ಮಾನವೀಯ ಸ್ಪಂದನೆಗೆ ಮನವಿ; ಆತ್ಮೀಯ ಸಂಗಾತಿಗಳೇ,

0
45

ಎಡ ಚಳುವಳಿಗೆ ಸದಾ ರಾಜ್ಯದ ತುಂಬೆಲ್ಲಾ ಸುತ್ತಾಡಿ ಬಣ್ಣ ಬಣ್ಣದ ಗೋಡೆ ಬರಹಗಳನ್ನು ಮಾಡುತ್ತಿದ್ದ ಸಂಗಾತಿ ಗಂಗಾವತಿಯ ‘ಪ್ರಕಾಶ್ ಚಿತ್ರಗಾರ್’ ಇವರಿಗೆ ಇತ್ತೀಚೆಗೆ ಅಪಘಾತವಾಗಿದೆ. ಇದರಿಂದ ಅವರ ಆರೋಗ್ಯದ ವೆಚ್ಚ ಭರಿಸಲೂ ಅವರ ಕುಟುಂಬ ತುಂಬಾ ಪರದಾಡುವಂತಾಗಿದೆ. ಈಗಾಗಲೇ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ವೈದ್ಯಕೀಯ ತಪಾಸಣೆ, ಔಷಧಿ, ಚಿಕಿತ್ಸೆ ಪಡೆಯಲಾಗಿದೆ. ಆದರೂ ಅವರ ಕಣ್ಣುಗಳಿಗಾದ ತೊಂದರೆಯನ್ನು ಸರಿಪಡಿಸಲು ವೈದ್ಯರು ಖಚಿತವಾದ ಅಭಿಪ್ರಾಯವನ್ನು ನೀಡುತ್ತಿಲ್ಲ. ಇವರನ್ನೇ ನಂಬಿ ಬದುಕುತ್ತಿರುವ ಇವರ ಕುಟುಂಬಕ್ಕೆ ಯಾರ ಆಸರೆಯೂ ಇಲ್ಲಾವಾಗಿದೆ. ಇಂತಹ ಈ ಬಡ ಕಲಾವಿದನ ನೋವಿನ ಸಂಧರ್ಭದಲ್ಲಿ ಮಾನವೀಯ ನೆಲೆಯಿಂದ ನಾವು ಇವರ ಕುಟುಂಬಕ್ಕೆ ಆಸರೆಯಾಗುವ ಒಂದು ಸಣ್ಣ ಪ್ರಯತ್ನ ನಮ್ಮದು.
ತಮ್ಮ ಮತ್ತು ತಮ್ಮ ಪರಿಚಿತರ ಮಧ್ಯೆ ಈ ಬಡ ಕಲಾವಿದನ ಹೆಚ್ಚಿನ ಚಿಕಿತ್ಸೆಗೆ ಸ್ವಲ್ಪವಾದರೂ ತಮ್ಮಗಳಿಂದ ಸಹಾಯ, ಸಹಕಾರವನ್ನು ನಿರೀಕ್ಷಿಸುತ್ತೇವೆ.

