ಜಾನುವಾರುಗಳ ಚರ್ಮ ಗಂಟು ರೋಗ ತಡೆಗೆ ಲಸಿಕೆ: ಗಂಟು ರೋಗ ಬಾರದ ಜಾನುವಾರುಗಳಿಗೆ ಲಸಿಕೆ.

0
192

ಕೊಟ್ಟೂರು: ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಗಂಟು ರೋಗಕ್ಕೆ ತುತ್ತಾಗದ ಜಾನುವಾರುಗಳಿಗೆ ಲಸಿಕೆ ಹಾಕಲಾಯಿತು.

ತಾಲ್ಲೂಕಿನಾದ್ಯಂತ ಜಾನುವಾರುಗಳಿಗೆ ಗಂಟುರೋಗ ಹರಡದಂತೆ ಮುಂಜಾಗ್ರತಕ್ರಮವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ವಿ.ಕೊಟ್ರೇಶ್ ಹೇಳಿದರು.

ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಗುರುವಾರ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ತಾಲ್ಲೂಕಿಗೆ 22 ಸಾವಿರ ಲಸಿಕೆಗಳು ಅವಶ್ಯಕತೆ ಇದ್ದು ಇಲಾಖೆಯಿಂದ 4 ಸಾವಿರ ಲಸಿಕೆಗಳು ಮಾತ್ರ ಪೂರೈಕೆಯಾಗಿರುವುದರಿಂದ ಹೆಚ್ಚು ರೋಗ ವ್ಯಾಪಿಸಿದ ಗ್ರಾಮಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಲಸಿಕೆಗಳು ಪೂರೈಕೆಯಾಗುತ್ತಿದ್ದಂತೆ ತಾಲ್ಲೂಕಿನಾದ್ಯಂತ ಎಲ್ಲಾ ಜಾನುವಾರುಗಳಿಗೂ ಲಸಿಕೆ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆ ಅಯ್ಯನಹಳ್ಳಿ ಗ್ರಾಮ ಅಧ್ಯಕ್ಷೆ ರೂಪ ಸುರೇಶ್ ಗೌಡ ಗ್ರಾಮ ಪಂಚಾಯಿತಿ ಸದಸ್ಯರು ಸಿದ್ದಲಿಂಗ ಸ್ವಾಮಿ. ನಿಂಗಪ್ಪ. ಕೆ ಕೊಟ್ರೇಶ್.ಪ್ರಮುಖ ಮುಖಂಡರು ಹಾಗೂ ಅಯ್ಯನಹಳ್ಳಿ ಗ್ರಂಥಪಾಲಕ ಮುರುಗೇಶ್ ಗೌಡ .ಪಶು ಪರೀಕ್ಷಕ ಬಸಯ್ಯ ನಂದಿಹಳ್ಳಿ ಮುಂತಾದವರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here