ಸಂಡೂರು:ನಾಟಿ ಕೋಳಿಮರಿ ವಿತರಣೆ, ಜಾನುವಾರುಗಳ ಕೌ ಮ್ಯಾಟ್ ಯೋಜನೆಗೆ ಅರ್ಜಿ ಆಹ್ವಾನ

0
390

ಸಂಡೂರು ,ಜೂ.30: ಸಂಡೂರು ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ ಸಂಡೂರು ತಾಲೂಕು ವ್ಯಾಪ್ತಿಯ ಬಿಪಿಎಲ್ ಕಾರ್ಡ್ ಹೊಂದಿರುವ 106 ಗ್ರಾಮೀಣ ರೈತ ಮಹಿಳೆಯರಿಗೆ ಪ್ರತಿ ಫಲಾನುಭವಿಗೆ 5 ವಾರದ 20 ನಾಟಿ ಕೋಳಿಮರಿಗಳನ್ನು ಉಚಿತವಾಗಿ ವಿತರಿಸಲು ಹಾಗೂ ಅನುಸೂಚಿತ ಜಾತಿಗಳ ಕಾಯ್ದೆ 2013 ರಡಿಯಲ್ಲಿ ಶೇ.90 ಸಹಾಯಧನದಲ್ಲಿ 11 ಫಲಾನುಭವಿಗಳಿಗೆ ಕೌ ಮ್ಯಾಟ್(Cow Mat)ಗಳನ್ನು ನೀಡಲು (ಪರಿಶಿಷ್ಟ ಜಾತಿ-02 ಮತ್ತು ಪರಿಶಿಷ್ಟ ಪಂಗಡ-09) ಫಲಾನುಭವಿಗಳಿಂದ ಪ್ರತ್ಯೇಕವಾಗಿ ಅರ್ಜಿ ಅಹ್ವಾನಿಸಲಾಗಿದೆ ಎಂದು ಸಂಡೂರು ತಾಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೌ ಮ್ಯಾಟ್(Cow Mat) ಯೋಜನೆ ಪಡೆಯುವ ಫಲಾನುಭವಿಯು ಕಡ್ಡಾಯವಾಗಿ ಕನಿಷ್ಠ 02 ಮಿಶ್ರತಳಿ ಜಾನುವಾರುಗಳನ್ನು ಹೊಂದಿರಬೇಕು.

ಅರ್ಜಿಗಳನ್ನು ಸಂಡೂರು ತಾಲೂಕಿನ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪಡೆದುಕೊಂಡು ಜುಲೈ 15ರೊಳಗೆ ಸಲ್ಲಿಸಬೇಕು. ಅರ್ಜಿಯೊಂದಿಗೆ ಆಧಾರ್‍ಕಾರ್ಡ್, ಕುಟುಂಬ ಪಡಿತರ ಚೀಟಿಯ ಪ್ರತಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಾಗಿದ್ದರೆ ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಡೂರು ತಾಲೂಕಿನ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಹಾಗೂ ದೂ.08395-230338 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here