ಕೋವಿಡ್-19 ವ್ಯಾಕ್ಸಿನೇಷನ್ ಮತ್ತು ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ ಹಾಗೂ ಆರೋಗ್ಯ ಮತ್ತು ಕ್ಷೇಮಕೇಂದ್ರದ ಬಗ್ಗೆ ಜಾನಪದ ಕಲಾತಂಡದಿಂದ ಬೀದಿ ನಾಟಕ ಪ್ರದರ್ಶನ

0
133

ಸಂಡೂರು ತಾಲೂಕಿನ : ವಿಠಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಚಿಕ್ಕಅಂತಾಪುರ ಗ್ರಾಮ , ವಡ್ಡು
ಉಪಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಜೋಗ, ತಾರಾನಗರ ಪ್ರಾಥಮಿಕ ಆರೋಗ್ಯ
ಕೇಂದ್ರಕ್ಕೆ ಒಳಪಟ್ಟ ಕುರೆಕುಪ್ಪ, ವಿಠಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಚಿಕ್ಕಅಂತಾಪುರ, ವಿಠಲಾಪುರ ಗ್ರಾಮಗಳಲ್ಲಿ ದಿನಾಂಕ 31/03/2021 ರಂದು ನಾಲ್ಕು ಪ್ರದರ್ಶನ ನೀಡಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಟ್ಟ ಜೋಗ,ಕುರೆಕುಪ್ಪ, ಚಿಕ್ಕಅಂತಾಪುರ, ವಿಠಲಾಪುರ ಹಳ್ಳಿಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ಲು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ, ಜಿಲ್ಲಾ ಸರ್ವೇಕ್ಷಣ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಹಾಗೂ
ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ (ರಿ) ಮಾವಿನಹಳ್ಳಿ ಕಾರ್ಯದರ್ಶಿ ಕುರುಬರ ಹೇಮೇಶ್ವರ ತಂಡದ ಮುಖ್ಯಸ್ಥರು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮ ಅಭಿಯಾನ, ಆಯುಷ್ಮಾನ ಭಾರತ ಆರೋಗ್ಯ ಕರ್ನಾಟಕ, ಹಾಗೂ ಆರೋಗ್ಯ ಮತ್ತು ಕ್ಷೇಮಕೇಂದ್ರ ಆರೋಗ್ಯ ಸೇವೆಗಳು ಕುರಿತು ಜಾನಪದ ಕಲಾತಂಡವು ಬೀದಿ ನಾಟಕವು ಜನರ ಗಮನ ಸೆಳೆದರು

ಆರೋಗ್ಯ ಕ್ಷೇಮ ಕೇಂದ್ರಕ್ಕೆ ಭೇಟಿ ಕೊಟ್ಟು ಆರೋಗ್ಯ ಸಮಸ್ಯೆಗಳಿಗೆ ಅಲ್ಲಿ ನೇಮಕೊಂಡಿರುವ ಸಮುದಾಯ ಅಧಿಕಾರಿಗಳ ಹತ್ತಿರ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬೇಕು, ಅಲ್ಲಿರುವ
ತಾಯಿ ಆರೈಕೆ, ಯೋಗಾಭ್ಯಾಸ, ಸಾಂಕ್ರಾಮಿಕ ರೋಗಗಳು ಮತ್ತು ಅಸಾಂಕ್ರಾಮಿಕ ರೋಗಗಳು ಬಗ್ಗೆ, ಔಷದೋಪಚಾರ ಬಗ್ಗೆ, ರೋಗಗಳು ಪರೀಕ್ಷೆ ಪತ್ತೆ ಹಚ್ಚಿ ಸರಿಯಾದ ಚಿಕಿತ್ಸೆ ನೀಡುತ್ತಾರೆ ಎಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ಕೋವಿಡ್ 19 ವ್ಯಾಕ್ಸಿನ್ ಲಸಿಕೆಯನ್ನು ತಪ್ಪದೇ 45 ವರ್ಷ ಮೇಲ್ಪಟ್ಟ ಎಲ್ಲಾರಿಗೂ ಏಪ್ರಿಲ್ 01 ನೇ ತಾರೀಖನಿಂದ ನೀಡುತ್ತಾರೆ ಎಂದು ಆರೋಗ್ಯದ ಬಗ್ಗೆ ಸ್ಪಷ್ಟವಾಗಿ ಕಲಾತಂಡವು ಜನರಿಗೆ ತಿಳಿಸಿ ಕೊಟ್ಟರು.

ಆರೋಗ್ಯ ವೈದ್ಯಾಧಿಕಾರಿಗಳು.
,ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ,
ಆರೋಗ್ಯ ಸಿಬ್ಬಂದಿ ಮುಂತಾದವರು , ಸಾರ್ವಜನಿಕರು, ಹಿರಿಯ/ಕಿರಿಯ ಆರೋಗ್ಯ ಸಹಾಯಕರು , ಅಂಗನವಾಡಿ ಕಾರ್ಯಕರ್ತರು ಪಾರ್ವತಿ,
ಕೆ ಯಂಕಮ್ಮ, ಕೆ,ದೊಡ್ಡಬಸಮ್ಮ, ಆಶಾ ಕಾರ್ಯಕರ್ತೆಯರಾದ ಭಾಗ್ಯ, ಲಕ್ಷ್ಮಿ,
ಕೆ ಬಸಮ್ಮ, ನೀಲಮ್ಮ, ತಿಮ್ಮಕ್ಕ, ಮಾಳಮ್ಮ,ಹುಲಿಗಮ್ಮ ಹೆಚ್, ಜಿ ಶಶಿರೇಖಾ,ನಾಗಲಕ್ಷ್ಮಿ ಜಿ.
ಕುರೆಕುಪ್ಪ ಪುರಸಭೆ ಸದಸ್ಯರು ಶ್ರೀಮತಿ ಯು ಲಕ್ಷ್ಮಿ, ಶಾಲಾ ಶಿಕ್ಷಕರು ಎಸ್ ಎಮ್ ಈಶ್ವರ, ಆಯುಷ್ಮಾನ ಭಾರತ ಮತ್ತು ಆರೋಗ್ಯ ಕರ್ನಾಟಕ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬಗ್ಗೆ ಜಾಗೃತಿ ಕಾರ್ಯಕ್ರಮ ಮೂಡಿಸಿದರು.

ಕೆ ಹೇಮೇಶ್ವರ ಕಲಾವಿದರು ಹೊನ್ನುರಸ್ವಾಮಿ, ಚೌಡಪ್ಪ, ಮಂಜುಳಾ,ಲಲಿತಾ, ದೊಡ್ಡಬಸಪ್ಪ, ಜೈತುನ ಬೀ,ಅರ್ಜುನ, ಕಲಾವಿದರು ಇದ್ದರು, ಊರಿನ ಗ್ರಾಮಸ್ಥರು ಗಂಡಿ ಶಿವಪ್ಪ, ಹನುಮಂತಪ್ಪ, ಕೆ ಶಿವಪ್ಪ, ಹೆಚ್ ರುದ್ರಗೌಡ,ವೀರೇಶ, ಗಾಧಿಲಿಂಗ ಕೋರಿ,ಅಂಬಾರಪ್ಪ ಮುಂತಾದವರು, ಗ್ರಾಮಪಂಚಾಯಿತಿ ಸದಸ್ಯರು, ಶಾಲಾ ಶಿಕ್ಷಕರು, ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here