ಹೊಸಕೆರೆ ನಿರ್ಮಾಣಕ್ಕೆ ತಹಶೀಲ್ದಾರ್ ಟಿ. ಜಗದೀಶ್ ಭೇಟಿ ಸ್ಥಳ ಪರಿಶೀಲನೆ

0
235

ಕಾನಹೊಸಹಳ್ಳಿ:ಜುಲೈ:25:-ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಸಮೀಪದ ಸಿದ್ದಾಪುರ ಗ್ರಾಮಕ್ಕೆ ತಹಸೀಲ್ದಾರರಾದ ಟಿ ಜಗದೀಶ್ ರವರು ಭೇಟಿ ನೀಡಿ ಹೊಸಕೆರೆ ನಿರ್ಮಾಣಕ್ಕಾಗಿ ಸರ್ವೆ ನಂಬರ್ 867 ವಿಸ್ತೀರ್ಣ 12 ಎಕರೆ ಜಮೀನನ್ನು ಪರಿಶೀಲನೆ ನಡೆಸಿದರು.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನಲ್ಲಿ ಕಾಲಕಾಲಕ್ಕೆ ತಕ್ಕಂತೆ ಮಳೆಯ ಪ್ರಮಾಣ ಕಡಿಮೆಯಾಗಿ ಕುಡಿಯುವ ನೀರಿಗೂ ಸಹ ಆಹಕಾರವಾಗಿದೆ.ರೈತರು ಮಳೆಯಿಲ್ಲದೆ ಬೇರೆ ಕಡೆ ಹೋಗಿ ಜೀವನ ನಡೆಸುವ ಒಂದು ಪರಿಸ್ಥಿತಿ ಬಂದಿದೆ, ಬೇರೆ ಕಡೆ ರೈತರು ಕೂಲಿ ಕಾರ್ಮಿಕರು ಜೀವನ ನಡೆಸಲು ಹೋಗದಂತೆ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ತಂದರೆ. ಅಂತರ್ಜಲ ಹೆಚ್ಚಾಗಿ. ರೈತರ ಪಂಪ್ ಶೇಟ್ ಗಳಿಗೆ ಅನುಕೂಲವಾಗಲಿದೆ.
ಹಾಗೂ ಕುಡಿಯುವ ನೀರಿಗೂ ಸಹ ಸಮಸ್ಯೆ ಇಲ್ಲದಂತಾಗುತ್ತದೆ ಎಂದು ತಿಳಿದು. ತಾಲೂಕಿನ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣ ರವರು ತಾಲೂಕಿನಲ್ಲಿ 80 ಕೆರೆಗಳಿಗೆ ರೂಪಾಯಿ 670 ಕೋಟಿ ಅನುದಾನವನ್ನು ತಂದು ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಜಾರಿಗೆ ತಂದರು. ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಸುಮಾರು 80ರಷ್ಟು ಭಾಗ ಪೂರ್ಣಗೊಂಡಿದ್ದು ಅತಿಶೀಘ್ರದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳ್ಳಲಿದೆ.

ಈ ನಿಟ್ಟಿನಲ್ಲಿ ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದಾಪುರ ಗ್ರಾಮದಲ್ಲಿ ಸರ್ವೆ ನಂಬರ್ 867 ವಿಸ್ತೀರ್ಣ 12 ಎಕರೆ ಜಮೀನನ್ನು ಹೊಸಕೆರೆ ನಿರ್ಮಾಣಕ್ಕಾಗಿ ಮಾನ್ಯ ತಹಶೀಲ್ದಾರ್ ಟಿ.ಜಗದೀಶ್ ರವರು ಸಿದ್ದಾಪುರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಗ್ರಾಮಸ್ಥರೊಂದಿಗೆ ಮಾತನಾಡಿ ಶೀಘ್ರದಲ್ಲಿ ಸರ್ವೆ ನಡೆಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಗ್ರಾಮಸ್ಥರು ಕಾಮಗಾರಿಗೆ ಸಹಕರಿಸಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದರು.

ಈ ಸಂದರ್ಭದಲ್ಲಿ.ಸಿದ್ದಾಪುರ ಗ್ರಾಮದ ನಿವೃತ್ತ ಶಿಕ್ಷಕರಾದ ಮನೋಹರ ಮತ್ತು ಕಲ್ಲೇಶ್ ಶಿಕ್ಷಕರು,ಡಿಎಂ ಶಿವಪ್ರಕಾಶ್, ಜೆಎಸ್ ಶಿವಪ್ರಸಾದ್, ಜಿ ಬಸವರಾಜ್, ರವಿಕುಮಾರ್ ಸೇರಿದಂತೆ ಸಿದ್ದಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು

-ವರದಿ:ಡಿಎಂ ಈಶ್ವರಪ್ಪ

LEAVE A REPLY

Please enter your comment!
Please enter your name here