ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ “ಸ್ವಚ್ಛತೇ ಸೇವೆ” ಅಡಿಯಲ್ಲಿ ಸ್ವಚ್ಚತಾ ಕಾರ್ಯ ‌

0
181

ಸಂಡೂರು: ಅ: 01: ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯ ತೋರಣಗಲ್ಲು, ಸಾಹಸ್ ಸಂಸ್ಥೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಆಯುಷ್ಮಾನ್ ಭವ ಆಂದೋಲನದಡಿ ಒಂದು ಗಂಟೆ ಕಾಲದ ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಎ. ವೀರೇಶಪ್ಪ ಅವರು ಮಾತನಾಡಿ ಪ್ರಧಾನಿಯವರ ಆಶಯದಂತೆ ಇಂದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ, ಗ್ರಾಮಗಳನ್ನು ಸ್ವಚ್ಛವಾಗಿ ಇಡುವ ಕೆಲಸ ಕಷ್ಟಕರವಾಗಿದೆ, ಸಾಹಸ ಸಂಸ್ಥೆಯ ಪೌರ ಕಾರ್ಮಿಕರು ಎಷ್ಟೇ ಶ್ರಮ ವಹಿಸಿ ಸ್ವಚ್ಛ ಮಾಡಿದರೂ ಜನರ ಮನಸ್ಥಿತಿ ಬದಲಾಗಿಲ್ಲ, ಪ್ರಯಾಣಿಕರು,ವಲಸಿಗರು, ವ್ಯಾಪಾರಸ್ಥರು ಕಸ ಮಾಡದಂತೆ ನೋಡಿ ಕೊಳ್ಳ ಬೇಕು, ಕಸದ ವಾಹನದಲ್ಲೆ ಕಸ ಹಾಕಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಗೋಪಾಲ್ ರಾವ್ ಮಾತನಾಡಿ ಸರ್ಕಾರಿ ಸಂಸ್ಥೆಗಳು ತಮ್ಮ ಸ್ವಂತದ್ದು ಎಂಬ ಭಾವನೆ ಜನರಲ್ಲಿ ಮೂಡ ಬೇಕು ಆಗ ಎಲ್ಲಂದರಲ್ಲಿ ಕಸ ಬಿಸಾಡುವುದನ್ನು ಬಿಡುತ್ತಾರೆ, ಸೋಂಕು ಮುಕ್ತ ಆಸ್ಪತ್ರೆ ನಮ್ಮ ಗುರಿ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ಗ್ರಾಮಗಳನ್ನಾಗಿ ಮಾಡಲು ಒಂದು ದಿನ ಒಂದು ಗಂಟೆ ಸಾಲದು, ವರ್ಷಕ್ಕೆ ನೂರು ಗಂಟೆಗಳ ಶ್ರಮದ ಅಗತ್ಯ ಇದೆ,ಅದರಂತೆ ಏಕಮುಖ ಬಳಕೆ ಪ್ಲಾಸ್ಟಿಕ್ ಪೂರ್ಣ ಬಳಸುವುದನ್ನು ಬಿಡಬೇಕು,ಆಗ ನಮ್ಮ ಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿ ಪ್ರತಿಜ್ಞೆಯನ್ನು ಬೋಧಿಸಿದರು, ಎಲ್ಲರೂ ಪ್ರತಿಜ್ಞೆ ಕೈಗೊಂಡರು,

ಈ ಕಾರ್ಯಕ್ರಮದಲ್ಲಿ ಕಛೇರಿ ಅಧಿಕ್ಷಕ ಹರ್ಷ,ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿ ಕಂಕಣವಾಡಿ,ಮಂಜುನಾಥ್,ಶಕೀಲ್,ಶ್ರೀರಾಮ್,ವೆಂಕಪ್ಪ,ರೇಷ್ಮಾ,ಹುಲಿಗೆಮ್ಮ,ಮೇಘನಾಥ್,ಶಶಿಧರ, ಗ್ರಾ.ಪಂ ಕರ ವಸೂಲಿಗಾರ ಶಂಕರ್,ಪಂಪಾಪತಿ, 108 ಸಿಬ್ಬಂದಿ ವೀರೇಶ್,ಮಲ್ಲಯ್ಯ, ಆಶಾ ಕಾರ್ಯಕರ್ತೆ ನೀಲಮ್ಮ, ರಾಜೇಶ್ವರಿ,ಹುಲಿಗೆಮ್ಮ, ವಿಜಯಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಸ್ವಾತಿ,ಪ್ರತಿಭಾ,ಮಲ್ಲಮ್ಮ,ಶಂಕ್ರಮ್ಮ,ಜಯಪ್ರಧ,ಸುಮಾ,ಪಾರ್ವತಿ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here