ಗೃಹರಕ್ಷಕ ಮತ್ತು ಪೌರರಕ್ಷಣಾ ದಿನ ಆಚರಣೆ, ಎಲ್ಲಾ ರಂಗಗಳಲ್ಲಿಯೂ ಗೃಹರಕ್ಷಕರ ಸೇವೆ ಪ್ರಶಂಸನಾರ್ಹ: ಕೆ.ತಿಮ್ಮಾರೆಡ್ಡಿ

0
83

ಬಳ್ಳಾರಿ,ಡಿ07: ಕಾನೂನು ಸುವ್ಯವಸ್ಥೆ,ಬಂದೋಬಸ್ತ್, ಚುನಾವಣಾ ಕರ್ತವ್ಯ, ರಕ್ಷಣೆ ಕಾರ್ಯಾಚರಣೆ ಸೇರಿದಂತೆ ಗೃಹರಕ್ಷಕರು ಎಲ್ಲಾ ರಂಗಗಳಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ವಿಚಾರವಾಗಿದೆ ಮತ್ತು ಅವರ ಸೇವೆಯು ಪ್ರಶಂಸನಾರ್ಹವಾದುದು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಗಳಾದ ಕೆ.ತಿಮ್ಮಾರೆಡ್ಡಿ ಅವರು ಹೇಳಿದರು.
ನಗರದ ಜಿಲ್ಲಾ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಗೃಹರಕ್ಷಕ ಮತ್ತು ಪೌರರಕ್ಷಣಾ ದಿನಾಚರಣೆ ಕುರಿತು ಅವರು ಮಾತನಾಡಿದರು.
ಎಲ್ಲಾ ಕ್ಷೇತ್ರಗಳಲ್ಲಿಯೂ ಗೃಹರಕ್ಷಕರು ಸಲ್ಲಿಸುತ್ತಿರುವ ಸೇವೆ ಪ್ರಶಂಸನಾರ್ಹವಾಗಿದ್ದು, ಇದೇ ರೀತಿಯಾಗಿ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮುಂದುವರೆಸಿಕೊಂಡು ಹೋಗುವಂತೆ ಗೃಹರಕ್ಷಕರಿಗೆ ಅವರು ಸಲಹೆ ನೀಡಿದರು.
ಗೃಹರಕ್ಷಕದಳ ಸಮಾದೇಷ್ಟರಾದ ಎಂ.ಎ.ಷಕೀಬ್ ಮಾತನಾಡಿ ಪ್ರತಿಯೊಬ್ಬರು ಗೃಹರಕ್ಷಕ ಸಂಸ್ಥೆಯ ದ್ಯೇಯೋದ್ದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗುವುದರೊಂದಿಗೆ ಸಮಾಜಕ್ಕೆ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವಂತೆ ಗೃಹರಕ್ಷಕರಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗೃಹರಕ್ಷಕ ದಿನಾಚರಣೆ ಅಂಗವಾಗಿ ಬಳ್ಳಾರಿ ಘಟಕದ ಹಿರಿಯ ಗೃಹರಕ್ಷಕರಾದ ಬಿ.ಈರಣ್ಣ ಮತ್ತು ಮಹಿಳಾ ಗೃಹರಕ್ಷಕಿ ಇ.ಪಾರ್ವತಿ ಅವರ ಅನನ್ಯ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಬಳ್ಳಾರಿ ಜಿಲ್ಲೆಯ ವಿವಿಧ ಅಧಿಕಾರಿಗಳಾದ ಬಸವರಾಜ್, ಸುರೇಶ್ ಜೋಶಿ, ಬಿ.ಕೆ.ಬಸವಲಿಂಗ, ಲೋಕೇಶ್, ವೆಂಕಟೇಶ, ನರಿ ಮಲ್ಲಿಕಾರ್ಜುನ, ಹೊನ್ನೂರುವಲಿ, ಬಿ.ನಾಗರಾಜ, ನಿವೃತ್ತ ಸಹ ಬೋಧಕರಾದ ಪಿ.ಗೋವಿಂದರಾಜುಲು ಸೇರಿದಂತೆ ಜಿಲ್ಲೆಯ ಗೃಹರಕ್ಷಕರು ಹಾಗೂ ಕಚೇರಿ ಸಿಬ್ಬಂದಿಯವರು ಭಾಗವಹಿಸಿದ್ದರು.
ಕಂಪ್ಲಿಯ ಗೃಹರಕ್ಷಕ ವಾದ್ಯವೃಂದ ರಾಷ್ಟ್ರಗೀತೆ ಹಾಡಿದರು. ಗೃಹರಕ್ಷಕಿ ನಾಗವೇಣಿ ಪ್ರಾರ್ಥಿಸಿದರು. ಕಾರ್ಯಕ್ರಮ ಎಸ್.ಎಂ.ಗಿರಿಶ್ ನಿರೂಪಿಸಿದರು. ಬಿ.ಎನ್.ಗೋಪಿನಾಥ ಸ್ವಾಗತಿಸಿದರು. ಎಲ್.ವಾಲ್ಯಾನಾಯ್ಕ ವಂದಿಸಿದರು.

LEAVE A REPLY

Please enter your comment!
Please enter your name here