ಕಾಲುವೆಯಲ್ಲಿ ನಾಪತ್ತೆಯಾಗಿದ್ದ ಇನ್ ಪೊಟೇಕ್ ಕಂಪನಿ ಎಂಜಿನಿಯರ್: ಎರಡನೇ ದಿನದ ಶೋಧ ಕಾರ್ಯದಲ್ಲಿ ಪತ್ತೆ

0
101

ಕುರುಗೋಡು:ಆಗಸ್ಟ್:28:-ಸಮೀಪದ ಬಸಾಪುರ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ತುಂಗಭದ್ರಾ ಕೆಳ ಮಟ್ಟದ ಕಾಲುವೆ ಯಲ್ಲಿ ಗೆಳೆಯನೊಂದಿಗೆ ಈಜಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ನಾಪತ್ತೆ ಯಾದ ಘಟನೆ ಕುರುಗೋಡು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನೀರಲ್ಲಿ ನಾಪತ್ತೆಯಾದ ವ್ಯಕ್ತಿ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನಿರುಗುಂದ ಗ್ರಾಮದ ಆದರ್ಶ (32) ಎಂದು ಗುರುತಿಸಲಾಗಿದೆ. ಅವರು ಬೆಂಗಳೂರಿನ ಐಟಿಸಿ ನ್ ಪೋಟೆಕ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತಿದ್ದರು, ವಿಜಯಪುರದ ಗೋಳಗುಮ್ಮಟ ನೋಡಿಕೊಂಡು ಕುರುಗೋಡಲ್ಲಿ ಇದ್ದ ಗೆಳೆಯ ಭಾಷಾ ಮನೆಗೆ ಬಂದಿದ್ದ, ಬುದುವಾರ ಬೆಳಿಗ್ಗೆ ಈಜಲೆಂದು ಕಾಲುವೆಗೆ ಜಿಗಿದಿದ್ದು, ಮೇಲೆ ಬರಲೇ ಇಲ್ಲ. ಗೆಳೆಯ ಭಾಷಾ ಹುಡುಕಾಡಿ ಸಿಗದೇ ಇದ್ದಾಗ ಭಯಭಿತನಾಗಿ ಸ್ಥಳೀಯ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾನೆ.

ಸುದ್ದಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಶೋಧ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆವರೆಗೂ ಮಾಡಿದರು ವ್ಯಕ್ತಿ ಪತ್ತೆ ಯಾಗಿಲ್ಲ. ಗುರುವಾರ ಎರಡನೇ ದಿನದ ಶೋಧ ಕಾರ್ಯ ಮುಂದುವರೆದಿದ್ದು, ಬೆಳಿಗ್ಗೆ 7 ಗಂಟೆಯಿಂದ ಬಸಾಪುರ ಕಾಲುವೆ ಸೇತುವೆಯಿಂದ ಹಿಡಿದು ಸಿರುಗುಪ್ಪ ರಸ್ತೆ ವರೆಗೂ ಕಾರ್ಯ ಮುಂದುವರೆಸಿದ್ದು ಸಿರಿಗೇರಿ ಠಾಣೆ ವ್ಯಾಪ್ತಿಯ ಬೂದಗುಂಪ ಗ್ರಾಮದ ಕಾಲುವೆ ಬಳಿಯಲ್ಲಿ ಮೃತ ದೇಹ ಮದ್ಯಾಹ್ನ ದ ವೇಳೆಯಲ್ಲಿ ಪತ್ತೆ ಯಾಗಿದೆ.

ಕುರುಗೋಡು ಅಗ್ನಿಶಾಮಕ ದಳದ ಅಧಿಕಾರಿಗಳ ಮಿಂಚಿನ ಶೋಧ ಕಾರ್ಯದಿಂದ ಮೃತ ದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಕುರುಗೋಡು ಮತ್ತು ಸಿರಿಗೇರಿ ಹಾಗೂ ಸಿರುಗುಪ್ಪ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.
ಪತ್ತೆಯಾದ ಮೃತ ದೇಹವನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಮರಣ್ಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದೆ.
ನಾಪತ್ತೆಯಾದ ವ್ಯಕ್ತಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here