ಮೊಹರಂ ಹಬ್ಬದ ಪ್ರಯುಕ್ತ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0
182

ಕೊಟ್ಟೂರು:ಆಗಸ್ಟ್:06:-ಶಾಂತಿ ಸುವ್ಯವಸ್ಥೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಪಿಎಸ್‌ಐ ವಿಜಯಕೃಷ್ಣ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಗುರುವಾರ ಏರ್ಪಡಿಸಿದ್ದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಮೊಹರಂ ಹಬ್ಬವನ್ನು ಶಾಂತಿ ಸೌಹಾರ್ದತೆ ಯಿಂದ ಆಚರಿಸಬೇಕು ಎಂದರು. ಅಪರಾಧ ವಿಭಾಗದ ಪಿಎಸ್‌ಐ ವಡಕಪ್ಪ ಮಾತನಾಡಿ ಪ್ರತಿಯೊಬ್ಬರು ಕಾನೂನಿನ ಚೌಕಟ್ಟಿನೊಳಗೆ ಇತರರಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು ಎಂದರು.

ಈ ಹಬ್ಬದಲ್ಲಿ ಮಹಿಳೆಯರು ಮಕ್ಕಳು ಅತಿ ಹೆಚ್ಚಾಗಿ ಹಬ್ಬವನ್ನು ಆಚರಿಸುವುದ ರಿಂದ ಮುಖಂಡರುಗಳು ಪೊಲೀಸ್‌ ಅಧಿಕಾರಿಗಳಿಗೆ ವಿವಿಧ ಹಳ್ಳಿಗಳಲ್ಲಿ ಬಂದೋಬಸ್ತ್ ಮಾಡುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಆಯೂಬ್‌ ಸಾಬ್‌, ಬಾಷಾ, ನಜೀರ್ ಸಾಬ್‌, ಯಾಸಿನ್, ಪಟ್ಟಣ ಪಂಚಾಯಿತಿ ಸದಸ್ಯ ಕೆಂಗರಾಜ್ ಎಂ ಶ್ರೀನಿವಾಸ್ ಕರವೇ ಅಧ್ಯಕ್ಷ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ಚಿರಿಬಿ ಕೊಟ್ರೇಶ್, ಡಿಎಸ್‌ಎಸ್‌ ಮುಖಂಡರು ಮರಿಸ್ವಾಮಿ, ವಕೀಲ ಹನುಮಂತಪ್ಪ, ಮೇಷ್ಟ್ರು ಕೊಟ್ರೇಶ್, ವಾಲ್ಮೀಕಿ ಮುಖಂಡ ಪೇಕಿರಪ್ಪ. ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

ಕೊಟ್ಟೂರಿನಲ್ಲಿ ಮೊಹರಂ ಹಬ್ಬದ ಪ್ರಯುಕ್ತ ಗುರುವಾರ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿ ಪಿಎಸ್‌ಐ ವಿಜಯ್ ಕೃಷ್ಣ ಮಾತನಾಡಿದರು.

LEAVE A REPLY

Please enter your comment!
Please enter your name here