ನಟ ಪುನೀತ್ ರಾಜಕುಮಾರ್ ಪ್ರಥಮ ಪುಣ್ಯ ಸ್ಮರಣೆ;ತಾಳೂರು ಗ್ರಾಮದಲ್ಲಿ ರಕ್ತದಾನ ಶಿಬಿರ,

0
37

ಸಂಡೂರು:ಆ:30:- ತಾಲೂಕಿನ ತಾಳೂರು ಗ್ರಾಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹ ಘಟಕ ಬಳ್ಳಾರಿ, ಸಮುದಾಯ ಆರೋಗ್ಯ ಕೇಂದ್ರ ತೋರಣಗಲ್ ಮತ್ತು ತಾಳೂರು ಗ್ರಾಮ ಪಂಚಾಯಿತಿ ಹಾಗೂ “ಅಮ್ಮ ಸಂಸ್ಥೆ” ಇವರ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಆಧಾರಿತ ತಪಾಸಣೆ ಶಿಬಿರದ ಅಡಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಮತ್ತು ನೇತ್ರದಾನ ನೋಂದಣಿ ಮತ್ತು ಐಸಿಟಿಸಿ ಟೆಸ್ಟ್ ಹಾಗೂ NCD ಕ್ಲಿನಿಕ್ ನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ದೇಶಿಸಿ ಅಮ್ಮ ಸಂಸ್ಥೆಯ ಸ್ಥಾಪಕ ಎಮ್. ರುದ್ರಗೌಡ ಮಾತನಾಡಿ, ಗರ್ಭಿಣಿಯರು, ರೋಗಿಗಳು, ಅಪಘಾತ ಸಂಭವಿಸಿದ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದೆ ಇರುತ್ತದೆ, ಯುವಕರು ರಕ್ತದಾನ ಮಾಡಲು ಮುಂದೆ ಬರಬೇಕು, ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಪ್ರಾಣ ಉಳಿಸ ಬಹುದು, ನಟ ಪುನೀತ್ ರಾಜ್ ಕುಮಾರ್ ಅವರ ಜನಸೇವೆ, ವಿದ್ಯಾರ್ಥಿಗಳಿಗೆ, ಬಡವರಿಗೆ ಸಹಾಯ ಮಾಡುತ್ತಿದ್ದಿದ್ದು ಹಾಗೆ ನೇತ್ರ ದಾನ ಮಾಡಿದ ಮಾರ್ಗದ ಹಾಗೆ ಜೀವನದಲ್ಲಿ ಯುವಕರು ಅಳವಡಿಸಿ ಕೊಳ್ಳಬೇಕು, ಈ ಶಿಬಿರದ ಹೊರತಾಗಿ ನಿತ್ಯ ರಕ್ತದ ಅವಶ್ಯಕತೆ ಇರುವವರಿಗೆ ನಮ್ಮ ಗ್ರೂಪ್‌ನಿಂದ ರಕ್ತ ಪೂರೈಸುವ ಕಾರ್ಯ ಮಾಡುತ್ತಾ ಸಾಗಿದ್ದೇವೆ, ನಮ್ಮೊಂದಿಗೆ ಹಲವು ಯುವಕರು ಕೈಜೋಡಿಸಿದ್ದಕ್ಕೆ ನಮ್ಮ ಹಾದಿ ಸುಗಮವಾಗಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್ ಮಾತನಾಡಿ ಕೋವಿಡ್ ಸಮಯದಲ್ಲಿ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದು, ತಾಳೂರಿನಲ್ಲಿ 337 ಜನರಿಗೆ ಕೋವಿಡ್ ವ್ಯಾಕ್ಸಿನೇಷನ್‌ ಮಾಡಿಸಿದ್ದು ಹೆಮ್ಮೆ ತರುವ ವಿಷಯ ವಾಗಿತ್ತು ಎಂದು ನೆನಪು ಮಾಡಿಕೊಂಡರು,

ಶಿಬಿರದಲ್ಲಿ 68 ಯುವಕರು ರಕ್ತದಾನ ಮಾಡಿದರು, ಮತ್ತು 60 ವರ್ಷದ ಹಿರಿಯ ಮಹಿಳೆ ಸೇರಿ 13 ಜನರು ನೇತ್ರ ಹಾಗೂ ಇತರೆ ಅಂಗಾಂಗ ದಾನ ಮಾಡಿರು, ಇದರಲ್ಲಿ ಅಮ್ಮ ಸಂಸ್ಥೆ ಯ ಎಂ. ರುದ್ರಗೌಡ ಇವರ ಕುಟುಂಬದ ಐವರು ಸದಸ್ಯರು ಎಲ್ಲಾ ಅಂಗಾಂಗ ದಾನ ಮಾಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮತ್ತು ಸಿಬ್ಬಂದಿಯವರು ಅಮ್ಮ ಸಂಸ್ಥೆಯ ಸಂಸ್ಥಾಪಕರಿಗೆ ಗೌರವದಿಂದ ಸನ್ಮಾನ ಮಾಡಿದರು,

ಅಮ್ಮಾಸಂಸ್ಥೆ ಅಧ್ಯಕ್ಷರಾದ
ಎಂ. ಕವಿತಾರುದ್ರಗೌಡ, ಉಪಾಧ್ಯಕ್ಷ
ಜಿ.ರಾಘವೇಂದ್ರ, ಸಂಸ್ಥೆಯ ಸಂಸ್ಥಾಪಕ ಎಂ.ರುದ್ರಗೌಡ, ಪ್ರಧಾನ ಕಾರ್ಯದರ್ಶಿಗಳು,
ಆರ್. ಶಿವಪ್ರಸಾದ್, ಎನ್.ಶಂಕರ್ ಮೂರ್ತಿ, ಅಜ್ಜಯ್ಯ, ಎಸ್.ರುದ್ರಮ್ಮಪಂಪಾಪತಿ, ತಿಪ್ಪೇಸ್ವಾಮಿ, ಚಂದ್ರಶೇಖರ್, ವಿ.ನಬ್ಹೀಸಾಬ್, ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಗೋಪಾಲ್ ರಾವ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಐ.ಸಿ.ಟಿ.ಸಿ ಕೌನ್ಸಿಲರ್ ಶ್ರೀರಾಮ್, ಎನ್.ಸಿ.ಡಿ ಕೌನ್ಸಿಲರ್ ಯಂಕಪ್ಪ, ವಿಮ್ಸ್ ನ ಸಿಬ್ಬಂದಿ ರಘು,ಸಂತೋಷ್, ಕೃಪಾವತಿ,ಸರಸ್ವತಿ, ಮತ್ತು ಅರೋಗ್ಯ ಸಿಬ್ಬಂದಿಯವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here