ಆಧುನಿಕ ಜಗತ್ತಿನಲ್ಲಿ ವಿದ್ಯೆ ಜೊತೆಗೆ ಏಕಾಗ್ರತೆಯಿಂದ ಆಭ್ಯಾಸ ಮಾಡಿದರೆ ಮಾತ್ರ ಯಶಸ್ಸನ್ನು ಗಳಿಸಲು ಸಾದ್ಯ ; ಎಸ್.ಜಿ.ಎಂ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಡಾ||.ಬಿ. ವೀರಭದ್ರಯ್ಯ ಸ್ವಾಮಿಜಿ

0
118

ರಾಂಪುರ, ಮೊಳಕಾಲ್ಮೂರು, ಜ 30 : ಆಧುನಿಕ ಜಗತ್ತಿನಲ್ಲಿ ವಿದ್ಯೆ ಜೊತೆಗೆ ಏಕಾಗ್ರತೆಯಿಂದ ಆಭ್ಯಾಸ ಮಾಡಿದರೆ ಮಾತ್ರ ಯಶಸ್ಸನ್ನು ಗಳಿಸಲು ಸಾಧ್ಯವೆಂದು ಎಸ್.ಜಿ.ಎಂ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಡಾ||.ಬಿ. ವೀರಭದ್ರಯ್ಯ ಸ್ವಾಮಿಜಿ ಅವರು ತಿಳಿಸಿದರು.

ಎಸ್.ಜಿ.ಎಂ ವಿದ್ಯಾಸಂಸ್ಥೆಯ ಪದವಿ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು . ಇಂದಿನ ಅಧುನಿಕ ಯುಗದಲ್ಲಿ ಶಿಕ್ಷಣಕ್ಕೆ ತುಂಬಾ ಪ್ರಾಮುಖ್ಯತೆಯಿದೆ. ಬುದ್ಧಿವಂತರು ಮಾತ್ರ ಈ ಒಂದು ಸ್ಪರ್ಧಾ ಜಗತ್ತಿನಲ್ಲಿ ಸರಾಗವಾಗಿ ಜೀವನ ನಡೆಸಲು ಸಾಧ್ಯವಾಗುತ್ತಿದೆ . ನಮ್ಮ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಸಂಸ್ಕøತಿ, ಸಂಪ್ರದಾಯ, ಮೌಲ್ಯಗಳನ್ನು ಕಲಿಸಲಾಗುತ್ತದೆ. ಮಕ್ಕಳ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತದೆ ಇಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಾಲೇಜಿಗೆ, ನಿಮ್ಮ ತಂದೆ- ತಾಯಿಗೆ, ಕೀರ್ತಿ ತರಬೇಕೆಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಓಬಯ್ಯ ಓ, ಉಪಾನ್ಯಾಸಕರಾದ ಶ್ರೀನಿವಾಸ್, ಅಜಯ್ ಕುಮಾರ್, ಬಸವರಾಜ್ .ಪಿ.ಜಿ. ಮುಕ್ಕಪ್ಪ , ನಾಗೇಶ್, ರಾಮಾಂಜಿನೇಯ, ಶಶಿಕಲಾ, ಬಸವರಾಜ್ ಡಿ. ಮತ್ತಿತರರು ಹಾಜರಿದ್ದರು.

ವರದಿ:ಶಿವಯೋಗಿ. ರಾಂಪುರ

LEAVE A REPLY

Please enter your comment!
Please enter your name here