ಸಿದ್ದಾಪುರ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ನಿಯಂತ್ರಣದಲ್ಲಿವೆ,ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ; ಸಿ.ಇ.ಓ ರಾಹುಲ್‌ ಸಂಕನೂರ್,

0
359

ಸಂಡೂರು:ಜೂನ್:30:- ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಎರಡು ದಿನದಿಂದ ವಾಂತಿ ಭೇದಿ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌ ಸಂಕನೂರ್ ಅವರು ಗ್ರಾಮಕ್ಕೆ ಬೇಟಿ ಕೊಟ್ಟು ನಿನ್ನೆ ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷೆ ಮಾಡಲಾಗಿದ್ದು, ಕುಡಿಯುವ ನೀರಿನ ತಪಾಸಣೆ ವರದಿ ಬಂದಿರುವ ಪ್ರಕಾರ ಮೂರು ನೀರಿನ ಮೂಲಗಳು ಯೋಗ್ಯವಾಗಿರುವುದಿಲ್ಲವೆಂದು(ಎನ್.ಎಸ್.ಪಿ.ಪಿ) ತಿಳಿದು ಬಂದಿದ್ದು, ಇನ್ನು ನಾಲ್ಕು ಮೂಲಗಳ ವರದಿ ಬರಬೇಕಿದೆ, ಒಟ್ಟು10 ಪ್ರಕರಣಗಳು ವರದಿಯಾಗಿದ್ದು, ಎರಡು ಪ್ರಕರಣ ಬಳ್ಳಾರಿ ವಿಮ್ಸ್ ನಲ್ಲಿ ಮತ್ತು ಎರಡು ಪ್ರಕರಣ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಉಳಿದಂತೆ ಆರು ಪ್ರಕರಣ ಸಂಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಅವರು ತಿಳಿಸಿದರು,

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ದನ್ ಅವರು ಬೇಟಿ ನೀಡಿ, ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದು ಸ್ಥಳದಲ್ಲೆ ತಪಾಸಣೆ ಚಿಕಿತ್ಸೆ ನೀಡಲಾಗುತ್ತಿದೆ, ಸಿಬ್ಬಂದಿಯವರು ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆ ಬೇಟಿಯಲ್ಲಿ ಕರಪತ್ರ ನೀಡಿ ನಿಯಂತ್ರಣ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಉಳಿದಂತೆ ಮೂರು ನೀರಿನ ಮಾದರಿ ಮತ್ತು ಒಂದು ಬೇಧಿಯ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ, ಎಲ್ಲಾ ಔಷಧಿಗಳು ಇಡಲಾಗಿದೆ, ವಾಂತಿ ಭೇದಿ ಲಕ್ಷಣಗಳು ಕಂಡು ಕೂಡಲೇ ಚಿಕಿತ್ಸೆ ನೀಡಲು ಸೂಚಿಸಲಾಗಿದೆ, ಎರಡು ತಾರಾನಗರ ಮತ್ತು ರಾಮಘಡ ಗ್ರಾಮದ ಆಂಬ್ಯೂಲೆನ್ಸ್ ಮತ್ತು ಎಮ್.ಎಮ್.ಯು ನ ಒಂದು ಆಂಬ್ಯೂಲೆನ್ಸ್ ಗ್ರಾಮದಲ್ಲಿ ಇಡಲಾಗಿದೆ, ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು,

ತಾಲೂಕಿನ ಮಾನ್ಯ ಶಾಸಕರು ಹಾಗು ಸಿ.ಎಲ್.ಪಿ ಕಾರ್ಯದರ್ಶಿ ಇ ತುಕಾರಾಂ ಅವರು ಬೇಟಿ ನೀಡಿ ಅಗತ್ಯ ಸೇವೆ ನೀಡಲು ಸೂಚಿಸಿ, ಶುದ್ಧ ಕುಡಿಯುವ ನೀರನ್ನು ಪೂರೈಸಲು ಸೂಚಿಸಿ, ಪ್ರಕರಣ ಕಂಡಬಂದವರ ಮನೆಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿದರು,

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಮರಿಯಂಬಿ, ತಾಲೂಕು ನೋಡಲ್ ಅಧಿಕಾರಿ ಮತ್ತು ಡಿ.ಟಿ.ಓ ಡಾ.ಇಂದ್ರಾಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಭರತ್ ಕುಮಾರ್, ತಾರಾನಗರ ಪಿ.ಹೆಚ್.ಸಿ ಆಡಳಿತ ವೈದ್ಯಾಧಿಕಾರಿ ಡಾ. ಕುಶಾಲ್ ರಾಜ್, ಡಾ.ಅಕ್ಷಯ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್,ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಂಡೇಗೌಡ, ರೀಟಾ,ಅನಿತಾ, ಸಿ.ಹೆಚ್.ಓ ಸಂತೋಷ್, ಶಿಲ್ಪಾ,ದೀಪಾ, ಆಶಾ ಕಾರ್ಯಕರ್ತೆ ಪರಿಮಳ,ಗೀತಾ, ರೇಣುಕಾ, ಅನ್ನಪೂರ್ಣ, ಜಿಲ್ಲೆಯ ಕಾಲರಾ ನಿಯಂತ್ರಣ ತಂಡ ಮತ್ತು ಎಮ್.ಎಮ್.ಯು ತಂಡದ ಡಾ.ಶೃತಿ ಮತ್ತು ಸಿಬ್ಬಂದಿಯವರು ಹಾಜರಿದ್ದರು

LEAVE A REPLY

Please enter your comment!
Please enter your name here