ಕಾಯಕ ಮುಖ್ಯ ಹೊರತು ಲಿಂಗ ಪೂಜೆ ಮುಖ್ಯವಲ್ಲ: ಕೆ.ಕೊಟ್ರೇಶ್

0
134

ಕೊಟ್ಟೂರು:ಆಗಸ್ಟ್:12:-
ನುಲಿಯ ಚಂದಯ್ಯ ಅವರು ತಮ್ಮ ಕಾಯಕ ನಿಷ್ಠೆಯಲ್ಲಿ ತನ್ನ ಲಿಂಗವೇ ಕಳೆದು ಹೋದರು ತನ್ನ ಲಿಂಗಕ್ಕೆ ಮಾನ್ಯತೆ ಕೊಡದೆ ಕಾಯಕಕ್ಕೆ ಮಾನ್ಯತೆಯನ್ನು ಕೊಟ್ಟಿದ್ದರು ಹಾಗಾಗಿ ಕಾಯಕ ಮುಖ್ಯ ಹೊರತು ಲಿಂಗ ಪೂಜೆ ಮುಖ್ಯವಲ್ಲ ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ಉಪ ಕಾರ್ಯದರ್ಶಿಯಾದ ಕೆ ಕೊಟ್ರೇಶ್ ಅವರು ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ವತಿಯಿಂದ ತಾಲೂಕು ಶುಕ್ರವಾರದಂದು ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ನುಲಿಯ ಚಂದಯ್ಯ ಅವರ ಜಯಂತಿಯನ್ನು ತಾಲೂಕು ಆಡಳಿತದ ದಂಡಾಧಿಕಾರಿಗಳಾದ ಎಂ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮವನ್ನು ಕುರಿತು ಕೆ ಕೊಟ್ರೇಶ್ ಮಾತನಾಡಿ ನುಲಿಯ ಚೆಂದಯ್ಯ ಅವರು ಮೊದಲು ತಮ್ಮ ಕಾಯಕಕ್ಕೆ ಮಾನ್ಯತೆಯನ್ನು ಕೊಡುತ್ತಿದ್ದರು ಅದೇ ರೀತಿಯಾಗಿ ನಮ್ಮ ಸಮಾಜದವರೆಲ್ಲರೂ ಅವರ ಕಾಯಕವನ್ನು ನಾವು ಅಳವಡಿಸಿಕೊಂಡರೆ ಅವರಿಗೆ ಗೌರವವನ್ನು ಕೊಟ್ಟಂತಾಗುತ್ತದೆ ಎಂದು ತಿಳಿಸಿದರು. ನಾವು ಬೇರೆಯವರ ದುಡ್ಡಿಗೆ ಆಸೆ ಪಡಬಾರದೆಂದು
ಕಾಯಕ ಯೋಗಿ ನುಲಿಯ ಚಂದಯ್ಯ ನಿಷ್ಠೆಯಂತೆ ಇರಬೇಕು ನಾವು ಇನ್ನೊಬ್ಬರ ಮುಂದೆ ಕೈ ಚಾಚುವ ಬದಲು ನಮ್ಮ ಕಾಯಕವೇ ನಾವು ನೋಡಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ತಹಶೀಲ್ದಾರರಾದ ಎಂ ಕುಮಾರಸ್ವಾಮಿ ಮಾತನಾಡಿ ನುಲಿಯ ಚಂದಯ್ಯ ಅವರ ವಚನಗಳು ಸುಮಾರು 45 ಸಿಕ್ಕಿವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಕುಳವ ಮಹಾ ಸಂಘದ ರಾಜ್ಯ ಉಪ ಕಾರ್ಯದರ್ಶಿ ಕೆ ಕೊಟ್ರೇಶ್. ತಾಲೂಕು ಅಧ್ಯಕ್ಷ ಮಂಜುನಾಥ್ ಭಜಂತ್ರಿ. ತಾಲೂಕು ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್. ನಾಗಪ್ಪ ಉಪಾಧ್ಯಕ್ಷ. ಕಾಂತಪ್ಪ, ಸಿದ್ದಣ್ಣ ಸಂಘಟನೆ ಕಾರ್ಯದರ್ಶಿ. ಪರಶುರಾಮ್. ವೆಂಕಣ್ಣ ಬತ್ತನಹಳ್ಳಿ. ಸೇಬಿ ವೆಂಕಟೇಶ್ ಬತ್ತನಹಳ್ಳಿ. ದುಗ್ಗಪ್ಪ ಬತ್ತನಹಳ್ಳಿ. ಪಿ ಹಚ್ ದೊಡ್ಡ ರಾಮಣ್ಣ, ಕರುನಾಡ ರೈತ ಸಂಘದ ಜಿಲ್ಲಾಧ್ಯಕ್ಷ ಪಕೀರಪ್ಪ.ಸಮಾಜದ ಇತರರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here