ಪ್ರಸನ್ನಾನಂದ ಸ್ವಾಮೀಜಿ ಹೋರಾಟ ಬೆಂಬಲಿಸಿ ಬೀದಿಗಳಲ್ಲಿ ಮೆರವಣೆಗೆ

0
165

ವಿಜಯನಗರ/ಕೊಟ್ಟೂರು:ಮೇ:20:-
ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೋರಾಟ ಬೆಂಬಲಿಸಿ ಹಾಗೂ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ವರದಿ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ವಾಲ್ಮೀಕಿ ನವ ಯುವಕರ ಸೇವಾ ಸಂಘ ದಸಂಸಯೊಂದಿಗೆ ಪ್ರತಿಭಟನೆ ನಡೆಸಿತು.

ಸುಮಾರು ಇನ್ನೂರಕ್ಕೂ ಹೆಚ್ಚು ಜನರಿದ್ದ ಗುಂಪು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಸಿ, ಸರ್ಕಾರವಂತೆ ಸರ್ಕಾರ ಇವರಪ್ಪದ್ದೇನು ಸರ್ಕಾರ ಎಂದು ಘೋಷಣೆ ಕೂಗುತ್ತ ಹೋಗುವಾಗ ಅಲ್ಲಲ್ಲಿ ರಸ್ತೆ ತಡೆಯನ್ನು ಮಾಡಿ ನಂತರ ತಹಸೀಲ್ದಾರ್ ಕಚೇರಿಗೆ ತಲುಪಿದರು.

ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೈಕ್ಷಣಿಕ ಸಂಸ್ಥೆಗಳ ಪ್ರವೇಶ ಮತ್ತು ರಾಜ್ಯ ಸರ್ಕಾರ ಸೇವೆಗಳಲ್ಲಿರುವ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಪ.ಜಾಗೆ ಶೇ.17, ಪ.ಪಂ. ಶೇ.7.5 ಹೆಚ್ಚಿಸಬೇಕೆಂದು ಒಕ್ಕೂರಲಿನಿಂದ ಘೋಷಣೆ ಕೂಗಿದರು.

ಸರ್ಕಾರಿ ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆ ಮತ್ತು ಉದ್ದಿಮೆಗಳಲ್ಲಿ ಪ.ಜಾ.ಮತ್ತು ಪ.ಪಂಗಳಿಗೆ ಮೀಸಲಾಗಿತಿ ಹೆಚ್ಚಿಸಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ, ವಕೀಲ ಹನುಮಂತಪ್ಪ, ಪಕ್ಕೀರಪ್ಪ, ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಚಿರಬಿ ಕೊಟ್ರೇಶ, ವಾಲ್ಮೀಕಿ ಮುಂಗಡ ಹಾಗೂ ಕೊಟ್ಟೂರು ಕರವೇ ಅಧ್ಯಕ್ಷ ಎಂ ಶ್ರೀನಿವಾಸ್ ಟಿ. ರಾಮಣ್ಣ ಮಾತನಾಡಿದರು. ಎಸ್. ನಾಗರಾಜ್, ಬೆಣ್ಣಿಹಳ್ಳಿ ಹನುಮಂತಪ್ಪ, ಬಿ. ಅಂಜಿನಪ್ಪ, ಕೋವಿನಾಗಪ್ಪ, ಕಾಳಿಂಗಪ್ಪ, ದೀಪಾ ಪ್ರಕಾಶ, ಸೇರಿದಂತೆ ಇನ್ನೂರಕ್ಕೂ ಹೆಚ್ಚು ಜನರಿದ್ದರು. ತಹಸೀಲ್ದಾರ್ ಎಂ. ಕುಮಾರ್ ಸ್ವಾಮಿ ಪ್ರತಿಭಟನಾಕಾರರಿಂದ ಮನವಿ ಪತ್ರಪಡೆದು ಸರ್ಕಾರಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here