ರಾಜ್ಯದ ವ್ಯಕ್ತಿಯೊಬ್ಬರು ದೆಹಲಿಯಲ್ಲಿ ಜಾಗೃತಿಗಾಗಿ ಮ್ಯಾರಥಾನ್ ನಡೆಸಿರುವುದು ಇದೇ ಪ್ರಥಮ- ಕೆ.ಸಿ.ನಾರಾಯಣ ಗೌಡ

0
691

ಬೆಂಗಳೂರು: ಅ 30, ನವದೆಹಲಿಯಲ್ಲಿ ಮತದಾನ ಜಾಗೃತಿಗಾಗಿ ವಿನೂತನ ಮ್ಯಾರಥಾನ್ ಮಾಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ರಾಜ್ಯ ರೇಷ್ಮೆ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಕೆ. ಸಿ. ನಾರಾಯಣ ಗೌಡ ರವರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಶಂಸಿಸಿದರು!

ಮೋಹನ್ ಕುಮಾರ್ ದಾನಪ್ಪ, ವಕೀಲರು ಬೆಂಗಳೂರು, ಇವರು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರ 72ನೇ ಜನ್ಮದಿನದ ಅಂಗವಾಗಿ ‘ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ’ ಎಂಬ ಶೀರ್ಷಿಕೆಯಡಿ ಎಲ್ಲಾ ರೀತಿಯ ಚುನಾವಣೆಗಳಲ್ಲಿ ರಾಷ್ಟ್ರದ ಜನರು ಮತದಾನ ಮಾಡುವಂತೆ ಜಾಗೃತಿ ಮೂಡಿಸಲು ದಿನಾಂಕ 17.09.22 ರಂದು ನವದೆಹಲಿಯ ಕರ್ನಾಟಕ ಭವನದಿಂದ ಕೆಂಪು ಕೋಟೆಯವರೆಗೂ ಬಲಗೈನಲ್ಲಿ ರಾಷ್ಟ್ರಧ್ವಜ, ಎಡಗೈಯಲ್ಲಿ ಕರ್ನಾಟಕ ರಾಜ್ಯ ಧ್ವಜವನ್ನು ಹಿಡಿದು 3 ಗಂಟೆಗಳ ಕಾಲ ತಡೆರಹಿತವಾಗಿ ಓಡುವ ಮೂಲಕ ವಿನೂತನ ಮ್ಯಾರಥಾನ್ ಮಾಡಿ ಜನರಲ್ಲಿ ಜಾಗೃತಿ ಮೂಡಿಸುವ ವಿನೂತನ ಪ್ರಯತ್ನ ಮಾಡಿರುವುದಕ್ಕೆ ಅಭಿನಂದನೆಗಳು.

ರಾಜ್ಯದ ವ್ಯಕ್ತಿಯೊಬ್ಬರು ಇಂತಹ ಜಾಗೃತಿಗಾಗಿ ಮ್ಯಾರಥಾನ್ ನಡೆಸಿರುವುದು ಇದೇ ಪ್ರಥಮ, ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ದಾಖಲೆಯಾಗಿರುವುದು ಹೆಮ್ಮೆಯ ಸಂಗತಿ. ಮುಂದೆಯೂ ಇವರು ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಅನೇಕ ವಿಭಿನ್ನ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ನಾಡಿನ ಯುವಜನತೆಗೆ ಸ್ಪೂರ್ತಿ/ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಾರೆಂದು ಆಶಿಸುತ್ತಾ, ಮೋಹನ್ ಕುಮಾರ್ ದಾನಪ್ಪ ಇವರ ಈ ಸಾಧನೆಗಾಗಿ ರಾಜ್ಯ ರೇಷ್ಮೆ ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಕೆ. ಸಿ. ನಾರಾಯಣ ಗೌಡ ರವರು ಮತ್ತೊಮ್ಮೆ ಶುಭ ಹಾರೈಸಿದ್ದಾರೆ

LEAVE A REPLY

Please enter your comment!
Please enter your name here