ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

0
45

ಮಡಿಕೇರಿ ಅ.20 :-ರಾಜ್ಯ ನಿವೃತ್ತ ಸರ್ಕಾರಿ ನೌಕರರ ಕುಂದು ಕೊರತೆ/ ಸಮಸ್ಯೆಗಳಿದ್ದರೆ ಸಂಘಕ್ಕೆ ದೂರು ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಮಡಿಕೇರಿ ಅಧ್ಯಕ್ಷರಾದ ಬಿ.ಬಿ.ಮಾದಮ್ಮಯ್ಯ ಅವರು ಹೇಳಿದರು.
ನಗರದ ಜಿಲ್ಲಾ ಬಾಲಭವನದ (ಚೇತನ ಚಿಲುಮೆ) ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘ ಮಡಿಕೇರಿ ಇದರ 24 ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಿವೃತ್ತ ಸರ್ಕಾರಿ ನೌಕರರ ಸಮಸ್ಯೆಗಳು/ ಕುಂದುಕೊರತೆಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸವನ್ನು ಸಂಘದ ವತಿಯಿಂದ ಮಾಡಲಾಗುತ್ತದೆ. ಆ ದಿಸೆಯಲ್ಲಿ ಈಗಾಗಲೇ ಸಂಘದ ಸದಸ್ಯರ ಹಲವಾರು ಸಮಸ್ಯೆಗಳನ್ನು ಪರಿಹರಿಸಿಕೊಡಲಾಗಿದೆ ಎಂದು ಅವರು ಹೇಳಿದರು.

ಸಂಘವನ್ನು ಉತ್ತಮವಾಗಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ. ಕಳೆದ 11 ತಿಂಗಳಿಂದ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಸಂಘದ ಬೆಳವಣಿಗೆ ಹಾಗೂ ಸಂಘದ ಸದಸ್ಯರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಲಾಗುತ್ತದೆ ಎಂದು ಅವರು ತಿಳಿಸಿದರು.

