ರಸ್ತೆ ಅತಿಕ್ರಮಣ ತೆರವಿಗೆ ಆಗ್ರಹ: ಕರವೇ ಅಧ್ಯಕ್ಷ ಎಂ ಶ್ರೀನಿವಾಸ್

0
512

ಕೊಟ್ಟೂರು :ಜ:12: ಪಟ್ಟಣದ ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ನೂತನವಾಗಿ ನಿರ್ಮಾಣಗೊಂಡಿರುವ ಲೇಔಟ್‌ನಲ್ಲಿ ಅಕ್ರಮವಾಗಿ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳನ್ನು ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಕೃಷಿ ಜಮೀನನ್ನು ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸುವ ಸಮಯದಲ್ಲಿ ಆ ನಿವೇಶಗಳಿಗೆ ಸಂಬಂಧಿಸಿದಂತೆ ಓಡಾಡಲು ದಾರಿಗಾಗಿಯೆಂದೇ ಸ್ಥಳವನ್ನು ನಿಗದಿಪಡಿಸಿರುತ್ತಾರೆ. ಆದರೆ ಅದೇ ಜಾಗಕ್ಕಾಗಿ ಮೀಸಲಿಟ್ಟ 9 ಮೀ. ಜಾಗವನ್ನು ಅತಿಕ್ರಮಿಸಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ. ನಿವೇಶನದ ದಾಖಲೆಗಳನ್ನು ಪರಿಶೀಲಿಸದೇ, ಕಟ್ಟಡ ನಿರ್ಮಾಣ ಮಾಡಲು ಅನುಮತಿಯನ್ನು ಹೇಗೆ ನೀಡಿದರು ಎನ್ನುವುದು ಚರ್ಚೆಗೆ ಗ್ರಾಮಸವಾಗಿದೆ. ಜೋಳದ ಕೂಡ್ಲಿಗಿ ರಸ್ತೆಯಲ್ಲಿರುವ ಕೊಟ್ಟೂರು ಸರ್ವೆ ನಂ. 818/3 ವಿಸ್ತೀರ್ಣ ೦.65 ಎಕರೆ ಹಾಗೂ 1202 ವಿಸ್ತೀರ್ಣ 2.34 ಎಕರೆ ಒಟ್ಟು 2.99 ಎಕರೆ ಜಮೀನಿಗೆ ಸಂಬಂಧಿಸಿದಂತೆ ಕೃಷಿಯೇತರ ಜಮೀನನ್ನಾಗಿ ಪರಿವರ್ತಿಸುವ ಸಮಯದಲ್ಲಿ ಸದರಿ ಜಾಗಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿರುವ ಜಾಗಕ್ಕೆಂದೇ ಮೀಸಲಿಡಲಾದ ಜಾಗದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್‌ಗಳನ್ನು ಕಟ್ಟಿದ್ದು, ಪಟ್ಟಣ ಪಂಚಾಯಿತಿಯವರು ಯಾವ ರೀತಿಯಾಗಿ ಪರವಾನಿಗೆ ನೀಡಲಾಗಿದೆ ಎಂದು ಪ್ರಜ್ಞಾವಂತ ನಾಗರೀಕರು ಪ್ರಶ್ನಿಸಿದ್ದಾರೆ. ಇದರ ವಿರುದ್ಧವಾಗಿ ಊರಿನ ಪ್ರಮುಖ ಮುಖಂಡರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಕ್ರಮವಾಗಿ ಕಟ್ಟಿರುವ ಕಾಂಪ್ಲೆಕ್ಸ್‌ಗಳನ್ನು ನೆಲಸಮ ಮಾಡಬೇಕೆಂದು ಮನವಿ ಸಲ್ಲಿಸಿ ಹಲವಾರು ದಿನಗಳು ಕಳೆದಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಇರುವ ಪ.ಪಂ. ಆಡಳಿತದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಕೊಟ್ಟೂರು ಕರವೇ ಅಧ್ಯಕ್ಷ ಎಂ.ಶ್ರೀನಿವಾಸ್ ಪತ್ರಿಕೆಗೆ ಮಾತನಾಡುತ್ತಾ, ಮೇಲಾಧಿಕಾರಿಗಳು ಈ ಬಗ್ಗೆ ಕೂಡಲೇ ಗಮನ ಹರಿಸಿ ಅಕ್ರಮವಾಗಿ ಕಟ್ಟಿರುವ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಪ್ರಕಾಶ್, ಶ್ರೀನಿವಾಸ್, ರಾಮು, ಮಂಜುನಾಥ ಇವರುಗಳು ಉಪಸ್ಥಿತರಿದ್ದರು.

■ಅಕ್ರಮವಾಗಿ ಕಟ್ಟಿರುವ ವಾಣಿಜ್ಯ ಮಳಿಗೆಗಳನ್ನು 9.0 ಮೀ. ರಸ್ತೆಯನ್ನು ಅತಿಕ್ರಮಿಸಿ ಕಟ್ಟಿರುವುದನ್ನು ನೆಲಸಮ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದಲ್ಲಿ ಪ.ಪಂ. ಆಡಳಿತದ ವಿರುದ್ಧ ಹಾಗೂ ಸದರಿ ಲೇಔಟ್ ಮಾಲೀಕರ ವಿರುದ್ಧ ಧರಣಿ ಮಾಡಲಾಗುವುದು.
-ಎಂ ಶ್ರೀನಿವಾಸ್ ಕರವೇ ಅಧ್ಯಕ್ಷ
ಕೊಟ್ಟೂರು

LEAVE A REPLY

Please enter your comment!
Please enter your name here