ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ; ನೂತನ ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ ನೇಮಕಾತಿ ಆದೇಶ ರದ್ದುಪಡಿಸುವಂತೆ ಮನವಿ

0
82

ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ಕಾರ್ಯಕರ್ತರು, ಮೋರ್ಚಾಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರು, ಕಾರ್ಯಕರ್ತರು ಸೇರಿದಂತೆ, ದಿನಾಂಕ 13.02.2024ರಂದು ಸಂಡೂರು ಮಂಡಲದ ನೂತನ ಅಧ್ಯಕ್ಷರನ್ನಾಗಿ ನಾನಾ ಸಾಹೇಬ್ ನಿಕ್ಕಂ ರವರ ನೇಮಕಾತಿ ಆದೇಶ ಹೊರಡಿಸಿದ್ದು ಇದಕ್ಕೆ ಸಂಡೂರು ಮಂಡಲದ ಎಲ್ಲಾ ಪದಾಧಿಕಾರಿಗಳ ವಿರೋಧವಿದೆ ಎಂದು ಮಾನ್ಯ ಮಾಜಿ ಸಚಿವರರಾದ ಬಿ.ಶ್ರೀರಾಮುಲು ಹಾಗೂ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಅನಿಲ್ ನಾಯ್ಡು ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು

ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಮುಖಂಡರು ಸಂಡೂರು ಮಂಡಲದ ಅಧ್ಯಕ್ಷರ ನೇಮಕಾತಿಯಲ್ಲಿ ಶಿಸ್ತಿನ ಪಕ್ಷವಾದ ಭಾರತೀಯ ಜನತಾ ಪಕ್ಷದ ಮಾನದಂಡಗಳು ಯಾವ್ಯಾವು ಎಂಬುವುದೇ ಗೊಂದಲದ ಗೂಡಾಗಿದೆ,ಆಯ್ಕೆ ಪ್ರಕ್ರಿಯೆಯು ಸಂಘಟನೆಯ ಆಧಾರದಲ್ಲಿನಾ..? ಅಥವಾ ಜಾತಿ ವ್ಯವಸ್ಥೆಯಲ್ಲಿನಾ..? ಬಂಡವಾಳಶಾಹಿಗಳಾಗಿರಬೇಕಾ..? ಮಂಡಲದ ಅಧ್ಯಕ್ಷರ ನೇಮಕಾತಿಯಲ್ಲಿ ಬಾಗವಹಿಸಿದ ತಾಲೂಕಿನ ಮತ್ತು ಜಿಲ್ಲೆಯ ಕೋರ್ ಕಮಿಟಿಯ ಸದಸ್ಯರು ಯಾರ್ಯಾರು ಅವರುಗಳ ಅಭಿಪ್ರಾಯಗಳು ಏನೆಂಬುವುದನ್ನು ಸಂಗ್ರಹಿಸಿರುವಿರಾ ಇದಕ್ಕೆ ಸ್ಪಸ್ಟಿಕರಣ ನೀಡಿ ಎಂದು ಒತ್ತಾಯಿಸಿದರು

ನೂತನ ಅಧ್ಯಕ್ಷರ ಆಯ್ಕೆ ರದ್ದುಪಡಿಸಲು ಕಾರಣಗಳು:

■ರಾಜ್ಯದ ಪ್ರಭಾವಿ ನಾಯಕರಾದ ಮಾನ್ಯ ಶ್ರೀರಾಮುಲು ರವರ ಹತ್ತಿರ ಈ ವಿಚಾರದ ಕುರಿತು ಚರ್ಚಿಸಿದರೆ, ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ

■ಕಾರ್ತಿಕೇಯ ಎಂ ಘೋರ್ಪಡೆ ಅವರ ಬಳಿ ಮಾತನಾಡಿದರೆ ಮಂಡಲದ ಕಾರ್ಯಕರ್ತರ ಮತ್ತು ಮುಖಂಡರ ಅಭಿಪ್ರಾಯದ ಮೇರೆಗೆ ಪಕ್ಷ ಸಂಘಟನೆಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಲು ತಿಳಿಸಿರುವುದಾಗಿ ಹೇಳುತ್ತಿದ್ದಾರೆ

■ಮಂಡಲದ ನಿಕಟಪೂರ್ವ ಅಧ್ಯಕ್ಷರಾದ ಜಿ ಟಿ ಪಂಪಾಪತಿ ಅವರನ್ನು ವಿಚಾರಿಸಿದರೆ ಅವರು ಸಹ ಇದು ನನ್ನ ಗಮನಕ್ಕೆ ಇರುವುದಿಲ್ಲವೆಂದು ಹೇಳುತ್ತಿದ್ದಾರೆ