ಒಂದು ಕಾಲದಲ್ಲಿ ನಮ್ಮ ಚಳುವಳಿಯ ಕಾರ್ಯಕರ್ತನಾಗಿದ್ದು ನಮ್ಮ ಚಳುವಳಿಗೆ ಅಗಾಧವಾದ, ಕಾಲಾತ್ಮಕ ಗೋಡೆ ಬರಹಗಳ ಮೂಲಕ ಎಲ್ಲರ ಗಮನವನ್ನು ಸೆಳೆದು ಮೆಚ್ಚುಗೆಗೆ ಪಾತ್ರನಾಗಿದ್ದ ಸಂಗಾತಿಗೆ ಯಾರಾದರೂ ಮಾನವೀಯ ಹಿನ್ನಲೆಯಲ್ಲಿ ಸಹಾಯಮಾಡುವಂತಾಗಬೇಕು. ಇದು ಜನಪರ ಚಳುವಳಿಯ ಆದ್ಯ ಕತ್ಯರ್ವವೂ ಆಗಬೇಕಿದೆ. ವ್ಯಕ್ತಿ ನಾಯಕನಾದರೇ ಮಾತ್ರ ದೊಡ್ಡ ಮಟ್ಟದಲ್ಲಿ ಸಹಾಯ, ಸಹಕಾರ ಮಾಡಲು ಬರುತ್ತೇವೆ. ಆದರೆ ಸಾಮಾನ್ಯ ಕಾರ್ಯಕರ್ತನಾಗಿದ್ದರೆ ಅವರನ್ನು ಕೇಳುವವರೇ ಇರುವುದಿಲ್ಲ. ಒಂದು ಕಾಲದ ನಮ್ಮ ಚಳುವಳಿಯ ಜೊತೆಗಾನಾಗಿ ಈಗ ಬೇರೆ ಕಡೆ ಬದುಕು ನಡೆಸಲು ಹೋರಾಟ ಮಾಡುತ್ತಿದ್ದವರ ಕಥೆಯನ್ನು ಕೇಳುವುದೇ ಬೇಡ. ಇಂಥವರ ಕಷ್ಟವನ್ನು ಕೇಳುವ ವ್ಯವಧಾನವೇ ನಮ್ಮ ಚಳುವಳಿಯಲ್ಲಿ ಈಗ ಕಡಿಮೆಯಾಗುತ್ತ್ತಿದೆ. ಈ ತರಹದ ವರ್ತನೆಗಳೇ ನಮ್ಮ ಅನೇಕ ಜನಪರವಾದ ಚಳುವಳಿಯ ಕಾರ್ಯಕತರನ್ನು, ಹಿತೈಷಿಗಳನ್ನು ಧೂರ ಮಾಡಿಕೊಳ್ಳುತ್ತಿದ್ದೇವೆ. ಯಾವುದೇ ಒಂದು ಬಲಿಷ್ಠ ಜನಚಳುವಳಿಗೆ ಅದರ ಬೆಂಬಲಿಗರೂ, ಕಾರ್ಯಕರ್ತರೂ ಕೂಡ ಒಂದು ದೊಡ್ಡ ಶಕ್ತಿಯಾಗಿರುತ್ತಾರೆ. ಅಂಥವರನ್ನು ನಮ್ಮ ಜೊತೆಗೆ ಇದ್ದಾಗ ಬಳಸಿಕೊಂಡು ಬಿಸಾಕುವ ವರ್ತನೆ ಸರಿಯಲ್ಲ. ಅವರು ಸಹ ನಮ್ಮ ಕನಸುಗಳ ಜೊತೆಗೆ ಬೆಳೆದವರು. ಬದುಕು ಅವರನ್ನು ಬೇರೆ ರಂಗದತ್ತ ಕಳಿಸಿದ ಮಾತ್ರಕ್ಕೆ ಅವರ ಅಂತರ್ ಶಕ್ತಿಯೂ ನಮ್ಮದೇ ಆಗಿರುತ್ತದೆ. ಅವರು ಈಗ ಧೂರವಾದರೂ, ನಮ್ಮ ವಿರೋಧಿಗಳೇನಲ್ಲ ಎಂಬ ಸಾಮಾನ್ಯವಾದ ಜನಪರ ಕಾಳಜಿಯು ಈಗಿನ ನಮ್ಮ ಚಳುವಳಿಗೆ ಇಲ್ಲವಾಗಿದೆ. ಕಾಲ ಇದನ್ನು ಸಹಿಸದು. ನಾವು ತುಂಬ ಗಭೀರವಾದ ಮತೀಯವಾದಿ ಶಕ್ತಿಗಳ ಕಾಲಘಟ್ಟದಲ್ಲಿ ಇದ್ದೇವೆ. ಸಣ್ಣ ಸಣ್ಣ ವಿಚಾರಗಳ ವಿಭಜನೆಯನ್ನೇ ಮಾಡುತ್ತಾ ಕುಳಿತರೆ ಸಾಧ್ಯವಿಲ್ಲ. ನಾವು ವಿಶಾಲವಾದ, ಸಮನಾಂತರವಾದ ವಿಷಯಾಧಾರಿತವಾಗಿ ನಿಲ್ಲುವ ಕಾಲದ ಕರೆಯನ್ನು ಮರೆಯದೇ ‘ಪ್ರಕಾಶ್ ಚಿತ್ರಗಾರ್’ ರವರಿಗೆ ಈ ಸಣ್ಣ ಸಹಾಯವನ್ನು ಮಾಡುವುದರ ಮೂಲಕ ದುಡಿಯುವ ವರ್ಗದ ಶಕ್ತಿಯನ್ನು ಬಲಗೋಳಿಸಬೇಕಿದೆ.

ಈ ಹಿನ್ನಲೆಯಲ್ಲಿ ತಮ್ಮ ಒಂದು ತುಣುಕು ಸಹಾಯ ನಮಗೆ ಆನೆಯ ಬಲ ನೀಡುವಂತಾಗುತ್ತದೆ. ತಾವುಗಳು ಈ ವಿಷಯವನ್ನು ತಮ್ಮ ಫೇಸ್‌ಬುಕ್ ಮತ್ತು ವಾಟ್ಸಪ್ ಗುಂಪುಗಳಲ್ಲಿ ಕಡ್ಡಾಯವಾಗಿ ಹಂಚಿಕೊಳ್ಳುವ ಮುಖಾಂತರ ರಾಜ್ಯದ ಹೆಚ್ಚು ಜನರ ನಡುವೆ ಈ ಸಂದೇಶ ಮುಟ್ಟಿಸಲು ಸಹಾಯ ಮಾಡಿ. ತಮ್ಮ ಸಹಾಯ ನೀರೀಕ್ಷೇಯಲ್ಲಿ ತಮ್ಮ ಸಹಾಯಕ್ಕೆ : ಫೋನ್ ಪೇ : 6364181569 ನಂಬರ್‌ಗೆ ಕಳಿಸಿ, ತಾವುಗಳು ಕಳಿಸಿದ ಮಾಹಿತಿಯನ್ನು ಸ್ಕ್ರೀನ್ ಶಾಟ್ ತೆಗೆದು ಕಳಿಸಿ.

ವೀರಣ್ಣ ಕಲ್ಮನಿ ಬಾಚಿಗೊಂಡನಹಳ್ಳಿ, ಹುಳ್ಳಿ ಪ್ರಕಾಶ ವರದಾಪುರ, ಒಂಟಿಗೋಡಿ ತಿಂದಪ್ಪ ಕಡಲಾಬಾಳು, ಬಸವರಾಜ ಕಮ್ಮಾರ ರಾಮನಗರ ಹಾಗೂ ಉಸ್ಮಾನ್ ಬಾಷಾ ಅರಳಿಹಳ್ಳಿ ಮತ್ತು ವಿರುಪಾಕ್ಷ್ಷ ಹಂಪಸಾಗರ. ಹಗರಿಬೊಮ್ಮನಹಳ್ಳ್ಳಿ ತಾ, ವಿಜಯನಗರ ಜಿಲ್ಲೆ – 583212

LEAVE A REPLY

Please enter your comment!
Please enter your name here