ಹೆಣ್ಣಾಗಿ ಹುಟ್ಟಿದ್ದಕ್ಕೆ ಸಂತೋಷವಿದೆ,ಪೂಜ್ಯ ಭಾವನೆಯಲ್ಲಿ ಹೆಣ್ಣನ್ನು ಕಾಣಿರಿ:ವಿದ್ಯಾರ್ಥಿನಿ ಟಿ.ಎಮ್ ಹರ್ಷಿತಾ,

0
150

ಸಂಡೂರು: ಜ: 10: ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಜೆ.ಎಸ್.ಡಬ್ಲ್ಯೂ ಪೌಂಡೇಷನ್‌ನ ಆಸ್ಪೈರ್ ಸಂಸ್ಥೆಯ ಸಹಕಾರದೊಂದಿಗೆ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ”ಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಎಂಟನೇ ತರಗತಿ ವಿದ್ಯಾರ್ಥಿನಿ ಟಿ.ಎಮ್ ಹರ್ಷಿತಾ ಮಾತನಾಡಿ ನನ್ನನ್ನು ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದ್ದು ಹೆಮ್ಮೆ ಎನಿಸುತ್ತಿದೆ,ಹೆಣ್ಣಿಲ್ಲದೆ ಏನೂ ಇಲ್ಲ, ನಮ್ಮ ದೇಶದ ಪ್ರಸಿದ್ದ ಮಹಿಳೆಯರು ಕಣ್ಮುಂದೆ ಬಂದು ಹೋದಂತೆ ಬಾಸವಾಯಿತು,ಹೆಣ್ಣು ಸಂತತಿ ಉಳಿಸಿ, ಓದಿಸಿ,ಹೆಣ್ಣು ಪುರುಷರಂತೆ ಸಮಾನವಾಗಿ ನಿಲ್ಲ ಬಲ್ಲಳು ಎಂದು ಹೆಮ್ಮೆಯಿಂದ ಹೇಳಿದಳು,

ಇದೇ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಹೆಣ್ಣು ಗಂಡಿನ ಲಿಂಗಾನುಪಾತ ಆಘಾತಕಾರಿಯಾಗಿದೆ, ಈ ವ್ಯತ್ಯಾಸಗಳನ್ನು ಸರಿಪಡಿಸಲು ಹೆಣ್ಣು ಮಗು ಜನನವಾಗುವ ಕಡೆ ನಮ್ಮ ಗಮನವಿರಬೇಕು, ಒಂದು ಸಾವಿರ ಪುರುಷರಿಗೆ ಒಂದು ಸಾವಿರದ ಹದಿನಾರು ಇರಬೇಕು, ಆದರೆ ಇದು ಒಂಬೈನೂರ ಮೂವತ್ತೆರಡು ಇದೆ ಈ ಅಸಮತೋಲನ ವನ್ನು ಸರಿ ಪಡಿಸಲು ಪಿ.ಸಿ.ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಠಾನ ಸರಿಯಾಗಿ ಜಾರಿಯಾಗಬೇಕು, ಸುಕನ್ಯಾ ಸಂವೃದ್ಧಿ , ಭಾಗ್ಯಲಕ್ಷ್ಮಿ ಯೋಜನೆಗಳ ಮೂಲಕ ಹೆಣ್ಣುಮಕ್ಕಳಿಗೆ ಸಹಕಾರವಾಗಬೇಕು ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಶಿಕ್ಷಕಿ ವಿಶಾಲಾಕ್ಷಿ ಅವರು ಮಾತನಾಡಿ ಗಂಡು ಹೆಣ್ಣು ಎಂಬ ಬೇದ ತಾರತಮ್ಯ ಬೇಡ ಸಮಾನತೆ ಇರಬೇಕು, ಹೆಣ್ಣು ವಿದ್ಯೆ ಕಲಿತರೆ ರಾಷ್ಟ್ರಪತಿ, ಮುಖ್ಯ ಮಂತ್ರಿ, ಲೋಕಸಭಾ ಸ್ಪೀಕರ್,ರಾಜ್ಯಪಾಲ, ಡಿ.ಸಿ, ತಹಶಿಲ್ದಾರ್ ನಂತಹ ಅನೇಕ ಉನ್ನತ ಸ್ಥಾನ ಅಲಂಕರಿಸಿ ನಿಭಾಯಿಸಬಲ್ಲಳು, ಹೆಣ್ಣು ಸಂತತಿ ಕಡಿಮೆಯಾದರೆ ಉದ್ಭವಿಸುವ ಹೆಣ್ಣು ಮಕ್ಕಳ ಮಾರಾಟ, ಲೈಂಗಿಕ ದೌರ್ಜನ್ಯ, ಬಹು ಪತಿತ್ವ ಇಂತಹ ಕೀಳು ಸಮಸ್ಯೆಗಳು ಉದ್ಭವಿಸುವವು, ಇತ್ತೀಚೆಗೆ ಒಂಬೈನೂರು ಹೆಣ್ಣು ಭ್ರೂಣಹತ್ಯೆಯ ಮಾಧ್ಯಮ ಸುದ್ದಿ ತಿಳಿದು ದುಃಖವಾಯಿತು,”ಬೇಟಿ ಬಚಾವೋ, ಬೇಟಿ ಪಡಾವೋ” ಎಂಬುದು ಎಲ್ಲರ ನಾಡಿ ಮಿಡಿತವಾಗಬೇಕಿದೆ ಎಂದು ತಿಳಿಸಿದರು, ನಂತರ ಕೇಕ್ ಕಟ್ ಮಾಡಿಸಿ ಎಲ್ಲರಿಗೂ ಹಂಚಿದರು,

ಕಾರ್ಯಕ್ರಮವನ್ನು ಮ್ಯಾಜಿಕ್ ಬಸ್‌ನ ಎ.ಎಲ್.ಇ ದುರ್ಗಾ ಮತ್ತು ಎಲ್.ಎಸ್.ಇ ಶಾಲಿನಿ ಅವರು ನಡೆಸಿಕೊಟ್ಟರು,

ಈ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕ ವಿಶ್ವನಾಥ್,ಸುಜಾತ,ಅನಿತಾ,ಭಾಗ್ಯಲಕ್ಷ್ಮಿ, ವಿದ್ಯಾರ್ಥಿನಿಯರಾದ ಸಹನಾ,ಮೇಘನಾ, ವರಲಕ್ಷ್ಮಿ,ಸಿದ್ಧಿಕಾ,ಸರಸ್ವತಿ,ಸಾನಿಯಾ,ಇಂದು,ಹೇಮಲತಾ,ಶೇಕಮ್ಮ,ಯಶೋಧ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here