■ಮಂಡಲದ ಅಧ್ಯಕ್ಷರ ನೇಮಕಾತಿಯ ವೀಕ್ಷಕರಾಗಿ ಬಂದಂತಹ ಸಂಘಪರಿವಾರದ ಹಿನ್ನೆಲೆ ಇರುವ, ನಿಕಟಪೂರ್ವ ಜಿಲ್ಲಾ ಉಪಾಧ್ಯಕ್ಷರಾದ ರಾಮಲಿಂಗಪ್ಪ ಹಾಗೂ ಶಿವಶಂಕರ್ ರೆಡ್ಡಿ ರವರನ್ನು ಕೇಳಿದರೆ ನಾವುಗಳು ವರದಿಯನ್ನು ನೀಡಿರುವುದಾಗಿ ಹೇಳುತ್ತಿದ್ದಾರೆ.

■ನಾನಾ ಸಾಹೇಬ್ ನಿಕ್ಕಂ ರವರು 2018 ರಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿರುತ್ತಾರೆ,ಸ್ವತಃ ನಾನು ಪಕ್ಷದ ಖಜಾಂಚಿ ಎಂದು ಹೇಳಿಕೊಂಡಿರುತ್ತಾರೆ, ಇವರು ಪಕ್ಷ ನೀಡಿದ ಯಾವುದೇ ಕಾರ್ಯಕ್ರಮಗಳ ಜವಾಬ್ದಾರಿಯನ್ನು ಇಲ್ಲಿಯವರೆಗೆ ನಿರ್ವಹಿಸಿದ ನಿದರ್ಶನಗಳಿಲ್ಲ.

■ನಾನಾ ಸಾಹೇಬ್ ನಿಕ್ಕಂ ರವರ ಒಡಹುಟ್ಟಿದ ಸಹೋದರರಾದ ಅನಿಲ್ ನಿಕ್ಕಂ ರವರು ಕಾಂಗ್ರೇಸ್ ಪಕ್ಷದ ಹಾಲಿ ಶಾಸಕರ ಹತ್ತಿರ ಕಾಮಗಾರಿಗಳನ್ನು ತೆಗೆದುಕೊಂಡಿರುತ್ತಾರೆ ಇವರು ಸಾರ್ವಜನಿಕವಾಗಿ ಕಾಂಗ್ರೇಸ್ ಪಕ್ಷವನ್ನು ವರ್ಣಿಸುವುದಲ್ಲದೇ ನಾವುಗಳೆಲ್ಲರು ಸಹ ಕಾಂಗ್ರೇಸ್ ಪಕ್ಷದವರೆಂದು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ, ಮುಖ್ಯವಾಗಿ ಇಲ್ಲಿ ಗಮನಿಸಬೇಕಾದ ವಿಚಾರವೇನೆಂದರೆ ಸದರಿಯವರ ಕುಟುಂಬ ಮತ್ತು ಅವರ ಸಹೋದರ ಕುಟುಂಬ ಒಂದೇ ಮನೆಯಲ್ಲಿ ವಾಸವಿರುವುದರಿಂದ ಪಕ್ಷದ ಗೌಪ್ಯತೆಗಳು ಸೋರಿಕೆಯಾಗಿ ಪಕ್ಷದ ಸಂಘಟನೆಗೆ ಹಿನ್ನೆಡೆಯಾಗುವುದಂತು ಗ್ಯಾರಂಟಿ

■ಕಳೆದ 2019 ಮೇ ತಿಂಗಳಿನಲ್ಲಿ ಸಂಡೂರು ಪಟ್ಟಣದ ಪುರಸಭೆ ಚುನಾವಣೆಯಲ್ಲಿ ಎರಡನೇ ವಾರ್ಡ ನ ನಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಇವರ ಪತ್ನಿ ಮತ್ತು ಕುಟುಂಬವು ಸ್ಥಳೀಯವಾಗಿ ಇದ್ದರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಇರುವುದರಿಂದ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಷ್ಟೇ ಸಮರ್ಥವಾಗಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತಗಳು ಬಂದಿರುತ್ತದೆ ನಂತರ ಚುನಾವಣೆಯ ಫಲಿತಾಂಶ ನಿಯಮದ ಪ್ರಕಾರ ಡೀಪ್ ನಲ್ಲಿ ಕಾಂಗ್ರೇಸ್ ಅಭ್ಯರ್ಥಿಯು ಜಯಗಳಿಸುತ್ತಾರೆ, ಇದು ಇವರು ಪಕ್ಷಕ್ಕೆ ಮತ್ತು ನಮ್ಮ ಅಭ್ಯರ್ಥಿಗೆ ಮಾಡಿದ ಮಹಾ ಅಪರಾಧವಾಗಿರುತ್ತದೆ

