ಇಂಗ್ಲೀಷ್ ಕಲಿತವರಿಂದಲೇ ನೈತಿಕ ಮೌಲ್ಯಗಳ ಕುಸಿತ ವೃದ್ದಾಶ್ರಮಗಳು ಹೆಚ್ಚಾಗಲಿಕ್ಕೆ ಕಾರಣ;ಕುಂ.ವೀ

0
247

ಕೊಟ್ಟೂರು:ಜೂನ್:26:-
ಇಂಗ್ಲೀಷ್ ಮಾದ್ಯಮದಲ್ಲಿ ಕಲಿತವರಿಂದಲೇ ನೈತಿಕ ಮೌಲ್ಯಗಳು ಕುಸಿತಕ್ಕೆ ಒಳಗಾಗಿದ್ದು ಸಂಬಂಧಗಳು ಸಂಪೂರ್ಣ ಹಾಳಾಗಿ ವೃದ್ದಾಶ್ರಮಗಳು ಹೆಚ್ಚಾಗಲಿಕ್ಕೆ ಕಾರಣವಾಗಿವೆ. ಇದು ನಿಜಕ್ಕೂ ಮುಂದುವರೆದ ಈ ದಿನಗಳಲ್ಲಿ ನಾಚಿಕೆ ಪಡುವಂತಹ ವಿಷಯವಾಗಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಬಾಲಾಜಿ ಕನ್ವೆಷನಲ್ ಹಾಲ್‌ನಲ್ಲಿ ಜೆಸಿಐ ಕೊಟ್ಟೂರು ಹಸಿರು ಹೊನಲು ತಂಡದವರ ಸಹಯೋಗದೊಂದಿಗೆ ಭಾನುವಾರ ಆಯೋಜನೆಗೊಂಡಿದ್ದ ಉಜ್ಜಿನಿ ರುದ್ರಪ್ಪ ಬರೆದಿರುವ ಅಮ್ಮ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಮಾತೃಭಾಷೆ ಕನ್ನಡದಲ್ಲಿ ಕಲಿತವರು ಸಂಸ್ಕೃತಿ ಸಂಬಂಧಗಳನ್ನು ಗಟ್ಟಿಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೆ ಉನ್ನತ ವಿದ್ಯಾಭ್ಯಾಸದ ಹೆಸರಿನಲ್ಲಿ ಇಂಗ್ಲೀಷ್ ಮಾಧ್ಯಮ ಕಲಿತ ಬಹುತೇಕರು ತಮ್ಮ ತಂದೆ –ತಾಯಿ ಬಂದುಬಳಗವನ್ನು ತೊರೆದು ಅನಾಥರನ್ನಾಗಿಸುವ ಮೂಲಕ ಕಲಿತ ಶಿಕ್ಷಣದ ಮೌಲ್ಯಕ್ಕೆ ದಕ್ಕೆ ತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ರಾಷ್ಟ್ರದಲ್ಲಿ ಈ ಮೊದಲು ಕೇವಲ 8000ಗಳಷ್ಟಿದ್ದ ವೃದ್ದಾಶ್ರಮಗಳು ಇದೀಗ 25ಸಾವಿರಕ್ಕೂ ಹೆಚ್ಚಾಗಿರುವುದು ನೋವಿನ ಸಂಗತಿ ಎಂದು ಅವರು ಹೇಳಿ ಕೊಟ್ಟೂರಿನಲ್ಲಿನ ಉತ್ತಂಗಿ ರುದ್ರಮ್ಮ ತನ್ನೆಲ್ಲಾ ಸರ್ವ ಭಾಗ್ಯವನ್ನು ತೊರೆದು ಅನಾಥರು ವೃದ್ಧರನ್ನು ಯಾವುದೇ ಸರ್ಕಾರದ ಹಂಗಿಲ್ಲದೆ ಪೋಷಣೆ ಮಾಡಿ ಆಶ್ರಯ ನೀಡಿರುವುದು ನಿಜಕ್ಕೂ ಮಾದರಿಯದು ಎಂದರು.

ಅಮ್ಮ ಪುಸ್ತಕ ಕೃತಿ ಪರಿಚಯ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಮರ್ಶಕ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ವೃದ್ಧರನ್ನು ಅರ್ಥಪೂರ್ಣವಾಗಿ ಸಾಕುತ್ತಿರುವ ಮಾತೆ ಉತ್ತಂಗಿ ರುದ್ರಮ್ಮ ಕುರಿತು ಪುಸ್ತಕ ಬಿಡುಗಡೆಯಾಗುತ್ತಿರುವುದು ನಿಜಕ್ಕೂ ಸಮಾಜಕ್ಕೆ ಉತ್ತಮ ಸಂದೇಶಕೊಡುವ ಕೆಲಸವಾಗಿದೆ ಎಂದರು.

ಹಲವು ಬಗೆಯ ಹಿರಿಮೆ ಗರಿಮೆಗಳನ್ನು ಹೊಂದಿರುವ ನಮ್ಮ ರಾಷ್ಟçದಲ್ಲಿ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನೋವಿನ ಸಂಗತಿ. ರುದ್ರಮ್ಮ ಮಾತೆಯ ಪುಸ್ತಕದಿಂದಾದರೂ ರೋಗಗ್ರಸ್ಥ ಸಮಾಜ ಸುಧಾರಣೆಯತ್ತ ಸಾಗಬೇಕಿದೆ ಎಂದರು.
ಹಿರಿಯ ವಕೀಲ ಎಂ.ಎಂ. ಜೆ ಸ್ವರೂಪಾನಂದ, ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಉತ್ತಂಗಿ ರುದ್ರಮ್ಮ,ನಿವೃತ್ತ ಮುಖ್ಯೋಪಾಧ್ಯಾಯ ರಾಜಣ್ಣ, ಬಿ.ಆರ್.ವಿಕ್ರಮ್, ಪೊಲೀಸ್ ಸರ್ಕಲ್ ಇನ್‌ಸ್ಪೆಕ್ಟರ್ ಸೋಮಶೇಖರ್ ಹೆಚ್. ಕೆಂಚಾರೆಡ್ಡಿ, ವೃಷಬೇಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಅಮ್ಮ ಕೃತಿಲೇಖಕ ಉಜ್ಜಿನಿ ರುದ್ರಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು.ನಾಗರಾಜ ಸ್ವಾಗತಿಸಿದರು. ಎಸ್.ಎಂ.ಗುರುಪ್ರಸಾದ ವಂದಿಸಿದರು. ಕಾವ್ಯ ನಿರೂಪಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here