ಡಿಪಿಇಪಿ ಶಾಲಾ ಮೈದಾನ ಜಾಗದಲ್ಲಿ ಅಕ್ರಮವಾಗಿ ಟೆಂಡರ್ ಕರೆದು ಹಣ ದೋಚುತ್ತಿರುವ ಬಂಡ್ರಿ ಗ್ರಾಮ ಪಂಚಾಯಿತಿ.

0
877

ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಡಿಪಿಇಪಿ ಶಾಲೆಗೆ ಸಂಬಂಧಪಟ್ಟಂತೆ ಸರ್ವೆ ನಂ.389 ರಲ್ಲಿ 1.81 ಹೆಕ್ಟೇರ್ ಜಾಗದಲ್ಲಿ ಪ್ರತಿ ಬುಧವಾರದಂದು ಸಂತೆ ನಡೆಯುತ್ತಿದ್ದು, ಅ ದಿನ ಶಾಲಾ ಮಕ್ಕಳಿಗೆ ಆಟವಾಡಲು ಯಾವುದೇ ಸ್ಥಳವಿರುವುದಿಲ್ಲ ಮೈದಾನದ ತುಂಬ ಸಂತೆ ಮಾಡುವ ಜನರ/ವ್ಯಾಪಾರಸ್ಥರ ಪೆಂಡಾಲ್ ಗಳೇ ತುಂಬಿಕೊಂಡಿರುತ್ತವೆ.

ಹಿಗ್ಗೆ ಸುಮಾರು 15 ವರ್ಷಗಳಿಂದ ಡಿಪಿಇಪಿ  ಶಾಲಾ ಮೈದಾನದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯು ಟೆಂಡರ್ ನ್ನು ಕರೆದು ಹರಾಜು ಹಾಕುತ್ತಾರೆ, ವರ್ಷಕ್ಕೆ 1ರಿಂದ 1.50 ಲಕ್ಷ ರೂಪಾಯಿಗಳ ವರೆಗೆ ಹರಾಜುದಾರರು ಕೂಗಿಕೊಳ್ಳುತ್ತಾರೆ,ಈ ವರ್ಷ 09.03.2021 ರಂದು 3.30 (ಮೂರು ಲಕ್ಷ ಮೂವತ್ತು ಸಾವಿರ) ರೂಪಾಯಿಗೆ ಹರಾಜಾಗಿದೆ ಈ ಹರಾಜಿನಿಂದ ಬರುವ ಸಂಪೂರ್ಣ ಹಣವನ್ನು ಗ್ರಾಮ ಪಂಚಾಯಿತಿಯೇ ತೆಗೆದುಕೊಳ್ಳುತ್ತದೆ ಇದರಲ್ಲಿ ಒಂದು ನಯಾ ಪೈಸೆಯೂ ಸಹ ಡಿಪಿಇಪಿ ಶಾಲೆಗೆ ಇದುವರೆಗೂ ಕೊಟ್ಟಿಲ್ಲ.

ಶಾಲಾ ಮೈದಾನ ಹರಾಜು ಪ್ರಕ್ರಿಯೆಗೆ ಸಂಬದಿಸಿದಂತೆ ಸಂಡೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಓ) ಪ್ರಕಾಶ್ ರವರನ್ನು ಸಂಪರ್ಕಿಸಿ ವಿಚಾರಿಸಿದಾಗ ಗ್ರಾಮ ಪಂಚಾಯಿತಿಯು ಯಾವ ಜಾಗದಲ್ಲಿ ಏನೂ ಬೇಕಾದರೂ ಮಾಡಿಕೊಳ್ಳುತ್ತದೆ ಅದನ್ನ ನೀವು ಪ್ರಶ್ನೆ ಮಾಡಬಾರದು ಮತ್ತು ಕೇಳುವಹಾಗಿಲ್ಲ ಎನ್ನುತ್ತಾರೆ, ಮಾನ್ಯ ಇಓ ರವರಿಗೆ ಸರ್ಕಾರದ ಅದೇಶಗಳ ಬಗ್ಗೆ ಮತ್ತು ನೀತಿ ನಿಯಮಾವಳಿಗಳ ಬಗ್ಗೆ ಪ್ರಾಥಮಿಕ ತಿಳುವಳಿಕೆ ಇಲ್ಲ ಅನ್ನಿಸುತ್ತೆ.

ಕರ್ನಾಟಕ ರಾಜ್ಯ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ದಿನಾಂಕ:07.02.2013 ರಂದು ಶಾಲಾ ಮೈದಾನ/ಆವರಣವನ್ನು ಯಾವುದೇ ಸಂಧರ್ಭದಲ್ಲಿ ಯಾವುದೇ ಕಾರಣಕ್ಕಾಗಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ/ಉದ್ದೇಶಗಳಿಗೆ ಬಳಸಬಾರದಾಗಿ ಹಾಗೂ ಅನುಮತಿಯನ್ನು ನೀಡಬಾರದಾಗಿ ಸೂಚಿಸಿದೆ.

ಹಾಗಿದ್ದರೂ ಸಹ ಗ್ರಾಮ ಪಂಚಾಯಿತಿ ಕಾರ್ಯಾಲಯವು ಅಕ್ರಮವಾಗಿ ಶಾಲಾ ಮೈದಾನದಲ್ಲಿ ಸಂತೆ ನಡೆಯುತ್ತಿದ್ದು ಇಓ ರವರು ಕ್ರಮ ಕೈಗೊಳ್ಳದೇ ಬೇಜಾವ್ದರಿತನದಿಂದ ನಡೆದುಕೊಳ್ಳುತ್ತಿದ್ಫಾರೆ, ಸಂಡೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಪರಿಶೀಲಿಸಿ ಶಾಲಾ ಅವರಣವು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ಪಾಠಪ್ರವಚನಗಳೊಂದಿಗೆ ಪಠ್ಯೇತರ ಚಟುವಟಿಕೆಗಳು ಮತ್ತು ಆಟೋಟ ಕಾರ್ಯಕ್ರಮಗಳು,ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿನಿಯೋಗಲು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಲ್ಲಿ ಗ್ರಾಮ ಪಂಚಾಯಿತಿಯವರು ಇಡೀ ಶಾಲೆಯನ್ನೇ ಅಕ್ರಮಿಸಿಕೊಂಡು ಅಲ್ಲಿಯೇ ಠಿಕಾಣಿ ಹಾಕಿದರೆ ಮಕ್ಕಳ ಗತಿ ಏನು..!?

LEAVE A REPLY

Please enter your comment!
Please enter your name here