು,ಕಾರ್ಮಿಕರು ಬಾಗವಹಿಸಿ ಸ್ಥಳೀಯರಿಗೆ ಉದ್ಯೋಗ, ಮೂಲಭೂತ ಸೌಲಭ್ಯ ಶಿಕ್ಷಣ ಕೊಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು, ಪರಿಸರ ರಕ್ಷಣೆ ಮೊದಲ ಅಧ್ಯತೆಯಾಗಬೇಕೆಂದು 300 ಕ್ಕೂ ಹೆಚ್ಚು ಮನವಿ ಪತ್ರಗಳನ್ನು ಸಲ್ಲಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ರೈತಪರ ಹಾಗೂ ಕನ್ನಡಪರ ಸಂಘಟನೆಗಳಾದ ರೈತಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಡಾ.ಬಿ.ಅರ್. ಅಂಬೇಡ್ಕರ್ ಸಂಘ, ಕನ್ನಡ ಕ್ರಾಂತಿದಳ, ರಿಪಬ್ಲಿಕನ್ ಸೇನಾ, ಸೇರಿದಂತೆ 40 ಸಂಘಟನೆಗಳು ಮತ್ತು ಎನ್ ಜಿ ಓ ಗಳಾದ ಸಂಘಮಿತ್ರ ಸೊಸೈಟಿ, ಸದ್ಗುರು ರಾಮಕೃಷ್ಣ ಪಾರ್ಮರ್ ರೂರಲ್ ಡೆವಲಪ್ಮೆಂಟ್ ಸೊಸೈಟಿ, ಶಕ್ತಿ ಎನ್ವೈರ್ನ್ಮೆಂಟ್ ರೂರಲ್ ದೇವಲಪ್ಮೆಂಟ್ ಸೊಸೈಟಿ, ಯುನೈಟೆಡ್ ಸೋಷಿಯಲ್ ಸರ್ವಿಸ್ ಸೊಸೈಟಿ, ನೇಚರ್ ಎನ್ವೈರ್ನ್ಮೆಂಟ್ ಪ್ರೊಟೆಕ್ಷನ್, ಅರ್ಥ್ ಗ್ರೀನ್ ಡೆವಲಪ್ಮೆಂಟ್ ಸೊಸೈಟಿ ಸೇರಿದಂತೆ 30 ಎನ್ ಜಿ ಓ ಗಳು ಸೇರಿದಂತೆ ತಾಲೂಕಿನ ಹಲವು ಹಾಗೂ ತಾಲೂಕಿನ ಯಶವಂತನಗರ ಗ್ರಾಪಂ ವ್ಯಾಪ್ತಿಯ ಸೋಮಲಾಪುರ ಸುತ್ತಮುತ್ತಲಿನ ಒಂದು ಸಾವಿರಕ್ಕೂ ಹೆಚ್ಚು ರೈತರು, ಕಾರ್ಮಿಕರು, ಸ್ಥಳೀಯರು ಸಾರ್ವಜನಿಕ ಅಲಿಕೆ ಸಭೆಯಲ್ಲಿ ಬಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶೆಣೈ ಮತ್ತು ಡಿವೈಎಸ್ಪಿ ಕಾಶಿನಾಥ್,ತಹಶೀಲ್ದಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು ಅವರು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here