ಸರ್ವ ಧರ್ಮ ಸಾಮೂಹಿಕ ಮದುವೆ ಪ್ರಚಾರ ವಾಹನಕ್ಕೆ ಚಾಲನೆ

0
93

ಸಂಡೂರು:ಆಗಸ್ಟ್:04:- ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸಲಾಗಿದ್ದು, ನ.20 ರಂದು 306 ಜೋಡಿ ಸರ್ವ ಧರ್ಮಗಳ ಸಾಮೂಹಿಕ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್‌.ದಿವಾಕ‌ರ್ ಹೇಳಿದರು.

ಪಟ್ಟಣದ ವಿಜಯ ವೃತ್ತದಲ್ಲಿ ಸಾಮೂಹಿಕ ಮದುವೆ ಕುರಿತು ವಿಧಾನಸಭೆ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಪ್ರಚಾರಕ್ಕಾಗಿ ಸಂಚರಿಸುವ ಮೂರು ವಾಹನಗಳಿಗೆ ಪಟ್ಟಣದ ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭುಸ್ವಾಮಿಗಳು ಸೋಮವಾರ ಚಾಲನೆ ನೀಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಳೆದ 2 ವರ್ಷಗಳಿಂದ ಕೋವಿಡ್ ಸಾಂಕ್ರಾಮಿಕದ ಕಾರಣಕ್ಕೆ ಜನರ ಆರ್ಥಿಕ ಸ್ಥಿತಿ ಕುಸಿದಿದೆ ಎಂಬ ಕಾರಣಕ್ಕೆ ಸಾಮೂಹಿಕ ಮದುವೆ ಸಹಕಾರಿಯಾಗಲಿವೆ ಎಂದು ಕಾರ್ಯಕ್ರಮ ಹಮ್ಮಿಕೊಂಡಿರುವೆ. ವಾಲ್ಮೀಕಿ ಪೀಠದ ಜಗದ್ಗುರುಗಳು, ಮಂತ್ರಾಲಯದ ರಾಘವೇಂದ್ರ ಮಠದ ಶ್ರೀಗಳು, ಕಾಗಿನೆಲೆಯ ನಿರಂಜನ ಸ್ವಾಮಿಗಳು, ಆನಂದ ಗುರೂಜಿ ಯಶವಂತನಗರದ ಗಂಗಾಧರ ಮಹಾಸ್ವಾಮಿಗಳು, ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭುಸ್ವಾಮಿಗಳು, ಸಚಿವ ಬಿ.ಶ್ರೀರಾಮುಲು, ಬಿಜೆಪಿ ಹಿರಿಯ ಮುಖಂಡ ಕಾರ್ತಿಕೇಯ ಘೋರ್ಪಡೆ ಸೇರಿದಂತೆ ರಾಜ್ಯದ ಹಲವು ಜನ ಪ್ರಮುಖರು ಭಾಗಿಯಾಗಲಿದ್ದಾರೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಕೆ.ಎಸ್‌.ಕುಮಾರಸ್ವಾಮಿ, ಸದಸ್ಯ ಕೆ.ಹರೀಶ್, ತಾ.ಪಂ. ಮಾಜಿ ಸದಸ್ಯ ರಾಮಾಂಜನಿ, ಕೆಆರ್. ಕುಮಾರಸ್ವಾಮಿ, ಧರ್ಮಾ ನಾಯ್ಕ್, ಬಿಜೆಪಿ ಮುಖಂಡರಾದ ಬಾಳೆಕಾಯಿ ಮಂಜುನಾಥ, ಟೈಲರ್ ಬಸವರಾಜ, ತಿಪ್ಪೇಸ್ವಾಮಿ, ಅಂಬರೀಶ,
ಬಪ್ಪಕಾನ್ ಆನಂದಪ್ಪ, ತುಂಬರಗುದ್ದಿ ಉಮೇಶ, ರಾಜಾಭಕ್ಷ್ಮಿ, ಯಶವಂತನಗರದ ನಾಗರಾಜ ಸೇರಿದಂತೆ ತಾರಾನಗರದ ದೊಡ್ಡನಗೌಡ, ದೌಲತ್ ಪುರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ಆಕ್ಟೊಬರ್ 20ರೊಳಗೆ ಹೆಸರು ನೋಂದಾಯಿಸಿ

ಸಾಮೂಹಿಕ ಮದುವೆಗೂ ಮುನ್ನಾ ದಿನವಾದ ನ.19 ರಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮದುವೆಯಾಗಲಿರುವ 306 ಜೋಡಿ ಪಟ್ಟಣದ ಸ್ಕಂದಪುರ (ಕಾಲು ಪಟ್ಟಿ) ಬಡಾವಣೆಯಲ್ಲಿನ ತಮ್ಮ ಕಚೇರಿಗೆ ಸೂಕ್ತ ದಾಖಲೆಗಳೊಂದಿಗೆ ಆ.20 ರೊಳಗೆ, ತಮ್ಮ ಕಚೇರಿ ಸಹಾಯಕರಾದ ಓಂಕಾರಪ್ಪ, ಅಶೋಕ, ಅಮರನಾಥ ಎಂಬುವವರ ಬಳಿ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ .7380496096, 6360086277, 72595582497ಗೆ ಸಂಪರ್ಕಿಸಬವುದು ಈಗಾಗಲೇ 47 ಅರ್ಜಿ ಸಲ್ಲಿಕೆಯಾಗಿವೆ. ಈ ಪೈಕಿ 4 ಮುಸ್ಲಿಂ ಸಮುದಾಯದ ಅರ್ಜಿಗಳಿವೆ. ಹೊರಗಿನ ಕ್ಷೇತ್ರದ ಜನರೂ ಅರ್ಜಿ ಸಲ್ಲಿಸುತ್ತಿದ್ದಾರೆ. ಸಂಡೂರು ವಿಧಾನ ಸಭೆ ಕ್ಷೇತ್ರದ ಜನರಿಗೆ ಮೊದಲ ಆದ್ಯತೆ ನೀಡಿ, ನಂತರ ಉಳಿದವರನ್ನು ಪರಿಗಣಿಸಲಾಗುವುದು, ಸೆ.5 ರಂದು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ವರಮಹಾಲಕ್ಷ್ಮಿ ಪೂಜೆ ಹಮ್ಮಿಕೊಂಡು 500 ಜನ ಮಹಿಳೆಯರಿಗೆ ಉಡಿ ತುಂಬಲಾಗುವುದು. ಕಾರ್ಯಕ್ರಮದ ಪ್ರಯುಕ್ತ ತಹಶೀಲ್ದಾರ್ ಕಚೇರಿ ಮುಂಭಾಗದ ಹುಲಿಗೆಮ್ಮ ದೇವಿ ಗುಡಿಯಿಂದ ವೀರಶೈವ ಕಲ್ಯಾಣ ಮಂಟಪದವರೆಗೆ ಪೂರ್ಣ ಕುಂಭ, ಕಲಶ ಕನ್ನಡಿಗಳೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ದಿವಾಕರ್ ಹೇಳಿದರು.

LEAVE A REPLY

Please enter your comment!
Please enter your name here