ನಿವೃತ್ತ ಸರ್ಕಾರಿ ನೌಕರರ ಹಲವು ಬೇಡಿಕೆಗಳನ್ನು ಈಗಾಗಲೇ ಮುಖ್ಯಮಂತ್ರಿ ಅವರಿಗೆ ಸಂಘದ ವತಿಯಿಂದ ಸಲ್ಲಿಸಲಾಗಿದೆ. ನಿವೃತ್ತ ಸರ್ಕಾರಿ ನೌಕರರಿಗೆ ನಗದು ರಹಿತ ‘ಸಂಜೀವಿನಿ ಭಾಗ್ಯ’ ಆರೋಗ್ಯ ಸೇವೆಯನ್ನು ನೀಡಬೇಕು. 80 ವರ್ಷ ವಯೋಮಿತಿ ಮೀರಿದ ಸದಸ್ಯರಿಗೆ 79 ವರ್ಷ ತುಂಬಿದ ಕೂಡಲೇ ಹೆಚ್ಚಿನ ತುಟ್ಟಿಭತ್ಯೆ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದರು.
ಏಳನೇ ವೇತನ ಆಯೋಗ ಅನುμÁ್ಠನ, ಸರ್ಕಾರಿ ಬಸ್ ಸಂಚಾರ ಸೇವೆಯಲ್ಲಿ ಶೇ 50 ರಷ್ಟು ವಿನಾಯಿತಿ. ಸಂಘಕ್ಕೆ ಸೂಕ್ತ ನಿವೇಶನ ನೀಡುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.
ಸಂಘದ ಸದಸ್ಯರ ಪಿಂಚಣಿ ಸೇವೆಯಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ. ಅದನ್ನು ಸಂಘದ ಬಳಿ ಕೇಳಿಕೊಂಡರೆ ಸಮಸ್ಯೆಯನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ತಿಳಿಸಿದರು.
ಕೊಡಗು ಜಿಲ್ಲೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಿ.ಶ್ರೀನಿವಾಸ್ ಅವರು ಮಾತನಾಡಿ ರಾಜ್ಯ ಸರ್ಕಾರವು ಜನವರಿಯಲ್ಲಿ 7ನೇ ವೇತನ ಆಯೋಗ ಅನುμÁ್ಠನಗೊಳಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಕಳೆದ ವರ್ಷ ಸರ್ಕಾರಿ ನೌಕರರ ಸಂಘಕ್ಕೆ ಸೂಕ್ತ ನಿವೇಶನ ಇಲ್ಲವೆಂದು ಜಿಲ್ಲಾಡಳಿತ ಗಮನಕ್ಕೆ ತರಲಾಗಿತ್ತು. ಆ ನಿಟ್ಟಿನಲ್ಲಿ 40 ಸೆಟ್ ಜಾಗವನ್ನು ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಅವರು ಹಸ್ತಾಂತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಭವನದ ಕಾಮಗಾರಿಗಳು ಪೂರ್ಣಗೊಂಡ ನಂತರ ಸರ್ಕಾರಿ ನೌಕರರ ಹಾಗೂ ನಿವೃತ್ತ ಸರ್ಕಾರಿ ನೌಕರರ ಪ್ರತಿಯೊಂದು ಕಾರ್ಯ ಚಟುವಟಿಕೆಗಳು ಸರ್ಕಾರಿ ನೌಕರರ ಭವನದಲ್ಲಿ ನಡೆಯುವಂತಾಗಲಿ ಎಂದು ಅವರು ಆಶಿಸಿದರು.
ಕುಶಾಲನಗರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ನಜ್ಹೀರ್ ಅಹಮ್ಮದ್ ಅವರು ಮಾತನಾಡಿ ಅನೇಕ ರೆಂಬೆ ಕೊಂಬೆಗಳಿದ್ದರೂ ಕೂಡ ಮರಕ್ಕೆ ಬುಡ ಒಂದೆ, ಹಲವಾರು ನದಿ ಕೊಳಗಳಿದ್ದರೂ ಹರಿಯೋದು ಸಮುದ್ರಕ್ಕೆ, ಅದೇ ರೀತಿ ದೇವನೊಬ್ಬ ನಾಮ ಹಲವು, ಜಗತ್ತಿನಲ್ಲಿರುವುದು ಒಂದೇ ಜಾತಿ ಅದುವೇ ಮಾನವ ಜಾತಿ ಹಾಗೂ ಇರುವುದೊಂದೆ ಭಾμÉ ಅದು ಹೃದಯ ಭಾμÉ ಎಂದು ಅವರು ಹೇಳಿದರು.
ಜೀವನದಿ ಕಾವೇರಿಯನ್ನು ಎಷ್ಟು ಕಲುಷಿತ ಮಾಡಿದರು ಕೂಡ ಜೀವನದಿ ಮೌನದಿಂದ ಉದಾರವಾಗಿ ಹರಿಯುತ್ತಾಳೆ ಅದೇ ರೀತಿಯಲ್ಲಿ ಮಾನವನು ಕೂಡ ಉದಾರತ್ವ ಸಮಾನತೆಯನ್ನು ಜೀವನದಲ್ಲಿ ರೂಡಿಸಿಕೊಳ್ಳುವಂತಾಗಬೇಕು ಎಂದರು.
ಸದ್ಬುದ್ಧಿ ಮತ್ತು ಸನ್ನಡತೆ ಮಾನವನ ಹೃದಯಕ್ಕೆ ಇರುವ ಎರಡು ರೆಕ್ಕೆಗಳಾಗಿವೆ. ಪ್ರತಿಯೊಬ್ಬರು ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಶಿಸ್ತು ಸಮಯಪ್ರಜ್ಞೆ ಪ್ರಾಮಾಣಿಕತೆಯಿಂದ ಜೀವನ ನಡೆಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ 80 ವರ್ಷ ಮೇಲ್ಪಟ್ಟ ಸಂಘದ ಸದಸ್ಯರುಗಳಾದ ಎಚ್.ಎಂ.ಮಹಮ್ಮದ್, ಕಾವೇರಪ್ಪ, ಎಂ.ಎನ್.ನಾಣಯ್ಯ, ಕೆ.ಕೆ.ತುಳಸಿ ಮಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಸದಸ್ಯರು ಪದಾಧಿಕಾರಿಗಳು ಇತರರು ಇದ್ದರು.

LEAVE A REPLY

Please enter your comment!
Please enter your name here