ಎಸ್ ಡಿ ಎಂ ಸಿ ಸಮಿತಿಗೆ ನೂತನ ಅಧ್ಯಕ್ಷ – ಉಪಾಧ್ಯಕ್ಷ ಅವಿರೋಧ ಆಯ್ಕೆ

0
516

ಕಂಪ್ಲಿ:ಜುಲೈ:20 ಕಂಪ್ಲಿ ತಾಲೂಕಿನ ನಂ 5 ಬೆಳಗೋಡು ಹಾಳ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2022-23ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಪಿ.ಪರಶುರಾಮ,ಉಪಾಧ್ಯಕ್ಷರಾಗಿ ನಬಿಸಾಬ್ ಪರೀಧಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಪಿ. ಪರಶುರಾಮ ಭಾರತೀಯ ದಲಿತ ಪ್ಯಾಂಥರ್ ಸದಸ್ಯರಾಗಿದ್ದು. ಹಾಗೂ ಉಪಾಧ್ಯಕ್ಷರಾಗಿ ನಬೀಸಾಬ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಂ.5 ಬೆಳಗೋಡು ಹಾಳ್ ಶಾಲಾ ಆವರಣದಲ್ಲಿ ಜುಲೈ 20ರಂದು ಬುಧವಾರ ನಡೆದ ಚುನಾವಣೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಮುಂಖಡರು,ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಸೇರಿದಂತೆ ಪೋಷಕರು ಪಾಲ್ಗೊಂಡಿದ್ದರು.

ಶಿಕ್ಷಣ ಇಲಾಖೆಯ ನಿಯಮದಂತೆ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಮಿತಿಗೆ ಮೀಸಲಾತಿ ಆಧಾರದಲ್ಲಿ 18 ಜನ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. 9 ಜನ ಮಹಿಳೆಯರು ಹಾಗೂ 9ಜನ ಪುರುಷರು ಸೇರಿದಂತೆ ಒಟ್ಟು 18 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ರೀತಿ ಆಯ್ಕೆಯಾದ 18 ಜನ ಸದಸ್ಯರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದರು ಎಂದು ಶಾಲೆಯ ಮುಖ್ಯೋಪಾಧ್ಯಯರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here