■ಕೆಲವೇ ದಿನಗಳಲ್ಲಿ ಮಹತ್ತರವಾದ ಚುನಾವಣೆಗಳು ಎದುರಿಸುವ ಹೊಸ್ತಿಲಲ್ಲಿ ಇಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವುದರಿಂದ ಪಕ್ಷಕ್ಕೆ ಮತ್ತು ಕಾರ್ಯಕರ್ತರಿಗೆ ತುಂಬಲಾರದ ನಷ್ಟವನ್ನು ಉಂಟುಮಾಡುತ್ತದೆ, ಇವರು ಯಾವುದೇ ಚುನಾವಣೆಯಲ್ಲಿ ಇದುವರೆಗೂ ಸ್ಪರ್ದಿಸಿರುವುದಿಲ್ಲ ಮತ್ತು ಚುನಾವಣಾ ಕಾರ್ಯ ಚಟುವಟಿಕೆಗಳ ಹಾಗೂ ಸಂಘಟನೆಯ ಅನುಭವ ಸಹ ಇರುವುದಿಲ್ಲ

■ನಾನಾ ಸಾಹೇಬ್ ನಿಕ್ಕಂ ರವರ ಕುಟುಂಬ ಮತ್ತು ಲಾಡ್ ಕುಟುಂಬ ತುಂಬಾ ಅವಿನಾಭಾವ ಸಂಬಂಧವನ್ನು ಹೊಂದಿದೆ.

■ಇಂತಹ ಅನೇಕ ಲೋಪಗಳನ್ನು ಹೊಂದಿರುವ ಇಂಥವರನ್ನು ಆಯ್ಕೆಯಾಗಲು ಮುಖಂಡರಾದ ರಾಮಲಿಂಗಪ್ಪನವರ ವರದಿಯು ಇದೇನಾ..?

■ ಜಿಲ್ಲಾಧ್ಯಕ್ಷರೇ ತಾವುಗಳು ಈ ಹಿಂದೆ ಅನೇಕ ಸಲ ಪಕ್ಷ ಸಂಘಟನೆಯ ಸಭೆಗಳಲ್ಲಿ ಪ್ರಭಾವಿ ಸಂಘಟನಕಾರರಂತೆ ಬಾಷಣದ ಮೂಲಕ ಗಮನ ಸೆಳೆದಿದ್ದೀರಿ, ಈ ಆಯ್ಕೆ ಪ್ರಕೀಯೆಯಿಂದ ನೀವು ಕೇವಲ ಬಾಷಣಕ್ಕೆ ಮಾತ್ರ ಸೀಮಿತವೇ ಎಂಬಂತಾಗಿದೆ. ಈ ನಿಮ್ಮ ತಪ್ಪು ನಿರ್ಧಾರದಿಂದ ಅನೇಕ ಕಾರ್ಯಕರ್ತರಿಗೆ ನೋವುಂಟಾಗಿದೆ ಮತ್ತು ಪಕ್ಷದ ಬಗ್ಗೆ ಕೊಂಚ ಗೌರವವೂ ತಗ್ಗಿದೆ ಇದರಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ದೊಡ್ಡಮಟ್ಟದ ಹೊಡೆತ ಬೀಳಲಿದೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ತಮ್ಮಂಥಹ ಹಿರಿಯ ಸಂಘಟನಕಾರರು ಮತ್ತು ಪ್ರಭಾವಿ ಜಿಲ್ಲಾ ರಾಜಕಾರಣಿಗಳು ಕೊಡುವ ಸಂದೇಶವಾದರು ಏನೆಂಬುವುದೇ ನಮಗೆ ಅರ್ಥವಾಗುತ್ತಿಲ್ಲ ಈ ಒಂದು ತಪ್ಪು ನಿರ್ಧಾರವನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನದಲ್ಲಿ ಇದೇ ವಿಷಯದ ಕುರಿತು ರಾಜ್ಯ ಕಚೇರಿಯ ಮುಂದೆ ನೂರಾರು ಕಾರ್ಯಕರ್ತರು ಧರಣಿ ಕೈಗೊಳ್ಳಲಾಗುತ್ತದೆ ಇದಕ್ಕೆ ಆಸ್ಪದ ನೀಡದೇ ಕೂಡಲೇ ಸಂಡೂರು ಮಂಡಲದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾನಾ ಸಾಹೇಬ್ ನಿಕ್ಕಂ ರವರ ನೇಮಕಾತಿ ಆದೇಶವನ್ನು ಹಿಂಪಡೆಯಬೇಕೆಂದು ಮನವಿಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು

ಈ ಸಂಧರ್ಭದಲ್ಲಿ ಸಂಡೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲದ ಕಾರ್ಯಕರ್ತರು, ಮೋರ್ಚಾಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮತ್ತು ಮುಖಂಡರು ಇದ್ದರು

LEAVE A REPLY

Please enter your comment!
Please enter your name here