ಹೆಣ್ಣು ಮಕ್ಕಳು ಅಪೌಷ್ಟಿಕತೆ ನಿವಾರಣೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ; ಶಾಸಕ ತುಕಾರಾಮ್ ಕರೆ

0
470

ಸಂಡೂರು:ಸೆ:18:- ತಾಲೂಕಿನ ಸುಶಿಲಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಗಿರಿ ಗ್ರಾಮದಲ್ಲಿ 17.09.22ರಂದು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಂದ ಅನಿಮಿಯ ಮುಕ್ತ ಭಾರತ ಮತ್ತು ಪೋಷಣ ಮಾಸ ಆಚರಣೆಯ ಅರಿವು ಮೂಡಿಸುವ ಶಿಬಿರವನ್ನು ಏರ್ಪಡಿಸಿದ್ದರು.

ಇದೇ ಸಂದರ್ಭದಲ್ಲಿ ಶಾಸಕರುಹಾಗೂ ತಹಶೀಲ್ದಾರ್ ದೀಪ ಹಚ್ಚುವುದರ ಮತ್ತು ನವದಾನ್ಯಗಳಿಂದ ಕೂಡಿದ ಕುಂಭಗಳಿಗೆ ನವದಾನ್ಯಗಳನ್ನು ಸುರಿಯುವುದರ ಮೂಲಕ ಪೌಷ್ಟಿಕ ಶಿಬಿರಕ್ಕೆ ಚಾಲನೆಯನ್ನು ನೀಡಿದರು

ಶಾಸಕರಾದ ಈ. ತುಕಾರಾಮ್ ಮಾತನಾಡಿ
ಸ್ಪಿರುಲಿನಾ ಚಿಕ್ಕಿ ಕಾರ್ಯಕ್ರಮವನ್ನು ಅನುಷ್ಠಾನ ಮಾಡುತ್ತಿರುವ ಈ ಸಮಯದಲ್ಲಿ ಹೆಣ್ಣು ಮಕ್ಕಳಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವುದು ಕಂಡು ಬಂದಿದೆ, ಮಕ್ಕಳಿಗೆ ಸ್ಪಿರುಲಿನಾ ಚಿಕ್ಕಿ ಕೊಡುವ ಅವಶ್ಯಕತೆ ಇದೆ ಹಾಗೇ ಮನೆಯಲ್ಲಿ ಪೋಷಕರು ಎಲ್ಲರಿಗಿಂತ ಮೊದಲು ಮಕ್ಕಳಿಗೆ ಊಟ ಕೊಡುವ ಅಭ್ಯಾಸ ಪ್ರಾರಂಭಿಸಬೇಕಿದೆ, ಖನಿಜಾಂಶಗಳುಳ್ಳ ಸಾರವರ್ಧಕ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕಿದೆ ಮತ್ತು ಕಿಶೋರಿಯರಿಯರು ಋತುಚಕ್ರ ಸಮಯದಲ್ಲಿ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಬೇಕಿದೆ, ಮೂಡ ನಂಬಿಕೆಗಳನ್ನು ದೂರ ಮಾಡಿ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು, ಮೊಳಕೆ ಕಾಳು, ಬೆಲ್ಲ, ಶೇಂಗಾ, ಹಾಲು, ತುಪ್ಪ, ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳ ಸೇವನೆ ಮಾಡಬೇಕು, ಮತ್ತು ಬೆಳಗಿನ ಉಪಹಾರ ತಪ್ಪದೇ ಮಾಡಬೇಕು, ಸ್ಲಿಮ್ ಆಗಿ ಇರಲು ಊಟ ಬಿಡುವ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ತಿಳಿಸಿದರು,
ಹಾಗೆ ಮನೆಯಲ್ಲಿ ರೊಟ್ಟಿ-ಚಪಾತಿ ತಯಾರಿಸುವಾಗ ಎಳ್ಳು, ಕಡಲೆ ಬೇಳೆ,ಶೇಂಗಾ, ಹಸಿರು ಸೊಪ್ಪುಗಳನ್ನು ಸೇರಿಸಿ ತಯಾರಿಸಲು ಪೋಷಕರಿಗೆ ಮನವರಿಕೆ ಮಾಡಿವಂತೆ ಮಕ್ಕಳಿಗೆ ಸೂಚಿಸಿದರು, ಹಾಲು, ಮೊಟ್ಟೆ, ಹೇರಳವಾಗಿ ಸೇವಿಸುವಂತೆ ತಿಳಿಸಿದರು, ಅಂತಿಮವಾಗಿ ದೇಶ ತುಂಬಲಿ ಪೌಷ್ಟಿಕತೆ, ತೊಲಗಲಿ ಅಪೌಷ್ಟಿಕತೆ ಎಂಬ ಘೋಷಣೆಯನ್ನು ಹೇಳಲಾಯಿತು,

ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಉಡಿತುಂಬುವುದು ಹಾಗೂ ಪೌಷ್ಟಿಕ ಆಹಾರ ಪ್ರದರ್ಶನ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಐ ಸಿ ಡಿ ಎಸ್ 6ನೇ ಸೇವೆಗಳನ್ನು ಚಿತ್ರಗಳ ಮೂಲಕ ದಾನ್ಯಗಳಿಂದ ಅಲಂಕರಿಸಿ ಪ್ರದರ್ಶನವನ್ನು ಮಾಡಿದ್ದು ನೋಡುಗರ ಗಮನ ಸೆಳೆಯುವಂತಿತ್ತು

ಈ ಸಂಧರ್ಭದಲ್ಲಿ ತಹಶೀಲ್ದಾರ್ ಕೆ.ಎಂ ಗುರುಬಸವರಾಜ್,ಸಿಡಿಪಿಓ ಪ್ರೇಮ್ ಮೂರ್ತಿ, ಮೇಲ್ವಿಚಾರಕಿ ಎಂ.ಎಂ ಭಜಂತ್ರಿ, ಸುಶಿಲಾನಗರ ಗ್ರಾಪಂ ಅಧ್ಯಕ್ಷ ಅಂಬರೀಷ್ ನಾಯಕ್, ಉಪಾಧ್ಯಕ್ಷ ಹುಲಿಗೆಪ್ಪ, ಕಾರ್ಯದರ್ಶಿ ಸಿದ್ಧಲಿಂಗರಾಜು, ಗ್ರಾಪಂ ಸರ್ವ ಸದಸ್ಯರು,ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here